ಭಾರತ ದೇಶಕ್ಕೆ ಮೋದಿ ಅನಿವಾರ್ಯ: ಡಾ. ಉಮೇಶ್ ಜಾಧವ್

ಕಲಬುರಗಿ: ಭಾರತದ ಈಗಿನ ಸ್ಥಿತಿಯನ್ನು ಗಮನಿಸಿದರೆ ನರೇಂದ್ರ ಮೋದಿಯವರು ಈ ದೇಶಕ್ಕೆ ಅತ್ಯಂತ ಅನಿವಾರ್ಯ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.

ಉತ್ತರ ವಿಧಾನಸಭಾ ಕ್ಷೇತ್ರದ ಬ್ಯಾಂಕ್ ಕಾಲೋನಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ ದೇಶದಲ್ಲಿ ಸುರಕ್ಷತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಮೋದಿಯವರು ಈ ದೇಶಕ್ಕೆ ಅನಿವಾರ್ಯ. ಉದಯ ಸ್ಟಾಲಿನ್ ಹಿಂದೂ ಧರ್ಮವನ್ನು ಕ್ಯಾನ್ಸರ್, ಮಲೇರಿಯಾ, ಡೆಂಗ್ಯೂ ಎಂದು ಹೇಳಿ ಅಪಮಾನ ಮಾಡಿದಾಗ ಕಲ್ಬುರ್ಗಿಯ ಉಸ್ತುವಾರಿ ಸಚಿವರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ಬೇರೆ ಯಾವುದೇ ಧರ್ಮವನ್ನು ಈ ರೀತಿಯಾಗಿ ಹೇಳಿದರೆ ಸುಟ್ಟುಬಿಡುತ್ತಿದ್ದರು.

ದೇಶದಲ್ಲಿ ಭಯದ ವಾತಾವರಣವಿದ್ದು ನೆಮ್ಮದಿಯ ಬದುಕನ್ನು ಕಸಿದುಕೊಂಡ ಸ್ಥಿತಿಯಲ್ಲಿ ಜೀವನ ಮಾಡುವಂತಾಗಿದ್ದು ಇದರಿಂದ ಪಾರಾಗಲು ಹಾಗೂ ನಮ್ಮ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಮೋದಿ ಅತ್ಯಂತ ಅನಿವಾರ್ಯ. ಅದಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸುವುದರ ಮೂಲಕ ಸುಭದ್ರ ದೇಶ ಕಟ್ಟಲು ಮತದಾರರು ಕೈಜೋಡಿಸಬೇಕು ಎಂದು ಹೇಳಿದರು.

ಮೋದಿ ಕೊಡುಗೆ ಏನು? ಜಾಧವ್ ಕೊಡುಗೆ ಏನು? ಎಂದು ಪ್ರಶ್ನಿಸುತ್ತಿರುವ ಕಾಂಗ್ರೆಸಿಗರಿಗೆ ಕಳೆದ ಐದು ವರ್ಷದಲ್ಲಿ ಮಾಡಿದ ಯಾವುದೇ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತಿಲ್ಲ.ಕಲ್ಬುರ್ಗಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು, ವಾರದಲ್ಲಿ ಮೂರು ದಿನ ರೈಲು, ಅಮೃತ್ ಭಾರತ ಯೋಜನೆ ಅಡಿಯಲ್ಲಿ ವಾಡಿ ಶಹಬಾದ್, ಕಲ್ಬುರ್ಗಿ, ಸ್ಟೇಷನ್ ಗಾಣಗಾಪುರ ರೈಲ್ವೆ ನಿಲ್ದಾಣ ಗಳನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ, ಹುಮ್ನಾಬಾದ್ ಬೇಸ್ ನಿಂದ ರಾಮ ಮಂದಿರದವರೆಗಿನ ಸರ್ವಿಸ್ ರಸ್ತೆ, ಕಲ್ಬುರ್ಗಿಯಲ್ಲಿ ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ ಮೆಗಾ ಜವಳಿ ಪಾರ್ಕ್ ಆರಂಭ ಇಂತಹ ಯಾವುದೋ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ. ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ಕಲ್ಬುರ್ಗಿಯ ರೈತರು ಯಾವತ್ತೂ ಋಣಿಯಾಗಿರಬೇಕು. ಚಿಂಚೋಳಿ ಯಲ್ಲಿ ಇಥೆನಾಲ್ ಸಕ್ಕರೆ ಕಾರ್ಖಾನೆಯನ್ನು 600 ಕೋಟಿ ರೂಪಾಯಿ ಬಂಡವಾಳ ಹೂಡಿ ಅವರು ಪ್ರಾರಂಭಿಸಿ 10 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.

ಕಾಳಗಿ, ಚಿತ್ತಾಪುರ ಗ್ರಾಮದ ಕಬ್ಬು ಬೆಳೆಗಾರರಿಗೆ ಇದು ವರದಾನವಾಗಿದೆಕಾಂಗ್ರೆಸ್ ಸರ್ಕಾರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮೀನಮೇಷ ಎಣಿಸಿತ್ತು. ಅಭಿವೃದ್ಧಿಯನ್ನು ಮಾಡದೆ ಜನರಿಗೆ ಮೋಸ ಮಾಡಿದ ಕಾಂಗ್ರೆಸ್ ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದೆ.

ಈಗ ಭಯದ ವಾತಾವರಣವನ್ನು ಸೃಷ್ಟಿಸಿ ರಾಜ್ಯವನ್ನು ಅಶಾಂತಿಯ ರಾಜ್ಯವನ್ನಾಗಿ ಮಾಡಿದ ಕಾಂಗ್ರೆಸ್ಸಿಗೆ ಈ ಬಾರಿ ಬುದ್ಧಿ ಕಲಿಸಬೇಕಾಗಿದೆ. ಎಲ್ಲರೂ ಮೇಳರಂದು ಬೆಳಗ್ಗೆ ಪೂಜೆ ಮಾಡಿ ಮತಗಟ್ಟೆಗೆ ತೆರಳಿ ಶೇಕಡ ನೂರರಷ್ಟು ಮತದಾನ ಮಾಡಿ ಕಮಲದ ಗುರುತಿಗೆ ಮತ ಹಾಕುವ ಮೂಲಕ ರಾಷ್ಟ್ರದ ಸುರಕ್ಷತೆಗೆ ಮತ್ತು ನೆಮ್ಮದಿಯ ಜೀವನಕ್ಕಾಗಿ ಬೆಂಬಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಬಸವನಗೌಡ ಪಾಟೀಲ ಯತ್ನಾಳ್, ಬಿಜೆಪಿ ನಗರ ಅಧ್ಯಕ್ಷರಾದ ಚಂದು ಪಾಟೀಲ್ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ ಶಿವಾನಂದ ಪಿಸ್ತಿ ರಾಜಶೇಖರ್ ಬೊಮ್ಮನಳ್ಳಿ ಡಾಕ್ಟರ್ ಇಂದಿರಾ ಶಕ್ತಿ ಸಿದ್ದರಾಮ ಪಾಟೀಲ್ ಅರವಿಂದ ಚಿಕತವರ್, ರವಿ ಜಮಾದಾರ್ ವರದಶಂಕರ ಶೆಟ್ಟಿ, ಅಶೋಕ್ ಮಾನಕರ, ಸಾವಿತ್ರಿ ಕಳಸ್ಕರ್, ಶಿವಾನಂದ ಕಲಶೆಟ್ಟಿ, ಶಿವಪುತ್ರಪ್ಪ ಮಡಕಿ ಮತ್ತಿತರರು ಹಾಜರಿದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

3 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

4 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

6 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

17 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

19 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420