ಬಿಸಿ ಬಿಸಿ ಸುದ್ದಿ

ಸತ್ಸಂಗದ ಮಾರ್ಗವೇ ಶಿವಯೋಗ: ಡಾ. ಸತ್ಯಂಪೇಟೆ

ಕಲಬುರಗಿ: ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞನಾದ ದೇವರನ್ನು ಸತ್ಸಂಗದ ಮೂಲಕ ಕಂಡು ಕೊಂಡು ಅನುಭವಿಸುವುದೇ ಶಿವಯೋಗ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಮಾಕಾ ಲೇಔಟ್ ಬಡಾವಣೆಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಶುಕ್ರವಾರ ಬಸವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ‘ಶರಣರ ದೃಷ್ಟಿಯಲ್ಲಿ ಶಿವಯೋಗ’ ವಿಷಯ ಕುರಿತು ಮಾತನಾಡಿದ ಅವರು, ಚಂಚಲ ಚಿತ್ತವಾದ ಮನಸ್ಸನ್ನು ನಿಗ್ರಹ ಮಾಡಿ ಆರೋಗ್ಯ ಕಾಪಡಿಕೊಳ್ಳುವುದೇ ಯೋಗ ಎಂದು ತಿಳಿಸಿದರು.

ಲಿಂಗವ ಪೂಜಿಸಿ ಫಲವೇನಯ್ಯ, ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ ಎನ್ನುವ ಬಸವಣ್ಣನವರ ವಚನದಂತೆ ಅಂಗತ್ವದಿಂದ ಲಿಂಗತ್ವ ಪಡೆಯುವುದೇ ನಿಜವಾದ ಯೋಗ ಎಂದು ಅವರು ಹೇಳಿದರು.

ಶಿವನಾಗಿ ಪೂಜಿಸಬೇಕು, ಹರನಾಗಿ ಪೂಜಿಸಬೇಕು, ಬಯಲು, ಬಯಲನೇ ಬಿತ್ತಿ ಬಯಲಾಗುವುದೇ ನಿಜವಾದ ಯೋಗವಾಗಿದ್ದು, ಅರಿವು, ಆಚಾರ ಒಂದಾಗುವುದೇ ನಿಜವಾದ ಪೂಜೆ. ಅದುವೆ ಶಿವಯೋಗ ಎಂಬುದನ್ನು ಶರಣರು ಅಂದೇ ಹೇಳಿದ್ದರು ಎಂದು ತಿಳಿಸಿದರು.

ಯೋಗ ಶಿಕ್ಷಕ ಶಿವಾನಂದ ದಾನಮ್ಮಗುಡಿ ಯೋಗ ತರಬೇತಿ ನೀಡಿದರು. ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಅಯ್ಯಣ್ಣ ನಂದಿ ಅಧ್ಯಕ್ಷತೆ ವಹಿಸಿದ್ದರು.

ರೂಪಾ ಮುನ್ನೋಳಿ, ಡಾ.‌ಸಂಜೀವಕುಮಾರ ಶೆಟಕಾರ, ಶ್ರೀದೇವಿ, ಲಕ್ಷ್ಮೀಬಾಯಿ, ಮಲ್ಲಿಕಾರ್ಜುನ ದ್ಯಾಮಗೊಂಡ, ಸಿದ್ಧರಾಮ ವಾಲಿ, ಚಂದ್ರಕಾಂತ ಅಂಕಲಗಿ, ಶರಣಬಸಪ್ಪ ಬಾಗೋಡಿ, ಪ್ರಸನ್ನ ವಾಂಜರಖೇಡ, ಸತೀಶ ಸಜ್ಜನ್, ಶಿವಾನಂದ ಮಾಲಗತ್ತಿ, ರಾಜು ಸಿನ್ನೂರ್ ಇತರರಿದ್ದರು.

emedialine

Recent Posts

ಬಸವರಾಜ್ ಎಸ್ ಜಿಲಿಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಲಿ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

3 hours ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

3 hours ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

3 hours ago

ಜನಪದ ಕಲಾವಿದರು ಸಮಾಜದ ಆಸ್ತಿ

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ…

3 hours ago

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 15ರ ಫಿರದೋಸ್ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೈಯದ್ ಮಿರಾಜೊದ್ದೀನ್ ಕಾಶೀಪ್…

5 hours ago

ಸಿಯುಕೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ತರಬೇತಿ ಯೋಜನೆ ಕುರಿತು ಜಾಗೃತಿ

ಕಲಬುರಗಿ: "ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಐಟಿಐ, ಪಿಯುಸಿ, ಡಿಪೆÇ್ಲೀಮಾ ಮತ್ತು ಪದವೀಧರರು ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ…

7 hours ago