ಕಲಬುರಗಿ: ಕಥಾ ಬರಹದಲ್ಲಿ ಇಂದಿನ ಹೊಸ ಪೀಳಿಗೆ ಆಸಕ್ತಿ ತೋರಬೇಕು ಎಂಬ ದೃಷ್ಠಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಒಂದು ದಿನದ ಕಥಾ ಕಮ್ಮಟ-2024 ನ್ನು ನಡೆಸುವ ಮೂಲಕ ವಿನೂತನ ಹೊಸ ಹೆಜ್ಜೆ ಇಟ್ಟಿದೆ.ಕಮ್ಮಟ ಉದ್ಘಾಟಿಸಿದ ಹಿರಿಯ ಕಥೆಗಾರರೂ ಆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯ ಸಿದ್ಧರಾಮ ಹೊನ್ಕಲ್ ಮಾತನಾಡಿದರು.
ಈ ಭಾಗದಲ್ಲಿ ಕಥೆಗಾರರ ಕೊರತೆಯಿಲ್ಲ. ಅವರಿಗೆ ಬರವಣಿಗೆಯ ಕಲೆಯ ಕೊರಗು ಕಾಡುತ್ತಿದೆ. ಒಬ್ಬ ಕಥೆಗಾರ ಮತನ್ನ ಸುತ್ತಲಿನ ಹಂದರವನ್ನು ಅಕ್ಷರ ರೂಪದಿಂದ ಹೆಣೆದಾಗ ಆಸಕ್ತಿಯಿಂದ ಓದಲು ಸಾಧ್ಯ. ನಾವು ಬದುಕುವ ರೀತಿ ಕಥೆಯಾಗಿ ಕಾಡಬೇಕು ಮತ್ತು ನಮ್ಮ ಭಾವನೆಗಳು ಕಥೆಯಾದಾಗ ಮನಸ್ಸಿಗೆ ನಾಟುತ್ತವೆ. ನಾವೆಲ್ಲರೂ ಕಥೆಗಾರರು , ಸುಂದರ ಶೈಲಿಯ ಅಭಿವ್ಯಕ್ತಿ ಇಡೀ ಕಥಾ ವಸ್ತು ನಿರಂತರವಾಗಿ ಓದಿಸಿಕೊಂಡು ಹೋಗುತ್ತದೆ. ಜೀವನದ ಸ್ವಾನುಭವ ಮತ್ತು ಅನುಭವ ಮುಖ್ಯ. ಭಾವನೆಗಳು ಬಿಂಬವಾಗಿ ಕಾಡಬೇಕು. ಆಗ ಕಥೆ ನಮ್ಮೊಳಗೆ ಹುಟ್ಟುತ್ತದೆ ಎಂದರು.
ಪ್ರಾಚೀನ ಕಾಲದಿಂದಲೂ ಅನೇಕ ಕಥೆಗಳು ಹುಟ್ಟುತ್ತಲೇ ಬಂದಿವೆ. ಅವು ನಮ್ಮ ಜೀವನದ ಪ್ರತಿಬಿಂಬಗಳು ಎಂದ ಅವರು, ಕಲ್ಯಾಣ ನಾಡಿನ ಯುವ ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯವಿದೆ.ಇಲ್ಲಿಯ ಬರಹಗಾರರ ಎಲ್ಲಾ ಕೃತಿಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಆಯ್ಕೆ ಮಾಡುವಲ್ಲಿ ಮುತುರ್ವಜಿ ವಹಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಯುವ ಪೀಳಿಗೆ ಇಂದಿನ ದಿನಮಾನಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಸಮಯ ವಿನಿಯೋಗಿಸುವುದನ್ನು ಬಿಟ್ಟು ಸಾಹಿತ್ಯ, ಸಾಂಸ್ಕøತಿಕ ವಿಚಾರಗಳ ಕಡೆ ಒಲವು ಮೂಡಿಸಬೇಕಾಗಿದೆ. ಯುವ ಪೀಳಿಗೆ ಆಸಕ್ತಿ, ತಾಳ್ಮೆ, ಶ್ರದ್ಧೆಯಿಂದ ಸಾಹಿತ್ಯದ ಅಧ್ಯಯನ ಮಾಡಿದಲ್ಲಿ ಸಾಹಿತಿಗಳು ಕಥೆ, ಕಾವ್ಯ, ಕಾದಂಬರಿ ರಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯ ಪರಿಷತ್ತು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಡುತ್ತಿದೆ.
ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪೂರ, ಪಿಡಿಓ ರಾಜೇಶ್ವರಿ ಸಾಹು ವಾಡಿ, ಶಿಕ್ಷಣ ಇಲಾಖೆಯ ವಿ.ಎಂ.ಪತ್ತಾರ, ಕಮ್ಮಟದ ಸಂಚಾಲಕರಾದ ಶಿವರಾಜ ಅಂಡಗಿ, ಶರಣರಾಜ್ ಛಪ್ಪರಬಂದಿ, ಧರ್ಮಣ್ಣ ಎಚ್ ಧನ್ನಿ ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ಎಂ ಎನ್ ಸುಗಂಧಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಶಿಲ್ಪಾ ಜೋಶಿ ಅನೇಕರು ವೇದಿಕೆ ಮೇಲಿದ್ದರು.
