ಬಿಸಿ ಬಿಸಿ ಸುದ್ದಿ

ಹೆರಿಗೆ ಮಾಡಿಸದೆ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ

ಸುರಪುರ: ಆಸ್ಪತ್ರೆಗೆ ಹೆರಿಗೆಗೆಂದು ಆಗಮಿಸಿದ್ದ ಮಹಿಳೆಯ ಹೆರಿಗೆ ಮಾಡಿಸದೆ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜೀವ ದರಬಾರಿ ಆಗ್ರಹಿಸಿದರು.

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಟಿಹೆಚ್‍ಓ ಡಾ:ಆರ್.ವಿ ನಾಯಕ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ,ಬುಧವಾರ ರಾತ್ರಿ ತಾಲೂಕಿನ ಕುಪಗಲ್ ಗ್ರಾಮದ ಮಹಿಳೆ ಹೆರಿಗೆಗೆಂದು ರಾತ್ರಿ ವೇಳೆಯಲ್ಲಿ ಆಗಮಿಸಿದರೆ ಹೆರಿಗೆ ಮಾಡಿಸದೆ ಕುಂಟು ನೆಪ ಹೇಳಿ ನಿರ್ಲಕ್ಷ್ಯ ತೋರಿದ್ದಾರೆ,ವೈದ್ಯರು ಇಲ್ಲ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಹೇಳುತ್ತಾರೆ.

ನಾವುಗಳು ಹೋಗಿ ಕೇಳಿದರು ನಮ್ಮ ಮೇಲು ಗದರಿದ್ದಾರೆ,ಆದ್ದರಿಂದ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೊರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ,ತಮ್ಮ ಮನವಿಯನ್ನು ಪರಿಶೀಲಿಸಿ ವೈದ್ಯರ ಕರ್ತವ್ಯ ಲೋಪವಾಗಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಗೌರವಾಧ್ಯಕ್ಷ ಚಂದ್ರಕಾಂತ ಲಕ್ಷ್ಮೀಪುರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂಸಾಬ ಪಿ.ದೊಡ್ಮನಿ,ಜಿಲ್ಲಾ ಉಪಾಧ್ಯಕ್ಷ ಕುಮಾರಗೌಡ ಪೊಲೀಸ್ ಪಾಟೀಲ್,ಜಿಲ್ಲಾ ಸಹಕಾರ್ಯದರ್ಶಿ ಹಣಮಂತ್ರಾಯ ಬಿ.ಭಜಂತ್ರಿ,ಜಿಲ್ಲಾ ಖಜಾಂಚಿ ಕಾಸಿಂಸಾಬ ಅಮ್ಮಾಪುರ,ರಾಘವೇಂದ್ರ ಸುರಪುರ,ಜೈರುದ್ದಿನ್ ಸುರಪುರ ಇತರರಿದ್ದರು.

emedialine

Recent Posts

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

2 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

4 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

4 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

5 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

5 hours ago

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…

5 hours ago