ಕಲಬುರಗಿ: ಜನವಾದಿ ಮಹಿಳಾ ಸಂಘಟನೆ,ಎಸ್ ಎಫ್ ಆಯ್, ಡಿ ವಾಯ್ ಎಫ್ ಆಯ್, ಪ್ರಾಂತ ರೈತ ಸಂಘ,ಕೃಷಿ ಕೂಲಿಕಾರರ ಸಂಘ, ಸಿ ಆಯ್ ಟಿ ಯು, ದೇವದಾಸಿ ನಿರ್ಮೂಲನಾ ಸಮಿತಿ, ಮುಂತಾದ ಸಂಘಟನೆಗಳು ಸೇರಿ ಅಪ್ಪಾ ಸೆಂಟನರಿ ಸಭಾ ಮಂಟಪದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ದೆಹಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಯಂ ಧಾವಳೆ ಮಾತನಾಡಿ ಮೋದಿ ಸರಕಾರ ಮಹಿಳೆಯರ ಸ್ಥಿತಿಯನ್ನು ದಿನದಿಂದ ದಿನಕ್ಕೆ ಶೋಚನೀಯಗೊಳಿಸುತ್ತಿದೆ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಲಂಗು ಲಗಾಮವಿಲ್ಲದೆ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಸರಕಾರ ರೇಪಿಸ್ಟ್ ರನ್ನು ರಕ್ಷಿಸಿಕೊಳ್ಳುತ್ತಿದೆ. ಮತ್ತು ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಖೇದ ವ್ಯಕ್ತಪಡಿಸಿದರಲ್ಲದೆ ಬರುವ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು ಎಂದರು.
ಅಬ್ ಕೆ ಬಾರ್ ಚಾರಸೋ ಸೀಟ್ ಪಾರ್ ಅಲ್ಲ ;ಅಬ್ ಕೆ ಬಾರ್ ತಡಿಪಾರ್ ಮೋದಿ ಸರಕಾರವನ್ನು ಮಹಿಳೆಯರು ಸೋಲಿಸದಿದ್ದರೆ ನಮಗೆ ಉಳಿಗಾಲ ಎಂದು ಹೇಳಿದರು.
ನಂತರ ಅತಿಥಿಗಳಾಗಿ ಆಗಮಿಸಿದ ಡಾ ಇಂದುಮತಿ ಪಾಟೀಲ ಅವರು ಮಾತನಾಡಿ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ. ಮನೆ ,ನೌಕರಿ, ಸಮಾಜ,ಸಂಘಟನೆ ಎಲ್ಲವನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದೇವೆ. ಮುಂದೆಯೂ ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಮುಖ್ಯ ಭಾಷಣಕಾರರಾಗಿ ಸಿ ಆಯ್ ಟಿ ಯು ನ ರಾಜ್ಯ ಅಧ್ಯಕ್ಷರಾದ ವರಲಕ್ಷ್ಮೀ ಅವರು ಗೆಳತಿಯರೆ ನಾವು ಮಹಿಳೆಯರು ಯಾವತ್ತೂ ಸೇವೆ ಮಾಡಲು ಹುಟ್ಟಿದವರು ಎಂದು ಮನುವಾದ ಹೇಳುತ್ತದೆ. ಅದನ್ನೆ ಮೋದಿ ಸರಕಾರ ಖಾಯಂಗೊಳಿಸಲು ಹೊರಟಿದೆ. ಸಮಾಜದಲ್ಲಿ ಜಡ್ಡುಗಟ್ಡಿರುವ ಈ ಮಹಿಳಾ ವಿರೋಧಿ ನಂಬಿಕೆಯನ್ನು ಕಿತ್ತೆಸೆಯಬೇಕು. ಅಂದಾಗಲೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ ನೀಲಾ ಅವರು ಮಹಿಳಾ ದಿನಾಚರಣೆ ಎಂದರೆ ಸಂಪ್ರದಾಯವಲ್ಲ. ಗತಾನುಗತಿಕ ಆಚರಣೆಯಲ್ಲ. ಸಮರಧೀರ ಹೋರಾಟ ಮಾಡಿ ಎಂಟು ತಾಸು ಮಾತ್ರ ದುಡಿಮೆ. ಮತದಾನದ ಹಕ್ಕು, ಹೆರಿಗೆ ರಜೆ,ಭತ್ಯೆ ಇತ್ಯಾದಿಗಳನ್ನು ಪಡೆದ ದಿನವಾಗಿದೆ. ಲಿಂಗ ಸಮಾನತೆ ನೆಲೆಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.
ಮೋದಿ ಸರಕಾರ ಮಹಿಳೆಯರನ್ನು ಧರ್ಮ,ಜಾತಿ, ದೇವರು ದಿಂಡರ ಹೆಸರಿನಲ್ಲಿ ಒಡೆಯುತ್ತಿದೆ. ಆದರೆ ನಾವು ಭಾರತೀಯರನ್ನು ಛಿದ್ರವಾಗಲು ಬಿಡುವುದಿಲ್ಲ. ಕೋಮುವಾದಿ ಸರಕಾರ ಕಿತ್ತೆಸೆಯುವ ಸಂಕಲ್ಪ ಮಾಡುವುದರ ಮೂಲಕ ಈ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸೋಣ ಎಂದು ಕರೆಕೊಟ್ಟರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ ಮೀನಾಕ್ಷಿ ಬಾಳಿಯವರು ಅಸದಳ ಸಂಕಟಗಳ ಮಧ್ಯೆಯು ಮಹಿಳಾ ಧೀಶಕ್ತಿ ಪುಟಿದೇಳುತ್ತದೆ. ಇಂದು ಸಂತ ಶರಣ ಸೂಫಿಗಳ ನಾಡು. ೧೨ ನೇ ಶತಮಾನದ ಶರಣೆ ನೀಲಾಂಬಿಕೆ ಹೇಳಿದಂತೆ ನಾವು ಹೇಡಿಗಳಲ್ಲ,ಹರುಷದ ಧೈರ್ಯಯುಳ್ಳ ಹೆಣ್ಣು ನಾವು ಎಂದರು. ಪ್ರಾರಂಭದಲ್ಲಿ ಅಂಗನವಾಡಿ ಮುಖಂಡರಾದ ಶಾಂತಾ ಘಂಟೆ ಸ್ವಾಗತ ಕೋರಿದರು.
ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲೆ ಅವರು ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಮುಖಂಡರುಗಳಾದ ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ, ರಾಜಮತಿ ಇಕ್ಕಳಕಿ, ನಂದಾ ಮಂಗೋಂಡಿ, ಚಂದ್ರಕಲಾ ಸರಸಂಬಾ, ಎಂ ಬಿ ಸಜ್ಜನ, ವಿಜಯಲಕ್ಷ್ಮೀ ಹಿರೇಮಠ, ಶರಣಬಸಪ್ಪ ಮಮಶೆಟ್ಟಿ, ಸಾಯಬಣ್ಣಾ ಗುಡುಬಾ,ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್, ಸುಜಾತಾ ಕುಸನೂರ ಮುಂತಾದವರು ಉಪಸ್ಥಿತರಿದ್ದರು.ಕೊನೆಯದಾಗಿ ಲವಿತ್ರ ವಸ್ತ್ರದ ಅವರು ನಿರ್ವಹಣೆ ಮಾಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…