ಬಿಸಿ ಬಿಸಿ ಸುದ್ದಿ

ಸಮಾಜ ಪರಿವರ್ತನೆಗೆ ಕಾವ್ಯ ಮಿಡಿಯಲಿ: ಡಾ. ಚಂದ್ರಕಲಾ ಬಿದರಿ

ಕಲಬುರಗಿ: ಮಾನಸಿಕ ನೆಮ್ಮದಿ ಹಾಗೂ ಸಮಾಜ ಪರಿವರ್ತನೆಗೆ ಕಾವ್ಯ ಸದಾ ಮಿಡಿಯಲಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಚಂದ್ರಕಲಾ ಬಿದರಿ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ ಸಮಾರಂಭದಲ್ಲಿ ಲೇಖಕಿ-ಶಿಕ್ಷಕಿ ಅನುಪಮಾ ಜಿ ಅಪಗುಂಡೆ ಅವರ ರಚಿತ ಇನಿ ದನಿ ಹನಿಗವಿತೆಗಳ ಸಂಕಲನವನ್ನು ಜನಾರ್ಪಣೆ ಮಾಡಿ ಮಾತನಾಡಿದ ಅವರು, ಮನಸ್ಸು ಕಟ್ಟುವ ಸಾಹಿತ್ಯದ ಕೃತಿಗಳು ಹೆಚ್ಚಾಗಿ ಬರಬೇಕು. ಸಾಹಿತ್ಯದೊಳಗೆ ಹನಿಗವಿತೆಗಳು ನಿರಂತರತೆ ಹೊಂದಿದ್ದು, ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ವಿಸ್ತಾರ ಹೊಂದಬೆಕಾಗಿದೆ. ಇನಿ ದನಿ ಕೃತಿಯಲ್ಲಿ ಸಾಮಾಜಿಕ ಕಳಕಳಿ ತೋರುವ ಹನಿಗವಿತೆಗಳು ವಾಸ್ತವದಿಂದ ಮೂಡಿ ಬಂದಿವೆ ಎಂದು ತಿಳಿಸಿದರು.

ಕೃತಿ ಪರಿಚಯಿಸಿದ ಹಿರಿಯ ಕಥೆಗಾರತಿ ಕಾವ್ಯಶ್ರೀ ಮಹಾಗಾಂವಕರ್, ಕಾವ್ಯ ಪ್ರೀತಿ, ಸಾಮಾಜಿಕ ಬದುಕನ್ನು ಚಿತ್ರಿಸುವ ಕೃತಿ ಮೌಲಿಕವಾಗಿದೆ. ವ್ಯಂಗ್ಯ, ವಿಡಂಬನೆಯ ಮೂಲಕ ಬದುಕಿನ ತಲ್ಲಣಗಳಿಗೆ ಸ್ಪಂದಿಸುವ ಕೃತಿ ಜೀವಪರವಾಗಿದೆ. ವ್ಯಕ್ತಿಯ ಮನೋಭಾವ ಅಕ್ಷರ ರೂಪಗಳಾದಾಗ ಕಾವ್ಯ ರಚನೆ ಪರಂಪರೆ ಬೆಳೆಯಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ನಾಡು ನುಡಿ, ನೆಲ, ಜಲ ರಕ್ಷಣೆ ನಮ್ಮ ಕರ್ತವ್ಯ. ಕನ್ನಡ ಸಾಹಿತ್ಯದಲ್ಲಿ ಚುಟುಕು ಸಾಹಿತ್ಯ ವಿಶಿಷ್ಟ ಪ್ರಕಾರದ ಸಾಹಿತ್ಯವಾಗಿದ್ದು, ಅದನ್ನು ಇನ್ನಷ್ಟು ಹೆಮ್ಮರವಾಗಿ ಬೆಳೆಯಲು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳಂತಹ ಕಾರ್ಯಕ್ರಮಗಳು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದಿನ ಹೊಸ ಪೀಳಿಗೆಯೂ ಸಹ ಚುಟುಕು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡ ಭಾಷೆ, ನೆಲ ಜಲವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಕೃತಿ ಲೇಖಕಿ ಅನುಪಮಾ ಅಪಗುಂಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ ಗಿರೀಶ ಕಡ್ಲೇವಾಡ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಕಿರಿಯ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮರೆಪ್ಪ ಎಂ ಬಸವಪಟ್ಟಣ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕಾರ್ಯದರ್ಶಿಗಳಾದ ಸಿದ್ಧಲಿಂಗ ಜಿ ಬಾಳಿ, ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು.