ನಂತರ ನಡೆದ ಗೋಷ್ಠಿಗಳಲ್ಲಿ ಕಥಾ ಸಾಹಿತ್ಯದ ತತ್ವ-ಸತ್ವ-ಮಹತ್ವ ಕುರಿತು ಡಾ. ಸ್ವಾಮಿರಾವ ಕುಲಕರ್ಣಿ, ಕಥಾ ಸಾಹಿತ್ಯದ ಶೈಲಿ-ತಂತ್ರ ಕುರಿತು ಹಿರಿಯ ಕಥೆಗಾರ ಡಾ. ಕೆ.ಎಸ್. ನಾಯಕ್, ಕಥಾ ಸಾಹಿತ್ಯದ ಸ್ವರೂಪ-ವಸ್ತು-ಭಾಷೆ ಕುರಿತು ಪ್ರಾಧ್ಯಾಪಕಿ ಡಾ. ಪುಟ್ಟಮಣಿ ದೇವಿದಾಸ, ಕಥಾ ಸೃಷ್ಠಿಗೆ ಬೇಕಾದುದೇನು? ವಿಷಯದ ಕುರಿತು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿದರು.
ಪ್ರೊ. ನೀಲಕಂಠ ಕಣ್ಣಿ, ಧರ್ಮರಾಯ ಜವಳಿ, ಸಿದ್ಧರಾಮ ಸಿ ಸರಸಂಬಿ, ಈರಯ್ಯಾ ಹಿರೇಮಠ, ಬಿ.ಜಿ. ಪಾಟೀಲ, ಸಂಜೀವಕುಮಾರ ಡೊಂಗರಗಾಂವ, ಸಚೀನಕುಮಾರ ಮಣೂರೆ, ಸಂಜೀವ ಟಿ ಮಾಲೆ, ಡಾ. ರಾಜಶೇಖರ ಮಾಂಗ್, ಚನ್ನಮಲ್ಲಯ್ಯ ಹಿರೇಮಠ, ಭಾಗ್ಯಲತಾ ಶಾಸ್ತ್ರೀ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ನಾಡಿನ ಹಿರಿಯ ಕಥೆಗಾರ ಡಾ. ಬಾಳಾಸಾಹೇಬ ಲೋಕಾಪೂರ ಅವರು ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ, ಜೀವನದಲ್ಲಿ ಹುದುಗಿರುವ ಅನೇಕ ಕಥೆಗಳು ನಮ್ಮೊಂದಿಗೆ ಹಾಸು ಹೊಕ್ಕಾಗಿವೆ.
ಅವುಗಳನ್ನು ಕಲಾತ್ಮಕವಾಗಿ ನಿರೂಪಿಸಿದಾಗ ಸಂವೇದನಾಶೀಲ ಕಥೆಯಾಗಿ ಸಮಾಜಮುಖಿಯಾಗಿ ಸಾಹಿತ್ಯವಾಗಿ ರೂಪುಗೊಳ್ಳಲು ಸಾಧ್ಯ. ಕಥೆಗಳನ್ನು ಹುಡುಕಿಕೊಂಡು ಹೋಗುವುದು ಬೇಡ. ಅನೇಕ ಜೀವಂತ ಕಥೆಗಳು ನಮ್ಮ ಜೊತೆಯಲ್ಲಿ ಸಾಗುತ್ತವೆ. ಅವುಗಳಿಗೆ ಅಕ್ಷರರೂಪ ಕೊಟ್ಟು ಓದುಗರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆಗ ಅದು ಸಂವೇದನಾಶೀಲ ಕಥೆಯಾಗುತ್ತದೆ. ಕಥಾ ವಸ್ತು ಆಯ್ಕೆ, ಅಭಿವ್ಯಕ್ತಿಯ ಶೈಲಿ ಹಾಗೂ ಸಮಜಕ್ಕೆ ನಿಡುವ ಸಂದೇಶಗಳಿದ್ದರೆ ಅಂಥ ಕಥೆಗಳು ಜೀವಂತವಾಗಿರುತ್ತವೆ ಎಂದರು.
ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಳ್ಳಿ ಮಾತನಾಡಿ, ಸಾಹಿತ್ಯ ಸಮಾಜದ ಕೈಗನ್ನಡಿಯಾಗಿರಬೇಕು. ಸಾಹಿತ್ಯದಿಂದ ಮಾತ್ರ ಸಾಮಾಜಿಕ ಸಾಮರಸ್ಯ ಮೂಡಲು ಸಾಧ್ಯ ಎಂದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…