ಶಹಾಬಾದ: ಬಸವಣ್ಣನವರ ಸಮಾನತೆ ತಳಹದಿಯ ಮೇಲೆ ರೂಪಿತವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿಗೆ ಬಸವಾದಿ ಶರಣರೇ ಮೊದಲಿಗರು ಎಂದು ಶಿಕ್ಷಕ ಪಿ.ಎಸ್.ಮೇತ್ರೆ ಹೇಳಿದರು.
ಅವರು ಬಸವ ಜಯಂತಿ ಅಂಗವಾಗಿ ಹಳೆಶಹಾಬಾದ ಬಸವಾದಿ ಶರಣರ ಒಕ್ಕೂಟ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಲಾದ ಬಸವ ಜ್ಯೋತಿ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಕರ್ನಾಟಕದಲ್ಲಿತ್ತು. ಬಸವಾದಿ ಶರಣರು ಈ ವ್ಯವಸ್ಥೆಗೆ ಹುಟ್ಟಿಗೆ ಕಾರಣರಾಗಿದ್ದಾರೆ ಜಗತ್ತಿನಲ್ಲಿಯೇ ಮಹಿಳೆಯರಿಗೆ ಪುರುಷ ಸಮಾನ ಸ್ಥಾನ-ಮಾನ ನೀಡಿದ ಕೀರ್ತಿಶರಣ ಚಳವಳಿಗೆ ಸಲ್ಲುತ್ತದೆ ಎಂದರು.
12ನೇ ಶತಮಾನದಲ್ಲಿಯೇ ಸಾಕಷ್ಟು ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಅಂದು ಮಹಿಳೆಯರಿಗೆ ಅಕ್ಷರಜ್ಞಾನ, ಓದು ದಕ್ಕಿದ ಪರಿಣಾಮವಾಗಿ ಸಮಾಜದಲ್ಲಿದ್ದ ಅನಗತ್ಯ ಕಟ್ಟಳೆಗಳನ್ನು ಮೀರಿ ಮುಖ್ಯ ವಾಹಿನಿಗೆ ಬರುವಂತಾಯಿತು. ಅಂದಿನ ರಾಜ್ಯ ವ್ಯವಸ್ಥೆ, ಪುರುಷ ಸತ್ತೆ, ದೈವಸತ್ತೆಯನ್ನು ಧಿಕ್ಕರಿಸುವ ಶಕ್ತಿ ಮಹಿಳೆಯರಿಗೆ ಲಭ್ಯವಾಯಿತು. ಅವರಲ್ಲಿ ಚಿಂತನಾ ಪ್ರಜ್ಞೆಬೆಳೆಯಲು ಸಾಧ್ಯವಾಯಿತು ಎಂದರು.
ಅಂದು ಕೇವಲ ಮಹಿಳೆಗೆ ಪುರುಷ ಸಮಾನ ಅವಕಾಶ ದೊರೆಯಲಿಲ್ಲ. ಜತೆಗೆ ತುಳಿತಕ್ಕೊಳಗಾದ ಕೆಳಜಾತಿಯ, ದುಡಿಯುವ ವರ್ಗಕ್ಕೆ ಕಾವ್ಯ ರಚನೆಯ ಶಕ್ತಿ ತಂದುಕೊಟ್ಟ ಕೀರ್ತಿ ಬಸವರಾದಿ ಪ್ರಮತರಿಗೆ ಸಲ್ಲುತ್ತದೆ. ಮಹಾಮನೆಯಲ್ಲಿ ಪ್ರತಿಯೊಬ್ಬರ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ದೊರೆತ ಫಲವಾಗಿ ಕ್ರಾಂತಿಕಾರಿ ಹೆಜ್ಜೆ ಇಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಶರಣ ಮಲ್ಲಿನಾಥ ಪಾಟೀಲ ಮಾತನಾಡಿ, ಕಾಯಕ ಸಂಸ್ಕøತಿಗೆ ಹೆಚ್ಚಿನ ಮಹತ್ವ ನೀಡಿದ ಶರಣರು ಪ್ರತಿಯೊಬ್ಬರನ್ನು ಸಮಾನವಾಗಿ ಪ್ರೀತಿಸಿದರು. ಗೌರವ ನೀಡಿದರು. ಸಮಾನ ಬದುಕುವ ಹಕ್ಕು ನೀಡಿದರು. ಇದುವೇ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿತ್ತು ಎಂದರು.
ಪ್ರಜಾಪ್ರಭುತ್ವಮನುಷ್ಯರೆಲ್ಲರೂ ಸಮಾಜದ ಭಾಗವೆಂದು ಹೇಳುವುದಾಗಿದೆ. ಅದು ಪ್ರತಿಯೊಬ್ಬರೂ ಒಪ್ಪಿಕೊಳ್ಳುವ ವ್ಯವಸ್ಥೆಯಾಗಿದೆ. ಆದರೆ, ಧರ್ಮವನ್ನು ಎಲ್ಲರೂ ಒಪ್ಪಬೇಕಿಲ್ಲ. ಬಸವಾದಿ ಶರಣರು ಉಪದೇಶ ಮಾಡಿದ್ದು ಧರ್ಮವಲ್ಲ. ಅವರು ಉತ್ತಮ ಹಾದಿ ಹಾಕಿಕೊಟ್ಟಿದ್ದಾರೆ. ಅದರಲ್ಲಿ ಯಾರೂ ಬೇಕಾದರೂ ನಡೆಯಬಹುದು. ಈ ಬಸವ ಜ್ಯೋತಿ ಯಾತ್ರೆಯ ಮೂಲಕ ಶರಣ ಸಂದೇಶವನ್ನು ಸರ್ವರಿಗೂ ತಲುಪಿಸುವುದೇ ಮುಖ್ಯ ಗುರಿಯಾಗಿದೆ ಎಂದರು.
ಶರಣರಾದ ಮಲ್ಲಿಕಾರ್ಜುನ ಚಂದನಕೇರಿ,ಪ್ರವೀಣ ರಾಜನ್,ಮಹಾಂತೇಶ ಅವಂಟಿ,ಬಸವಣ್ಣಪ್ಪ ವಾಲಿ, ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ, ರಮೇಶ ಜೋಗದನಕರ್, ಚನ್ನಮಲ್ಲಪ್ಪ ಸಿನ್ನೂರ್,ಮಹಾಂತೇಶ ಪಾಟೀಲ, ಶರಣಪ್ಪ ಕೊಡದೂರ,ಬಸವರಾಜ ದಂಡಗುಲಕರ್,ಶಾಂತಪ್ಪ ಹಡಪದ,ಸಂತೋಷ ಪಾಟೀಲ,ಶಂಕರ ವಳಸಂಗ,ಶರಣು ವಸ್ತ್ರದ್, ಅರುಣ ಜಾಯಿ, ಬಸವರಾಜ ಶಹಾಪೂರ,ಕುಪೇಂದ್ರ ತುಪ್ಪದ್,ಅಣ್ಣಾರಾವ ಹುಗ್ಗಿ,ಸುಧೀರ್ ದ್ಯಾಮಗೌಡ,ಶ್ರವಣ ರಾವೂರ, ಬಸವರಾಜ ಪಾಟೀಲ, ಸೋಮಶೇಖರ ಕರಿಭಾವಿ,ಶರಣಪ್ಪ ದ್ಯಾಮಾ, ಮಲ್ಲಿಕಾರ್ಜುನ ವಾಲಿ, ರಾಹುಲ್ ಪೋತನಕರ್, ವಿರೇಶ ಕುಂಬಾರ ಇತರರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…