ಪ್ರಮುಖರಾದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಜಿಪಂ ನ ಮಾಜಿ ಸದಸ್ಯ ಪ್ರೇಮಕುಮಾರ ರಾಠೋಡ, ರೇವಣಸಿದ್ದಪ್ಪ ಜೀವಣಗಿ, ಎ ಕೆ ರಾಮೇಶ್ವರ, ಡಾ. ಎಸ್ ಎ ವಡ್ಡನಕೇರಿ, ವಿನೋದಕುಮಾರ ಜೆ.ಎಸ್., ಧರ್ಮರಾಜ ಜವಳಿ, ರಮಾನಂದ ಹಿರೇಜೇವರ್ಗಿ, ಸಂತೋಷ ಕುಡಳ್ಳಿ, ಪ್ರಭು ಫುಲಾರಿ, ರವೀಂದ್ರಕುಮಾರ ಭಂಟನಳ್ಳಿ, ಭೀಮರಾಯ ಹೇಮನೂರ, ವಿಶ್ವನಾಥ ಮಂಗಲಗಿ, ಆರ್ ಸಿ ಘಾಳೆ, ಸಿದ್ಧರಾಮ ರಾಜಮಾನೆ, ಚಂದ್ರಕಾಂತ ಸೂರನ್, ಪ್ರಮೋದ ಕಟ್ಟಿ, ಎಸ್ ಪಿ ಸುಳ್ಳದ, ಸಿ.ಎಸ್. ಮಾಲಿ ಪಾಟೀಲ, ದೇವೀಂದ್ರಪ್ಪ ಗಣಮುಖಿ, ಅಶೋಕ ದೊಡ್ಮನಿ, ಶಿವಲಿಂಗಪ್ಪ ಅಷ್ಟಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಮಕ್ಕಳಿಗೆ ಮಾತೃಭಾಷೆ ಗಟ್ಟಿಯಾಗಿ ಓದಲು ಬರೆಯಲು ಹಾಗೂ ಕಲಿಸಬೇಕು. ಈ ದಿಸೆಯಲ್ಲಿ ಪ್ರೇರೇಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ದುರಂತ ಅನುಭವಿಸಬೆಕಾಗುತ್ತದೆ.

emedialine

Recent Posts

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ

ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…

44 mins ago

ಜಾನಪದ ನೃತ್ಯೋತ್ಸವ ಕಾರ್ಯಕ್ರಮ

ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …

47 mins ago

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಹನುಮಂತರಾವಗೆ ಅಭಿನಂದನ ಸಮಾರಂಭ

ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…

49 mins ago

ಕಲಬುರಗಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ಸಂಘಟನಾ ವೇದಿಕೆ (ಕನ್ನಡಿಗರ ಶಕ್ತಿ) ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಕನ್ನಡದ ಹಬ್ಬ…

53 mins ago

ನೊಂದವರ ಬಾಳಿಗೆ ಬೆಳಕಾಗುವವರೇ ನೈಜ ಸಾಧಕರು

ಕಲಬುರಗಿ: ಯಾವ ವ್ಯಕ್ತಿ ಸಮಾಜದಲ್ಲಿರುವ ನೊಂದವರು, ಬಡವರು, ಅಸಹಾಯಕರ ಪರ ಕಾಳಜಿ ಹೊಂದಿ ಅವರಿಗೆ ಸಹಾಯ ಮಾಡುತ್ತಾನೆಯೋ, ಅವರೇ ಸಮಾಜದ…

57 mins ago

ಮಂಡ್ಯ ಟೈಮ್ಸ್ ಸಂಪಾದಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…

5 hours ago