ಶಾಂತಿ ಮತ್ತು ಅಹಿಂಸೆಯನ್ನು ಮೊಟ್ಟ ಮೊದಲು ಬೋಧಿಸಿದ್ದು ಬುದ್ಧ; ಪ್ರಭು ಖಾನಾಪುರೆ

ಕಲಬುರಗಿ: ಜಗತ್ತಿನಲ್ಲಿ ವೈಜ್ಞಾನಿಕ, ವೈಚಾರಿಕ ಚಿಂತನೆ ಧರ್ಮವನ್ನು ಬೋಧಿಸಿ ಶಾಂತಿ ಮತ್ತು ಅಹಿಂಸೆಯನ್ನು ಮೊಟ್ಟಮೊದಲು ಜಗತ್ತಿಗೆ ಬೋಧಿಸಿದ್ದು ಬುದ್ಧ ಎಂದು ಚಿಂತಕ,ಸಾಹಿತಿ ಡಾ.ಪ್ರಭು ಖಾನಾಪುರೆ ನುಡಿದರು.

ಕಲಾ ಮಂಡಳದಲ್ಲಿ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತು ಏರ್ಪಡಿಸಿದ್ದ ರಾಜ್ಯ ಘಟಕವ ನ್ನು ಉದ್ಘಾಟಿಸಿ ಮಾತನಾಡಿದರು.ಅವರು ಆಸ್ತಿತ್ವ ಅನಸ್ತಿತ್ವವನ್ನು ಬಿಟ್ಟು ಮಧ್ಯ ಮಾರ್ಗವನ್ನು ಹಿಡಿದನು. ಥೇರಿಗಾಥ ಎಂಬ ಎಪ್ಪತ್ತ್ಮೂರ ಮಹಿಳೆಯರು ಬೌದ್ಧ ಭಿಕ್ಷುಣಿಯರ ಸಾಹಿತ್ಯ ಬಂದರೂ ಚರ್ಚೆ ಆಗಿಲ್ಲ. ಕೊಲ್ಲುವುದು ಧರ್ಮ ಸಾಹಿತ್ಯ ಬುದ್ಧನದಲ್ಲ;ಗೆಲ್ಲುವು ದಾಗಿತ್ತು.ಮೂರ್ತಿಗಳ ಪೂಜೆ ಆಚರಣೆ ಅಲ್ಲ ತತ್ತ್ವ ವಿ ಚಾರಗಳನ್ನು ಚಿಂತಿಸಬೇಕು ಇವತ್ತು ಬುದ್ಧನ ಚಿಂತನೆ ಅವಶ್ಯ ಎಂದರು.

ಮುಖ್ಯ ಅತಿಥಿಯಾದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಲಿಂಗಣ್ಣ ಗೋನಾಲ ಧರ್ಮ ಸಂಘರ್ಷದಲ್ಲಿ ಬೌದ್ಧ ಧಮ್ಮ ಅವಶಾನ ಹೊಂದಿದೆ.ಇಂದಿನ ದಿನಗಳಲ್ಲಿ ಜಾತಿಧರ್ಮಕ್ಕೆ ಬೆನ್ನಟ್ಟಿಕೊಂಡಿದ್ದರಿಂದ ಸಾಹಿತ್ಯ ಧರ್ಮ ಸಾಮರಸ್ಯ ಬೆಸೆಯುತ್ತದೆಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡರು ಇಲ್ಲ ದರ ಬಗ್ಗೆ ಯೋಚಿಸದೇ ಇರುವುದರ ಬಗ್ಗೆ ಚಿಂತಿಸುವು ದೇ ಬೌದ್ಧ ಧರ್ಮವಾಗಿದೆ.ಸಮಾನತೆಯ ಧರ್ಮವಾಗಿ ದೆ.ಸಾಹಿತ್ಯದ ಮೂಲಕ ಚಿಂತನೆ ಬುದ್ಧ ನಮಗೆ ಅವಶ್ಯ ವಾಗಿದೆ ಎಂದರು.

ಹಿರಿಯ ಸಾಹಿತಿ ವಿ.ಆರ್.ಚಾಂಬಾಳ ಅವರು ಪ್ರಜಾ ಪ್ರಭುತ್ವ ಮತ್ತು ಬುದ್ಧ ಪ್ರಭುತ್ವ ಅವಶ್ಯವೆಂದರು.ಅಧ್ಯ ಕ್ಷತೆಯನ್ನು ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಎಸ್. ಕಾನೇಕರ್ ಬೀದರದಿಂದ ಚಾಮರಾಜನಗರದವರೆಗೆ ರಾಜ್ಯದಿಂದ ಗ್ರಾಮೀಣದವರೆಗೆ ಪರಿಷತ್ತು ಕಟ್ಟಬೇಕಾ ಗಿದೆ ಎಂದರು.

ಸಿದ್ದಾರ್ಥ ಬುದ್ಧ ವಿಹಾರದ ಸಂಘಾನಂದ ಬಂತೇಜಿ ಸಾನಿಧ್ಯ ವಹಿಸಿ ಸಕಲ ಜೀವಿಗಳಿಗೆ ಒಳ್ಳೆಯ ಕೆಲಸ ಮಾಡಲಿ ಎಂದು ಆಶೀರ್ವಚನ ನೀಡಿದರು.

ಸಂತೋಷಕುಮಾರ ಕರಹರಿ ಪ್ರಾರ್ಥಿಸಿದರು. ಬೌದ್ಧ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಗವಿ ಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು.ಡಾ.ಚಿದಾನಂದ ಕುಡ್ಡನ್ನ ನಿರೂಪಿಸಿದರು.ಡಾ.ಸಿದ್ದಪ್ಪ ಹೊಸಮನಿ ವಂದಿಸಿದರು.

ಬೀದರ ಜಿಲ್ಲೆಗೆ ಡಾ.ಸಂಜುಕುಮಾರ ನಡುಕರ,ಯಾದ ಗಿರಿ ಜಿಲ್ಲೆಗೆ ಸಾಯಿಬಾಬಾ,ಕಲಬುರಗಿ ಜಿಲ್ಲೆಗೆ ರಾಯಚೂರು ಜಿಲ್ಲೆಗೆ ಡಾ.ಶರಣಪ್ಪ ಚಲವಾದಿ ಅವರ ನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.ಡಾ.ರಾಜಕು ಮಾರ ಮಾಳಗೆ, ಡಾ.ಕೆ.ಎಸ್.ಬಂಧು,ಲಕ್ಷ್ಮಣ, ಡಾ.ರಾಜಶೇಖರ ಮಾಂಗ್,ರಾಘವೇಂದ್ರ ಫರಹತಬಾದಕರ್, ಡಾ.ಪ್ರದೀಪ ಕಡೂನ್, ಮಹಾಲಿಂಗ ದೇವರು,ಸವಿತಾ ಶಿವಶರಣಪ್ಪ,ರಾಜಕು ಮಾರ ಧುಮ್ಮನಸೂರ,ಡಾ.ಪೀರಪ್ಪ ಸಜ್ಜನ,ಅರವಿಂದ ಮದನಕರ ,ಡಾ. ಸುನೀಲ ಜಾಬಾದಿ,ಅಂಬಾರಾಯ ಲೇಂಗಟಿ,ಡಾಕಪ್ಪ ಮೋತಿಲಾಲ್,ಗುಂಡಪ್ಪ ಹೊಸಮನಿ, ತಿಪ್ಪಣ್ಣ ತೇಲಂಗ ಇತರರಿದ್ದರು.

emedialine

Recent Posts

ಸಡಗರ – ಸಂಭ್ರಮದಿಂದ ಜರುಗಿದ ಭಂಕೂರಿನ ಬಂಡಿ ಓಡಿಸಿ ಕರಿ ಹರಿಯುವ ಜಾತ್ರೆ

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸಿ ಹಾಗೂ…

11 hours ago

ಶರಣು ಮೋದಿಗೆ ಕಲಬುರಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆಗೆ ಮನವಿ

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ, ಪಾಲಿಕೆಯ ಮಾಜಿ ಮೇಯರಹಾಗೂ ಕಾಂಗ್ರೆಸ್ ಮುಖಂಡ ಶರಣು ಮೋದಿ ಅವರಿಗೆ…

11 hours ago

ಸಮಾಜ ಸುಧಾರಕ ಕಬೀರದಾಸರ 647ನೇ ಜಯಂತಿ ಆಚರಣೆ

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಕಬೀರದಾಸರ 647ನೆಯ ಜಯಂತಿಯನ್ನು ಆಚರಿಸಲಾಯಿತು. ಈ…

11 hours ago

ಶೆಳ್ಳಗಿ ರಸ್ತೆ ದುರಸ್ತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ

ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ…

11 hours ago

ಸುರಪುರ ಕುಂಬಾರ ಸಂಘ ಶಾಸಕ ಆರ್.ವಿ.ನಾಯಕ ಸನ್ಮಾನ

ಸುರಪುರ: ತಾಲೂಕ ಕುಂಬಾರ ಸಂಘದ ವತಿಯಿಂದ ನೂತನ ಶಾಸಕ ರಾಜಾ ವೇಣುಗೊಪಾಲ ನಾಯಕಗೆ ಸನ್ಮಾನಿಸಿ ಗೌರವಿಸಲಾಗಿದೆ.ನಗರದ ಶಾಸಕರ ಗೃಹ ಕಚೇರಿಯಲ್ಲಿ…

11 hours ago

ಮಹಾವಿದ್ಯಾಲಯ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು…

11 hours ago