ರಾವೂರ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕಾನೂನಿನ ತಿಳುವಳಿಕೆ ಹೊಂದಬೇಕು ಎಂದು ಡಿ.ವಾಯ್. ಎಸ್. ಪಿ ಶಂಕರಗೌಡ ಪಾಟೀಲ್ ಹೇಳಿದರು.
ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನಿರುಣಿಸಿ ಉದ್ಘಾಟಿಸಿ ಮಾತನಾಡಿದರು.
ನೆಲದ ಕಾನೂನನ್ನು ಗೌರವಿಸುವವರನ್ನು ಪೊಲೀಸರು ಗೌರವಿಸುತ್ತಾರೆ. ಇತ್ತೀಚಿಗೆ ಜಾತಿ, ಧರ್ಮಗಳ ನಡುವಿನ ಜಗಳಗಳು. ಹೆಣ್ಣು, ಹೊನ್ನು, ಮಣ್ಣಿಗಾಗಿ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಕಾನೂನಿನ ತಿಳುವಳಿಕೆಯ ಕೊರತೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ.
ಕಾನೂನುಗಳನ್ನು ಸರಿಯಾಗಿ ಪಾಲಿಸಿದರೆ ಸಮಾಜದಲ್ಲಿ ಯಾವುದೇ ಅಶಾಂತಿ ಇರುವುದಿಲ್ಲ. ಕಾನೂನು ಮೀರಿ ಅಶಾಂತಿ ಉಂಟಾದರೆ ಮಾತ್ರ ಪೊಲೀಸರು ಬರಬೇಕಾಗುತ್ತದೆ ಎಂದರು. ಇತ್ತೀಚಿಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅನಗತ್ಯವಾಗಿ ಬರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ. ಅನಾಮಧೇಯರ ಬಲೆಗೆ ಬೀಳಬೇಡಿ ಎಂದರು. 18 ವರ್ಷ ಕೆಳಗಿನ ಮಕ್ಕಳು ಬೈಕ್ ನಡೆಸುವುದಾಗಲಿ, ಕುಡಿದು ಗಾಡಿ ಚಲಾಯಿಸುವುದು. ಹೆಲ್ಮೆಟ್ ಇದ್ದದ ಪ್ರಯಾಣ ಮುಂತಾದವುಗಳಿಂದ ಸಣ್ಣ ವಯಸ್ಸಿನ ಯುವಕರ ಜೀವ ಬಲಿಯಾಗುತ್ತಿದೆ.
ಸಮಾಜದಲ್ಲಿ, ನಿಮ್ಮ ಸುತ್ತ ಮುತ್ತ ಶಾಂತಿ ಕದಾಡುವ ಪ್ರಯತ್ನಗಳು ಆದರೆ ಖಂಡಿತ ಪೊಲೀಸ್ ಸಹಾಯವಾಣಿಗೆ ಕರೆಮಾಡಿ. ನಾವು ಸದಾ ನಿಮ್ಮ ಸೇವೆಯಲ್ಲಿರುತ್ತೇವೆ ಎಂದು ಅಭಯ ನೀಡಿದರು.
ಮಕ್ಕಳು ಕೇಳಿದ ಕುತೂಹಲದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದರು.
ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು. ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಮುಖ್ಯಗುರು ವಿದ್ಯಾಧರ ಖಂಡಾಳ, ಮಂಜುಳಾ,ಶಿಕ್ಷಕ ಸಿದ್ದಲಿಂಗ ಬಾಳಿ ವೇದಿಕೆ ಮೇಲಿದ್ದರು.
ವಾಡಿ ಪಿ ಎಸ್ ಐ ತಿರುಮಲೇಶ ಕುಂಬಾರ, ಎ ಎಸ್ ಐ ಚೆನ್ನಮಲ್ಲಪ್ಪ ಪಾಟೀಲ್, ಪೇದೆಗಳಾದ ಗುಂಡಪ್ಪ ಕೊಗನೂರ, ಲಕ್ಷ್ಮಣ ಇದ್ದರು.
ಯುವಮುಖಂಡ ಶರಣು ಜ್ಯೋತಿ,ಶಿಕ್ಷಕರಾದ ಈಶ್ವರಗೌಡ ಪಾಟೀಲ್, ಶಿವಕುಮಾರ ಸರಡಗಿ, ಶ್ಯಾಮಸುಂದರ ದೊಡ್ಡಮನಿ, ರೇಣುಕಾ, ಸುಗುಣಾ ಕೊಳಕೂರ, ರಾಧಾ ರಾಠೋಡ, ಭುವನೇಶ್ವರಿ ಎಂ. ಶರಣು ಸಜ್ಜನ, ಬಾಬು ಕಣ್ಣೂರ ಸೇರಿದಂತೆ ಸರಕಾರಿ ಪ್ರೌಢ ಶಾಲೆಯ ಮಕ್ಕಳು ಶಿಕ್ಷಕರು ಪಾಲ್ಗೊಂಡಿದ್ದರು.
ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಬರುವ ಈ ವಿಷಯ ಮಕ್ಕಳಿಗೆ ಪರಿಣಾಮಕಾರಿಯಾಗಿ ಅರ್ಥೈಸಲು ಪೊಲೀಸ್ ಅಧಿಕಾರಿಗಳನ್ನೇ ಶಾಲೆಗೆ ಕರಿಸಿ ಮಾತನಾಡಿಸಿದ್ದು ಖುಷಿ ಕೊಟ್ಟಿದೆ. ಒಂದು ಚಟುವಟಿಯನ್ನು ಹೀಗೂ ಮಾಡಬಹುದು ಎನ್ನಲು ಇದು ಮಾದರಿಯಾಗಿದೆ.ಅದೊಂದು ತುಂಬಾ ಅರ್ಥಪೂರ್ಣ ಕಾರ್ಯಕ್ರಮ. – ಸಿದ್ದಲಿಂಗ ಜಿ ಬಾಳಿ ( ಶಿಕ್ಷಕರು )
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…