ಬಿಸಿ ಬಿಸಿ ಸುದ್ದಿ

ವಚನ ವಿಚಾರಗಳು ಕೇವಲ‌ ಆಚರಣೆಗೆ ಸೀಮಿತವಾಗದೆ ಅನುಸರಣೆಯಲ್ಲಿ ಬರಬೇಕು

ಕಲಬುರಗಿ: ಅಂಧಶ್ರದ್ಧೆ, ಮೂಢನಂಬಿಕೆ ವಿರುದ್ಧ ಹೋರಾಡಿದ ಬಸವಣ್ಣನವರು ಲೋಕಪೂಜ್ಯರು. ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಅಭಿಪ್ರಾಯಪಟ್ಟರು.

891ನೇ ಬಸವ ಜಯಂತ್ಯುತ್ಸವ ನಿಮಿತ್ತವಾಗಿ ಇಲ್ಲಿನ
ಶ್ರೀ ಸದ್ಗುರು ಕಲಾ ಸಂಸ್ಥೆ ವತಿಯಿಂದ ಶಿವಾಜಿ ನಗರದ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಚನ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನುಭವ ಮಂಟಪದ ಮೂಲಕ ಜನರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆ ಮೂಡಿಸಿದ ಮಹಾತ್ಮರು. ಅಂಥ ಮಹಾತ್ಮರ ಜಯಂತಿಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಎಸ್ಎಸ್ ವಿ ಚಾನಲ್ ಸಂಸ್ಥಾಪಕ ಶಂಕರ ಕೋಡ್ಲಾ ಮಾತನಾಡಿ, ಬಸವಾದಿ ಶರಣರು ಬದುಕಿ, ಬೋಧಿಸಿದ ವಿಚಾರಗಳು ಪಕ್ಕಾ ವಾಸ್ತವವಾಗಿವೆ. ಮೇಲಾಗಿ ಸರಳ, ಸಹಜವಾಗಿವೆ. ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಚನ ವಿಚಾರಗಳು ಕೇವಲ ಆಚರಣೆಯಾಗಬಾರದು, ಅನುಸರಣೆ ಮಾಡಬೇಕು ಎಂದು ತಿಳಿಸಿದರು.

ಮಹಾಂತೇಶ ಕುಂಬಾರ ಅವರು ಬಸವಣ್ಣನವರ ಕುರಿತಾಗಿ ವಿಶೇಷ ಅನುಭಾವ ನೀಡಿದರು. ಬಸವಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶಿವಾನಂದ ಬಿಲಗುಂದಿ, ಗುರುಬಸವ ಡಿಸ್ಟ್ರಿಬ್ಯೂಟರ್ಸ್ ನ ಕಲ್ಯಾಣಕುಮಾರ ಸಗರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಂತರ ನಡೆದ ವಚನ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ದತ್ತರಾಜ ಕಲಶೆಟ್ಟಿ, ರಾಚಯ್ಯ ಸ್ವಾಮಿ ರಟಕಲ್, ಬಸಯ್ಯ ಗುತ್ತೇದಾರ, ಭೀಮಾಶಂಕರ ಹೂಗಾರ, ಜಗದೀಶ ದೇಸಾಯಿ ಕಲ್ಲೂರ, ಭಗವಂತರಾವ ಕಣ್ಣೂರ, ಮೌನೇಶ ವಿಶ್ವಕರ್ಮ, ಸೂರ್ಯಕಾಂತ ಗೊಬ್ಬೂರವಾಡಿ ಮತ್ತಿತರ ಕಲಾವಿದರಿಂದ ವಚನ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.

ಲೀಲಾವತಿ ಚಂದ್ರಕಾಂತ ಗೋಗಿ ನಿರೂಪಿಸಿದರು. ಶಿವಲಿಂಗ ಕೆಂಗನಾಳ ಸ್ವಾಗತಿಸಿದರು. ತೇಜು ಎಸ್ವಿ. ನಾಗೋಜಿ ಪ್ರಾರ್ಥನೆಗೀತೆ ಹಾಡಿದರು. ‌ವಿಜಯಲಕ್ಷ್ಮೀ ಕೆಂಗನಾಳ ವಂದಿಸಿದರು.

ಸದ್ಗುರು ಕಲಾ ರತ್ನ ಪ್ರಶಸ್ತಿ ಪುರಸ್ಕೃತರು: ಇದೇ ವೇಳೆಯಲ್ಲಿ ಉದಯಕುಮಾರ ಸಾಲಿ, ರಾಜಕುಮಾರ ಕೋಟಿ, ಡಾ. ಶಿವರಂಜನ ಸತ್ಯಂಪೇಟೆ, ಸಿದ್ಧರಾಮ ಯಳವಂತಗಿ, ಶಿವಶರಣಪ್ಪ ದೇಗಾಂವ, ಚಂದ್ರಕಾಂತ ಎಂ. ಗುಳಗಿ ಅವರಿಗೆ ಸದ್ಗುರು ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago