ಅಹಿಂದ ವರ್ಗದ ಲೇಖಕರಿಗೆ ಮುಖವಾಣಿಯಾಗಲಿ: ಸಾರಂಗಧರ ಶ್ರೀಗಳು

ಕಲಬುರಗಿ:ಕನ್ನಡ ಕಟ್ಟುವ ಕಾರ್ಯ ಕಲ್ಯಾಣ ಕರ್ನಾ ಟಕ ಪ್ರದೇಶದಲ್ಲಿ ಭಾಲ್ಕಿ ಚನ್ನಬಸವ ಪಟ್ಟದ್ದೇವರು ಮತ್ತು ದೊಡ್ಡಪ್ಪ ಅಪ್ಪ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸುವ ಕೆಲಸ ಮಾಡಿದ್ದಾರೆ.ಹಿಂದೆ ಓದು ಬರಹ ಎಲ್ಲರಿಗಿರಲಿಲ್ಲ.ಇಂದು ಅವಕಾಶವಿದೆ. ಹಿಂದು ಳಿದ,ದಲಿತ,ಮಹಿಳೆಯರಿಗೆ ಅವಕಾಶ ನೀಡುವ ವೇದಿಕೆಯಾಗಲಿ ಎಂದು ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

‌ರಂಗಾಯಣ ಸಭಾ ಭವನದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಉದ್ಘಾಟಿಸಿ,ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು ಅವರು ಕನ್ನಡ ಭಾಷೆ ಶ್ರೀಮಂತವಾ ಗಿದೆ.ಕನ್ನಡ ಕೆಲಸ ಮಾಡಿದಷ್ಟು ಹೆಚ್ಚು ಅವಕಾಶವಿದೆ ಎಂದರು.

‌ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್.ಗೋನಾಳ ವೆಂಕಟರಾಮಯ್ಯನವರು ಸ್ಥಾಪಿಸಿದ ವೇದಿಕೆ ನನ್ನ ಕೊ ರಳಿಗೆ ಹಾಕಿದ್ದಾರೆ.ಈ ಪ್ರದೇಶದ ಸಾಹಿತ್ಯ ಹಿಂದೆ ಬಿದ್ದಿ ಲ್ಲ.ಅವಕಾಶ ವಂಚಿತವಾದ ಪ್ರತಿಭೆಗಳಿವೆ.ಇಲ್ಲಿಯ ಸಮಸ್ಯೆ ಆಲಿಸಬೇಕು.ಅದರೊಂದಿಗೆ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರು ಸಾಹಿತಿಗಳನ್ನೇ ಸರ್ವಾಧ್ಯಕ್ಷತೆ ನೀಡಬೇಕೆಂದು ಆಗ್ರಹಿಸಿದರು.

‌‌‌‌ ನಾಡದೇವಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ರವೀಂದ್ರ ಕರಜಗಿ ಮಾತನಾಡಿ ಭ್ರಷ್ಟಾಚಾರ, ಇವುಗಳಿಂದ ಸುಂದರವಾದ ಕನ್ನಡ ಕಟ್ಟ ಬೇಕಾದ ಅನಿವಾರ್ಯತೆ ಇದೆ ಎಂದರು.ಕನ್ನಡ ಉಳಿ ಸಲು ಬೆಳೆಸಲು ವೇದಿಕೆ ಅವಶ್ಯವೆಂದು ಸಾಹಿತ್ಯ ಅಕಾ ಡೆಮಿ ಸದಸ್ಯೆ ಡಾ.ಚಂದ್ರಕಲಾ ಬಿದರಿ ನುಡಿದರು.ವಾ ಣಿಜ್ಯ ತೆರಿಗೆ ಅಧಿಕಾರಿ ಡಾ.ಅಂಬಾದಾಸ ಕಾಂಬಳೆ ಕನ್ನಡ ಪದವೀಧರರಿಗೆ ಗುರುತಿಸುವ ಕೆಲಸ ವೇದಿಕೆ ಮಾಡಿದೆ ಎಂದರು.ಸಿದ್ಧಲಿಂಗೇಶ್ವರ ಪ್ರಕಾಶನದ ಬಸ ವರಾಜ ಕೊನೇಕ ನಮ್ಮ ಪ್ರಕಾಶನದ ಸಾಹಿತ್ಯದ ಬೆಳ ವಣಿಗೆಗೆ ಗವಿಸಿದ್ಧಪ್ಪರ ಕೊಡುಗೆ ಇದೆ.ಕನ್ನಡ ಒತ್ತಕ್ಷರ, ಕಲಿಕೆಗೆ ವೇದಿಕೆಯ ಕಾರ್ಯಕ್ರಮಕ್ಕೆ ಸಹಕಾರ ನೀಡು ವೆ ಎಂದರು.ಕಾರ್ಯಾಧ್ಯಕ್ಷೆ ಶಾಂತಾ ಪಸ್ತಾಪೂರ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀ ಲ ಮಾತನಾಡಿ ಈ ವೇದಿಕೆ ಯಾವುದೇ ಪರಿಷತ್ತಿಗೆ ಸ್ಪರ್ಧೆ ಅಲ್ಲ ಕನ್ನಡ ಕೆಲಸ ನಿರಂತರ ಮಾಡಬೇಕಾಗಿದೆ ಅಲಕ್ಷಕ್ಕೆ ಒಳಗಾದ ಸಾಹಿತಿಗಳು,ಪ್ರತಿಭಾವಂತರ ವೇದಿ ಕೆಯನ್ನು ಕಲ್ಪಿಸಲಾಗುವುದು ಎಂದರು.

ಕಿರಣ ಪಾಟೀಲ,ರೇಣುಕಾ,ಬಸವರಾಜ ಶ್ರೀಂಗೇರಿ ಅವರು ಭಾವಗೀತೆ,ವಚನ,ಗೀತೆ ಹಾಡಿದರು.ಕೋಶಾ ಧ್ಯಕ್ಷ ಸಿದ್ಧರಾಮ ಸರಸಂಬಿ ಸ್ವಾಗತಿಸಿದರು.ಅತಿಥಿ ಅಧ್ಯಾಪಕ ಡಾ.ರಾಜಕುಮಾರ ಮಾಳಗೆ ನಿರೂಪಿಸಿದ ರು.ಶಹಬಾದ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಚಿದಾನಂದ ಕುಡ್ಡನ್ ವಂದಿಸಿದರು.

ಸಿರಿಗನ್ನಡ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತರು: ಡಾ.ಸ್ವಾಮಿರಾವ್ ಕುಲಕರ್ಣಿ, ಚಂದ್ರಶೇಖರ ಕಡಕೋ ಳಕರ,ಡಾ.ಶಾಂತಪ್ಪ ಡಂಬಳ,ಡಾ.ಸುವರ್ಣ ಅಳ್ಳೊಳ್ಳಿ, ಡಾ.ಹಣಮಂತಪ್ಪ ನಡುವಿನಕೇರಿ,ಕಿಶನ್ ಕಟಕೆ,ಸಂಗ ಮೇಶ ಸಗರ,ಡಾ.ಈರಣ್ಣ ಇಂಜಗೇರಿ,ಡಾ.ಸುಜಾತ ಭಾಸ್ಕರ್, ಡಾ.ಶಿವಪುತ್ರ ಮಾವಿನ,ಶಿವಪ್ಪ ಹುಣಚಾಳ, ಡಾ.ಗೌತಮ ಕರಿಕಲ್,ಡಾ.ರಾಜಶೇಖರ ಹೂಗಾರ.ನೂತನ ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ ಸನ್ಮಾನ ಮಾಡಲಾಯಿತು.

ತಾಲೂಕಾಧ್ಯ ಕ್ಷರಾದ ಕಲಬುರಗಿ- ಡಾ.ಸಿದ್ಧಲಿಂಗ ದಬ್ಬಾ,ಚಿಂಚೋಳಿ – ಗೀತಾ ಐನೋಳ್ಳಿ,ಆಳಂದ- ಡಾ.ಅವಿನಾಶ ದೇವನೂ ರ,ಸೇಡಂ-ಅವಿನಾಶ ಬೋರಂಚಿ,ಕಮಲಾಪುರ- ನಾಗಣ್ಣ ಬಡಿಗೇ ರ,ಜೇವ ರಗಿ-ಭಾಗ್ಯ ಆದವಾನಿ, ಯಡ್ರಾಮಿ-ಡಾ.ಚಾಂದಸಾಬ ಮುಜಾ ವರ, ಚಿತ್ತಾಪೂ ರ-ಡಾ.ರಾಜಕುಮಾರ ದುಮ್ಮ ನಸುರು,ಶಹಬಾದ- ಭಾಗ್ಯಶ್ರೀ ನರಗುಂದ ಕಾಳಗಿ- ಶರಣಬಸಪ್ಪ ರೆಡ್ಡಿ,ಅಫಜಲಪುರ- ಗೌತಮ ಸಕ್ಕರಗಿ ಅವರಿಗೆ ಸನ್ಮಾನಿಸಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದರು.

ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ,ಡಾ.ಕೆ.ಎಸ್.ಬಂಧು ಸುರೇಶ ಕಾನೇಕರ, ಬಸವರಾಜ ಐನೋಳಿ,ಡಾ.ಮಹಾ ದೇವ ಪೂಜಾರಿ,ಡಾಕಪ್ಪ ಮೋತಿಲಾಲ,ಡಾ.ಮಲ್ಲಿನಾಥ ನಿಂಬರ್ಗಿ,ಡಾ.ಶಿವಪುತ್ರ ಹೊಳ್ಕರ್,ಮನೋಹರ ಮರ ಗುತ್ತಿ,ಸಿ.ಎಸ್.ಮಾಲಿಪಾಟೀಲ, ಡಾ.ಸಿದ್ಧಪ್ಪ ಹೊಸಮ ನಿ,ಡಾ.ಶೀಲಾದೇವಿ ಎಸ್.ಬಿರಾದಾರ,ಡಾ.ಸದಮಕರ ಬಾಳಿ,ಅಣ್ಣಾರಾವ್ ಯಲಮಡಗಿ,ಶರಣಪ್ಪ ಗದ್ಲೇಗಾಂ ವ್ ಇತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago