ಸುರಪುರ: ಯಾವುದೇ ಒಬ್ಬ ವ್ಯಕ್ತಿ ಉನ್ನತಿ ಹೊಂದಿದ್ದಾನೆ ಎಂದರೆ ಅದಕ್ಕೆ ಗುರುವಿನ ಮಾರ್ಗದರ್ಶನ ಕಾರಣವಾಗಿರಲಿದೆ,ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ಪರಿಪೂರ್ಣನಾಗಲು ಗುರು ಇಲ್ಲದೆ ಸಾಧ್ಯವಿಲ್ಲ ಎಂದು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಗುರು ಶಾಂತಮೂರ್ತಿ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹಾಗೂ ಶುಭಮಸ್ತು ಶಿಕ್ಷಣ ಮತ್ತು ಗ್ರಾಮೀಣಾಭಿವೃಧ್ಧಿ ಸಂಸ್ಥೆಯಿಂದ ಗುರುಪೌರ್ಣಿಮೆ ಅಂಗವಾಗಿ ನಡೆದ ಗುರುವಂದನೆ ಸ್ವೀಕರಿಸಿ ಮಾತನಾಡಿ,ಇಂದು ತಾವೆಲ್ಲರು ಗುರುಪೌರ್ಣಿಮೆ ಅಂಗವಾಗಿ ಗುರುವಿಗೆ ಗೌರವಿಸುವ ಮೂಲಕ ದೇಶದ ಪರಂಪರೆ,ಆಚರಣೆಯನ್ನು ತಾವು ಮುಂದುವರೆಸಿಕೊಂಡು ಹೋಗುವ ಸಂಸ್ಕಾರ ಹೊಂದಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗುರುಪೌರ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಯ್ಯಸ್ವಾಮಿ ಹಿರೇಮಠ,ನಿಸರ್ಗ ಚೆಟ್ಟಿ,ಪ್ರೀತಿ ದೇವಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.ಉಪನ್ಯಾಸಕ ಮಂಜುನಾಥ ಚೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗುರುಪೌರ್ಣಿಮೆ ಅಂಗವಾಗಿ ರುಕ್ಮಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಾದ ಸೂಗುರೇಶ ವಾರದ್,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ ಗುರುಶಾಂತಮೂರ್ತಿ ಶಿವಾಚಾರ್ಯರನ್ನು ಭೇಟಿ ಮಾಡಿ ಸನ್ಮಾನಿಸಿ ಆಶಿರ್ವಾದ ಪಡೆದರು.ಅಲ್ಲದೆ ಬಣಗಾರ ಪೌಂಡೇಶನ್ ವತಿಯಿಂದ ಅಧ್ಯಕ್ಷ ವಸಂತಕುಮಾರ ಬಣಗಾರ ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.
ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…
ಕಲಬುರಗಿ: ಪ್ರವಾಸದಲ್ಲಿರುವ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಶುಕ್ರವಾರ ದಿನವಿಡೀ ಸಾರ್ವಜನಿಕರ ಅಹವಾಲು ಸ್ಚೀಕರಿಸಿದದ ನಂತರ ರಾತ್ರಿ…
ಕಲಬುರಗಿ: ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ…
ಕಲಬುರಗಿ: ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ನವೆಂಬರ್ 18ರಂದು ಕಲಬುರಗಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರದೇಶ…
ಕಲಬುರಗಿ: ಇಲ್ಲಿನ ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳು ನೂತನ ಆವಿಷ್ಕಾರವೊಂದನ್ನು ಮಾಡುವ ಮೂಲಕ ಗೋವಾದಲ್ಲಿ ನಡೆದ ವಾರ್ಷಿಕ…
ಶಹಾಬಾದ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ…