ವಾಡಿ-ನಾಲವಾರ ಶಾಂತಿಯುತ ಮತದಾನ: ಮತಗಟ್ಟೆಗಳಿಗೆ ಎಸ್‍ಯುಸಿಐ ಅಭ್ಯರ್ಥಿ ಶರ್ಮಾ ಭೇಟಿ

ವಾಡಿ: ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣ, ರಾವೂರ, ಯಾಗಾಪುರ ಹಾಗೂ ನಾಲವಾರ ವಲಯಗಳಲ್ಲಿ ಶಾಂತಿಯುತ ಮತದಾನವಾಗಿದೆ. ಬೆಳಗ್ಗೆಯೇ ಮತದಾನ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದ ಮತದಾರರು,

ಬಿರುಬಿಸಿಲು ಲೆಕ್ಕಿಸದೆ ಉತ್ಸಾಹದಿಂದ ಮತದಾನ ಮಾಡುತ್ತಿದ್ದದ್ದು ಕಂಡು ಬಂದಿತು. ಬಿಸಿಗಾಳಿ ಮತಗಟ್ಟೆ ಕೇಂದ್ರ ಸಿಬ್ಬಂದಿಗಳ ಬೆವರಿಳಿಸಿದರೆ, ಬಿಸಿಲು ಮತದಾರರು ಬಿಸಿಯುಸಿರು ಚೆಲ್ಲುವಂತೆ ಮಾಡಿತು. ಯಾವೂದೇ ಮತದಾನ ಕೇಂದ್ರಗಳಲ್ಲಿ ಗದ್ದಲ ಗಲಾಟೆ ಉಂಟಾಗದೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.

ಮದ್ಯಾಹ್ನ ರಣಬಿಸಿಲಿಗೆ ತುಸು ನೀರಸ ಪ್ರಕ್ರಿಯೆ ವ್ಯಕ್ತವಾದರೆ, ಸಂಜೆ ಮತ್ತೆ ಮತಕೇಂದ್ರಗಳು ಜನರಿಂದ ಕಿಕ್ಕಿರಿದಿದ್ದವು. ಸಚಿವ ಪ್ರಿಯಾಂಕ್ ಖರ್ಗೆ ಅವರು ಲಾಡ್ಲಾಪುರ ಗ್ರಾಮದ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಸುವ್ಯವಸ್ಥೆ ಅವಲೋಕಿಸಿದರು.

ನೆರಳಿನ ವ್ಯವಸ್ಥೆ ಮಾಡದ್ದಕ್ಕೆ ಬಿಜೆಪಿ ಆಕ್ರೋಶ: ವಾಡಿ ಪುರಸಭೆ ವ್ಯಾಪ್ತಿಯ ಕೆಲ ಮತದಾನ ಕೇಂದ್ರಗಳಿಗೆ ಅಗತ್ಯ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಒದಗಿಸದ ಕಾರಣ ಬೆಳಗ್ಗೆ ಮತದಾರರು ಬಿಸಿಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ಪ್ರಸಂಗಗಳು ಕಂಡು ಬಂದವು. ಸುದ್ದಿ ತಿಳಿದು ವಿ.ಪಿ.ನಾಯಕ ಪದವಿಪೂರ್ವ ಕಾಲೇಜು ಮತಗಟ್ಟೆಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮತಗಟ್ಟೆ ಮೇಲ್ವಿಚಾರಕರ ವಿರುದ್ಧ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.

ಸಮಪರ್ಕವಾಗಿ ಕುಡಿಯುವ ನೀರು, ನೆರಳು ಹಾಗೂ ಫ್ಯಾನ್ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಮತದಾರರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ಕಾಲೇಜು ಮತಗಟ್ಟೆಗೆ ಪುರಸಭೆ ಅಧಿಕಾರಿಗಳು ಶಾಮಿಯಾನ ಹಾಕಿಸಿ ನೆರಳಿನ ವ್ಯವಸ್ಥೆ ಮಾಡಿದ್ದರಾದರೂ ಅದು ಮತದಾರರ ಅನುಕೂಲಕ್ಕೆ ಇರಲಿಲ್ಲ. ಬಿಜೆಪಿ ಮುಖಂಡರ ಟೀಕೆಯಿಂದ ಎಚ್ಚೆತ್ತ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ ತಕ್ಷಣ ನೆರಳಿನ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಿದರು.

