ಹೈದರಾಬಾದ್ ಕರ್ನಾಟಕ

ರಕ್ತದಾನಿಗಳಿಂದ ಜೀವ ಉಳಿಸುವುದು ಸಾಮಾಜಿಕ ಕೊಡುಗೆ

ಕಲಬುರಗಿ: ರಕ್ತದಾನದ ಮಹತ್ವ ಹಾಗೂ ರಕ್ತದಾನಿಗಳಿಂದ ಜೀವ ಉಳಿಸುವುದರಲ್ಲಿ ಸಾಮಾಜಿಕ ಕೊಡುಗೆ ಮತ್ತು ರಕ್ತದಾನಿಗಳಿಗೆ ಆಗುವ ಲಾಭಗಳ ಪಡೆಯಬೇಕು ಎಂದು ಇಎಸ್ಐ ಆಸ್ಪತ್ರೆಯ ವೈದ್ಯರಾದ ಡಾ.ಸತೀಶ ಬೆಳಗಟ್ಟಿ ಅವರು ವಿಧ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ನಗರದ‌ ಸರಕಾರಿ ಸ್ವಯತ್ತ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸವಿತಾ ತಿವಾರಿ ಮಾತನಾಡಿ, ಅವರು ಸಬಲ ಯುವಕರು ರಕ್ತವನ್ನು ದಾನ ಮಾಡುವುದರ ಮುಖಾಂತರ ಜೀವದ ಮಹತ್ವವನ್ನು ಅರಿತುಕೊಳ್ಳಬೇಕು, ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂಬ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಮೀನಾಕ್ಷಿ ಕೆ ಸಿ ಸಂಯೋಜಕರಾದ ಶ್ರೀ ದಿನೇಶ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಗಾಯತ್ರಿ, ಮತ್ತು ಪ್ರಾಣಿ ಶಾಸ್ತ್ರ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಜ ನಿರೂಪಿಸಿದರು.ಐಶ್ವರ್ಯ ಸ್ವಾಗತಿಸಿ,ಡಾ.ರಾಜಶೇಖರ ಅವರು ಕಾರ್ಯಕ್ರಮವನ್ನು ವಂದಿಸಿದರು.

emedialine

Recent Posts

ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ನಿಷೇಧ

ಬೆಂಗಳೂರು; ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006  ರ…

4 mins ago

17 ನೂತನ ಶಾಸಕರಿಂದ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು; ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ 17 ವಿಧಾನ ಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ…

8 mins ago

ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ನೈತಿಕ ಮೌಲ್ಯಗಳು ನೀಡುವುದೆ ಜಿಟಿಟಿಸಿ; ಡಾ: ಸುಧಾರಾಣಿ

ಕಲಬುರಗಿ: ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಕೌಶಲ್ಯ ಮತ್ತು ಬದುಕಿಗೆ ನೈತಿಕ ಶಿಕ್ಷಣ ಹಾಗೂ ಮೌಲ್ಯಗಳನ್ನು ನೀಡುವುದೆ ನಮ್ಮ ಸಂಸ್ಥೆಯ ಮುಖ್ಯ…

20 mins ago

ಗ್ಯಾಸ ಸಿಲಿಂಡರ ಸ್ಫೋಟದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ

ಕಲಬುರಗಿ:  ನಗರದ ಸಪ್ತಗಿರಿ ಹೊಟೆಲ್‍ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಗಾಯಗೊಂಡಿರುವ ಕಾರ್ಮಿಕರಿಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ…

26 mins ago

ಬಡತನದ ನಿವಾರಣೆಗೆ ಪುಸ್ತಕ ಓದಿ

ಕಲಬುರಗಿ: ನಗರದ ಶ್ರೀ ಮತಿ ಕಸ್ತೂರಿಬಾಯಿ ಪಿ ಬುಳ್ಳಾ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ…

30 mins ago