ಕಲಬುರಗಿ; ಗುಲಬರ್ಗಾ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದುಣ ಬುಧವಾರ ಅಭ್ಯರ್ಥಿ, ಚುನಾವಣಾ ಎಜೆಂಟ್ ಸಮಕ್ಷಮ ಇ.ವಿ.ಎಂ ಇರಿಸಲಾದ ಸ್ಟ್ರಾಂಗ್ ರೂಮ್ ಸೀಲ್ ಕಾರ್ಯ ನಡೆಯಿತು.
ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಅವರ ಉಪಸ್ಥಿತಿಯಲ್ಲಿ 8 ವಿಧಾನಸಭಾ ಕ್ಷೇತ್ರದ ಇ.ವಿ.ಎಂ ಮತಯಂತ್ರಗಳು ಗುಲಬರ್ಗಾ ವಿ.ವಿ.ಯ ವಿವಿಧ ವಿಭಾಗದಲ್ಲಿ ಭದ್ರವಾಗಿಟ್ಟು ಸ್ಟ್ರಾಂಗ್ ರೂಮ್ ಸೀಲು ಮಾಡಲಾಯಿತು.
ಅಫಜಲಪೂರ ಮತಕ್ಷೇತ್ರದ ಇ.ವಿ.ಎಂ ಯಂತ್ರಗಳು ಗಣಿತ ವಿಭಾಗದಲ್ಲಿ, ಗುಲಬರ್ಗಾ ದಕ್ಷಿಣ ಕ್ಷೇತ್ರದ ಮತಯಂತ್ರಗಳು ಸಸ್ಯಶಾಸ್ತ್ರ ವಿಭಾಗದಲ್ಲಿ, ಸೇಡಂ ಕ್ಷೇತ್ರದ ಮತಯಂತ್ರಗಳು ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ಉತ್ತರ ಮತ್ತು ಗುರುಮಠಕಲ್ ಕ್ಷೇತ್ರದ ಮತಯಂತ್ರಗಳು ಒಳಾಂಗಣ ಕ್ರೀಡಾಂಗಣ, ಚಿತ್ತಾಪುರ, ಗುಲಬರ್ಗಾ ಗ್ರಾಮೀಣ ಹಾಗೂ ಜೇವರ್ಗಿ ಕ್ಷೇತ್ರದ ಮತಯಂತ್ರಗಳು ಪರೀಕ್ಷಾಂಗ ವಿಭಾಗದಲ್ಲಿರಿಸಿದೆ. ಇಲ್ಲಿಯೇ ಜೂನ್ 4ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಬಿಗಿ ಭದ್ರತೆ,ಸಿ.ಸಿ.ಟಿ.ವಿ ಕಣ್ಗಾವಲು: ಮತಯಂತ್ರಗಳು ಇರಿಸಲಾದ ಗುಲಬರ್ಗಾ ವಿ.ವಿ.ಯ ವಿವಿಧ ವಿಭಾಗಗಳ ಕಟ್ಟಡಕಗಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಈಗಾಗಲೆ ಕಟ್ಟಡ ಕೇಂದ್ರ ಭದ್ರತಾ ಪಡೆಯ ಸುಪರ್ದಿಗೆ ವಹಿಸಿದೆ. ಸೆಂಟ್ರಲ್ ಪ್ಯಾರಾ ಮಿಲಿಟಿರಿ ಫೋರ್ಸ್, ಸಿ.ಐ.ಎಸ್.ಎಫ್, ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ತುಕಡಿ ಬಿಗಿ ಭದ್ರತೆ ನೀಡಿವೆ. ಸ್ಟ್ರಾಂಗ್ ರೂಂಗೆ ಹೋಗುವ ದಾರಿ, ಸೀಲ್ ಮಾಡಲಾದ ರೂಂ ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿದ್ದು, ಅಭ್ಯರ್ಥಿ ಮತ್ತು ಎಜೆಂಟ್ ಅವರು ದಿನದ 24 ಗಂಟೆ ವೀಕ್ಷಿಸಬಹುದಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಸ್ಟ್ರಾಂಗ್ ರೂಮ್ ಪ್ರಿಪೇರೇಷನ್ ನೋಡಲ್ ಅಧಿಕಾರಿ ಸಮದ್ ಪಟೇಲ್ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…