ಎಸ್‍ಯುಸಿಐ ಅಭ್ಯರ್ಥಿ ಭೇಟಿ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಎಸ್.ಎಂ.ಶರ್ಮಾ ಅವರು ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಪರಿಶೀಲಿಸಿದರು. ಹಳಕರ್ಟಿ, ವಾಡಿ, ಶಹಾಬಾದ, ರಾವೂರ, ಲಾಡ್ಲಾಪುರ ಗ್ರಾಮಗಳಲ್ಲಿ ಸಂಚರಿಸಿ ಗಮನ ಸೆಳೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎಂ.ಶರ್ಮಾ, ಇದು ಬಂಡವಾಳಶಾಹಿ ಶೋಷಕರ ಪರವಾದ ಪಕ್ಷಗಳ ನಡುವಿನ ಪೈಪೋಟಿಯ ಚುನಾವಣೆಯಾಗಿದೆ. ಸಾಕಷ್ಟು ಹಣ ಹೆಂಡ ಹಂಚಿ ಮತದಾರರನ್ನು ಸೆಳೆಯುವ ಕಸರತ್ತು ಎರಡೂ ಪಕ್ಷಗಳು ನಡೆಸಿವೆ. ಎಸ್‍ಯುಸಿಐ ಪಕ್ಷ ಮಾತ್ರ ಜನರಿಂದ ಹಣ ಸಂಗ್ರಹಿಸಿ ಚುನಾವಣೆ ಎದುರಿಸಿದೆ. ನಮ್ಮ ಪಕ್ಷ ಪ್ರಜಾಪ್ರಭುತ್ವ ಆಧಾರದ ನಿಷ್ಪಕ್ಷಪಾತವಾದ ಚುನಾವಣೆ ಬಯಸುತ್ತದೆ.

ಜನರ ತಲೆಯಲ್ಲಿ ದೇವರು, ಜಾತಿ, ಧರ್ಮದ ಹುಳ ಬಿಟ್ಟು ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಪಕ್ಷಗಳಿಂದ ಬಡತನ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ನಾವು ಚುನಾವಣೆಯನ್ನು ಹೋರಾಟದ ಭಾಗವಾಗಿ ಸ್ವೀಕರಿಸಿದ್ದೇವೆ. ಭ್ರಷ್ಟ ರಾಜಕೀಯ ಪಕ್ಷಗಳ ಜನವಿರೋಧಿ ನಿಲುವುಗಳನ್ನು ಜನರಿಗೆ ತಿಳಿಸಿದ್ದೇವೆ.

ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಜನರನ್ನು ಒಡೆದು ತುಳಿಯುವ ಕಾರ್ಯವನ್ನೇ ಮಾಡಿಕೊಂಡು ಬಂದಿವೆ. ಜನತೆಗೆ ಪರ್ಯಾಯ ಶಕ್ತಿ ಬೇಕಿದೆ. ಆ ಶಕ್ತಿ ಎಸ್‍ಯುಸಿಐ ಪಕ್ಷ ಎಂಬ ಅರಿವು ಮಾತ್ರ ಮೂಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶರ್ಮಾ, ಚುನಾವಣೆಯಲ್ಲಿ ಗೆಲುವಾಗಲಿ ಅಥವ ಸೋಲಾಗಲಿ. ನಾವು ನಿಷ್ಠೆ, ಪ್ರಾಮಾಣಿಕತೆ ಮತ್ತು ಸಂವಿಧಾನ ಆಶಯದ ಚುನಾವಣೆ ನಡೆಸಿದ್ದೇವೆ ಎಂಬ ಹೆಮ್ಮೆಯಿದೆ ಎಂದರು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

2 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

13 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

15 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

16 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

16 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420