ಬಿಗ್ವಾನ ಮಾಹರಾಷ್ಟ್ರ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ದೌಂಡ ತಾಲೂಕಿನ (ಸ್ವಾಮಿ ಚಿಂಚೋಳಿ ) ಬಿಗ್ವಾನ ನಲ್ಲಿರುವ ಶ್ರೀ ಭಕ್ತಿಲಿಂಗ ಹವಾಮಲ್ಲಿನಾಥ ಆಶ್ರಮದಲ್ಲಿ ಗುರುಪುರ್ಣಿಮಾ ಉತ್ಸವ – 2024 ರ ಪ್ರಯುಕ್ತ ಸರ್ವ ಧರ್ಮದ ಭಕ್ತರಿಂದ ಆಯೋಜಿಸಲಾಗಿದ್ದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ ಗುರುವಂದನಾ ಕಾರ್ಯಕ್ರಮಕ್ಕೆ ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ನಸುಕಿನ ಜಾವದಿಂದಲೆ ಗಂಟೆಗಟ್ಟಲೆ ಸರದಿಸಾಲಿನಲ್ಲಿ ನಿಂತು ಪುಜ್ಯರಿಗೆ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯರು ಸರ್ವಭಕ್ತರಿಗೆ ಶಾಲು ಹೊದಿಸಿ ದರ್ಶನ – ಆಶಿರ್ವಾದ ನಿಡುತ್ತಾ ” ನಾವು ದೇಶವನ್ನು ರಕ್ಷಿಸಿದರೆ, ದೇಶ ನಮ್ಮನ್ನು ರಕ್ಷಿಸುತ್ತದೆ” ಎಂದು ದೇಶವಾಸಿಗಳಿಗೆ ಸಂದೇಶ ನೀಡಿದರು.
ದೇಶ ಉಳಿದರೆ ಮಾತ್ರ ನಮ್ಮ ಸಂವಿಧಾನ, ಜಾತಿ, ಧರ್ಮ, ಪರಿವಾರಗಳು ಉಳಿಯುತ್ತವೆ ದೇಶವೆ ಉಳಿದಿಲ್ಲ ಎಂದರೆ ಯಾವುದಕ್ಕು ಉಳಿಗಾಲವಿಲ್ಲ ಈ ದಿವ್ಯ ಸಂದೇಶವನ್ನರಿತು ಸಮಸ್ತ ದೇಶ ಬಾಂಧವರು ತಮ್ಮ ಸ್ವಾರ್ಥ, ದ್ವೇಶ ಬದಿಗಿಟ್ಟು ದೇಶದ ಎಕತೆ, ಐಕ್ಯತೆ ಹಾಗೂ ಅಖಂಡತೆಗಾಗಿ ಶ್ರಮಿಸಬೇಕೆಂದು ಕರೆನಿಡಿದರು.
ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತ ಭಕ್ತರಿಗೆ ಆಶ್ರಮದಲ್ಲಿ ಅಚ್ಚುಕಟ್ಟಾದ ನಿರಂತರ ಪ್ರಸಾದ ವ್ಯವಸ್ಥೆ, ವಸತಿ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು, ದಿನವಿಡಿ ದೇಶ ಭಕ್ತಿ ಕಾರ್ಯಕ್ರಮಗಳನ್ನು ಖ್ಯಾತ ಸಂಗಿತ ಗಾರರು ಹಾಗೂ ಕಲಾವಿದರು ನಡೆಸಿಕೊಟ್ಟರು ಎಂದು ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ್ ಝಳಕಿ ಮಾಧ್ಯಮಕ್ಕೆ ತಿಳಿಸಿದರು.
ಬಿ.ಆರ್. ಪಾಟೀಲರ 76ನೇ ಹುಟ್ಟುಹಬ್ಬದ ಆಚರಣೆ ನಿಮಿತ್ತ ಕಲಬುರಗಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವಿನ…
ಸುಳ್ಳು ದೂರು ಕೊಟ್ಟಲ್ಲಿ 3 ವರ್ಷ ಜೈಲು ಶಿಕ್ಷೆ ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ…
ಕಲಬುರಗಿ: ಕಲಬುರಗಿ ಜಿಲ್ಲೆ ಶರಣರ ಹೆಬ್ಬಾಗಿಲು. ಇಲ್ಲಿ ಅನೇಕ ಶರಣರು, ದಾಸರು ಬಾಳಿ ಬದುಕಿದ ನೆಲ. ಶಿಕ್ಷಣ ಮತ್ತು ದಾಸೋಹ…
ಧಾರವಾಡ: ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆಂದು ಖ್ಯಾತ ನಟ, ನಿರ್ದೇಶಕ ರಾಜು ತಾಳಿಕೋಟೆ…
ಕಲಬುರಗಿ : ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕದ ಬೆನ್ನ ಹಿಂದೆ…
ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ…