ಬಿಸಿ ಬಿಸಿ ಸುದ್ದಿ

ಬುದ್ಧ ಹೇಳಿದ್ದು ಶಾಂತಿ ಸಾಮರಸ್ಯ

ಕಲಬುರಗಿ : ಬುದ್ಧನ ಬೋಧನೆಗಳನ್ನು ಸ್ವೀಕರಿಸುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ ಎಂದು ದಿ ಬುದ್ಧಿಸ್ಟ್ ಸೋಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಂ. ಕಾಂಬಳೆ ಹೇಳಿದರು.

ನಗರದ ಮಾನ್ಯವಾರ್ ದಾದಾ ಸಾಹೇಬ್ ಕಾನ್ಛೀರಾಮ ಪದವಿ ಕಾಲೇಜಿನಲ್ಲಿ ಭಾರತೀಯ ಬೌದ್ಧ ಮಹಾಸಭಾ ಹಮ್ಮಿಕೊಂಡಿದ್ದ ಒಂದು ದಿನದ ಕೇಡರ್ ಕ್ಯಾಂಪ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಆರೋಗ್ಯಕರ, ಸಾಮರಸ್ಯದ ಸಮಾಜದ ಆಧಾರವು ಯಾವಾಗಲೂ ಆರೋಗ್ಯಕರ, ಸಾಮರಸ್ಯದ ವ್ಯಕ್ತಿ. ಪ್ರತಿಯೊಬ್ಬ ವ್ಯಕ್ತಿಯು ಶುದ್ಧ, ಶಾಂತಿಯುತ ಮನಸ್ಸನ್ನು ಹೊಂದಿದ್ದರೆ ಮಾತ್ರ ನಾವು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ನಿರೀಕ್ಷಿಸಬಹುದು. ವಿಪಸ್ಸನವು ಅನುಭವದ ಮಟ್ಟದಲ್ಲಿ ವ್ಯಕ್ತಿಯೊಳಗೆ ಶಾಂತಿ ಮತ್ತು ಸಾಮರಸ್ಯವನ್ನು ಪಡೆಯಲು ಒಂದು ವಿಶಿಷ್ಟ ತಂತ್ರವಾಗಿದೆ ಎಂದು ಅವರು ಹೇಳಿದರು.

ದಿ ಬುದ್ಧಿಸ್ಟ್ ಸೋಸೈಟಿ ಆಫ್ ಇಂಡಿಯಾ ಕಲಬುರ್ಗಿಯ ಜಿಲ್ಲಾ ಅಧ್ಯಕ್ಷ ಡಾ. ವಿ. ಟಿ. ಕಾಂಬಳೆ ಅಧ್ಯಕ್ಷತೆವಹಿಸಿ ಮಾತನಾಡಿ ಭಾರತದ ಮಹಾನ್ ಋಷಿ ಗೌತಮ ಬುದ್ಧ, ತನ್ನ ಆಳವಾದ ಧ್ಯಾನದ ಮೂಲಕ ಸತ್ಯವನ್ನು ಶೋಧನೆ ಮಾಡಿ ಜ್ಞಾನೋದಯವನ್ನು ಪಡೆದರು. ಮನಸ್ಸಿನ ಎಲ್ಲಾ ಕಲ್ಮಶಗಳಿಂದ ಮುಕ್ತರಾದರು. ನಂತರ ಅತ್ಯಂತ ಸಹಾನುಭೂತಿ ಮತ್ತು ಪ್ರೀತಿಯಿಂದ ಅವರು ಅದನ್ನು ಮನುಕುಲಕ್ಕೆ ಹಂಚಿದರು. ಬುದ್ಧನ ತತ್ವ ಭೋಧನೆ ಮಾಡುವವರು ಬಹಳ ಶಾಂತಿ ಸಹನೆ ವಿನಯದಿಂದ ಇತರರೊಂದಿಗೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಿಲಿಂದ್ ಗುರು, ಸಿ. ಬಿ ತೆಲತುಂಬ್ಡೆ, ಮನೋಹರ ಮೋರೆ, ವೈಶಾಲಿ ಮೋರೆ ಭಾಗವಹಿಸಿದ್ದರು. ಸುನೀತಾ ಕಾಂಬಳೆ, ಸಂಧ್ಯಾ ಹಂಗರಗಿ, ಎಸ್. ಎನ್ ಗಾಯಕವಾಡ, ಸುಭಾಷ ಚಕ್ರವರ್ತಿ, ಡಾ. ರಾಜಕುಮಾರ ದಣ್ಣೂರ, ಡಾ. ಸೇವಂತಾ ವಗ್ಗೆ, ಉಪಸ್ಥಿತರಿದ್ದರು.

emedialine

Recent Posts

ಶಾಲಾ ಮಕ್ಕಳಿಗೆ ಬಸವಣ್ಣನವರ ವಚನ ಸುಧೆ ಕೈಪಿಡಿ ವಿತರಣೆ

ಬಿ.ಆರ್. ಪಾಟೀಲರ 76ನೇ ಹುಟ್ಟುಹಬ್ಬದ ಆಚರಣೆ ನಿಮಿತ್ತ ಕಲಬುರಗಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವಿನ…

14 hours ago

ಕಲಬುರಗಿ : ಸಮಾಜ ಬದಲಾಗದ ಹೊರತು ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ: ನ್ಯಾ.ಬಿ.ವೀರಪ್ಪ

ಸುಳ್ಳು ದೂರು ಕೊಟ್ಟಲ್ಲಿ 3 ವರ್ಷ ಜೈಲು ಶಿಕ್ಷೆ ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ…

15 hours ago

ಶ್ರೀ ಡಾ. ಶರಣಬಸವಪ್ಪ ಅಪ್ಪಾ ನಡೆದಾಡುವ ದೇವರು: ಬಸವರಾಜ ದೇಶಮುಖ

ಕಲಬುರಗಿ: ಕಲಬುರಗಿ ಜಿಲ್ಲೆ ಶರಣರ ಹೆಬ್ಬಾಗಿಲು. ಇಲ್ಲಿ ಅನೇಕ ಶರಣರು, ದಾಸರು ಬಾಳಿ ಬದುಕಿದ ನೆಲ. ಶಿಕ್ಷಣ ಮತ್ತು ದಾಸೋಹ…

15 hours ago

ನಿರಂತರ ರಂಗಕ್ರಿಯೆಗೆ ರಂಗಾಯಣ ಬದ್ಧ: ರಾಜು ತಾಳಿಕೋಟೆ

ಧಾರವಾಡ: ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆಂದು ಖ್ಯಾತ ನಟ, ನಿರ್ದೇಶಕ ರಾಜು ತಾಳಿಕೋಟೆ…

15 hours ago

ಅಂಕದ ಜೊತೆಗೆ ಕ್ರೀಡೆಯು ಇರಲಿ: ಡಾ. ಸದಾನಂದ ಪೆರ್ಲ

ಕಲಬುರಗಿ : ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕದ ಬೆನ್ನ ಹಿಂದೆ…

15 hours ago

ಕಲಬುರಗಿ: ಅದ್ಧೂರಿಯಾಗಿ ಜರುಗಿದ ಪೂಜ್ಯ ಡಾ ಅಪ್ಪಾಜಿಯವರ ಜನ್ಮದಿನಾಚರಣೆ

ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ…

20 hours ago