ಸತ್ಯದ ಮಾರ್ಗದಲ್ಲಿ ಶರಣರ ಚಿಂತನೆಗಳಿದ್ದವು:ಶಾಸಕ ಅಲ್ಲಮ ಪ್ರಭು ಪಾಟೀಲ

ಕಲಬುರಗಿ; ಶ್ರಾವಣ ಮಾಸದ ಅಂಗವಾಗಿ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಹಾದಾಸೇಹಿ ಶ್ರೀ ಶರಣಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ಕಾರ್ಯಕ್ರಮ ಜರುಗಿತು.ನಂತರ ಪಲ್ಲಕ್ಕಿ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಯಿತು.ಮೂಗುಳನಾಗಾಂವ ಹಿರೇಮಠ ಕಟ್ಟಿಮನಿ ಸಂಸ್ಥಾನದ ಪೂಜ್ಯ ಷ.ಬ್ರ.ಶ್ರೀ ಅಭಿನವ ಶಿವಾಚಾರ್ಯರು,ಶಾಸಕ ಅಲ್ಲಮಪ್ರಭು ಪಾಟೀಲ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು
.
ನಂತರ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಶರಣಬಸವೇಶ್ವರರು ತ್ಯಾಗಿ ಪುರುಷರಾಗಿದ್ದರು.ಪುರಾಣ ಪ್ರವಚನಗಳು ಕೇಳುವುದರಿಂದ ಮನುಷ್ಯನಿಗೆ ಸತ್ಯದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ.ಯಾವುದೇ ಸಂಕಷ್ಟಗಳು ಎದುರಾದರೆ ಅವಗಳನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿ ನಿಲ್ಲುವಂತೆ ಮಾಡುತ್ತದೆ ಎಂದರು.ತಿಂಗಳ ಪರ್ಯಂತ ಟ್ರಸ್ಟನವರು ಪ್ರಸಾದ ದಾಸೋಹ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಮುಗುಳನಾಗಾಂವ ಕಟ್ಟಿಮನಿ ಹೀರೇಮಠ ಸಂಸ್ಥಾನ ಮಠದ ಪೂಜ್ಯ ಅಭಿನವ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿದ ಅವರು ಮನುಷ್ಯ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು.ಕಲಬುರಗಿಯ ಶರಣಬಸವೇಶ್ವರರು ಅನ್ನ ದಾಸೋಹದ ಜೊತೆ ಪ್ರಸಾದ ದಾಸೋಹ ಮಾಡುವ ಮೂಲಕ ಹೊಸ ನಾಂದಿ ಹಾಡಿದರು.ಅಂದಿನ ಶರಣರು ಸರಳ ಜೀವನ ನಡೆಸಿದರು.ಅವರು ಹಾಕಿಕೊಟ್ಮ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾದಿತು ಎಂದರು.

ಹಿರಿಯ ಹೋರಾಟಗಾರ ಡಾ.ಲಕ್ಷ್ಮಣ ದಸ್ತಿ ಮಾತನಾಡಿ ಮನುಷ್ಯನ ನಡೆ ಕಾಯಕದಲ್ಲಿ ಕಾಣಬೇಕು ಮಾತಿನಲ್ಲಿ ಅಲ್ಲ ಎಂದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಜಯನಗರ ಶಿವಮಂದಿರದಲ್ಲಿ ಒಂದು ತಿಂಗಳ ಯಶಸ್ವಿ ಪುರಾಣ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಚಿಂತಕ ಮಹಾಬಲೇಶ್ವರ ಇದೇ ಸಂದರ್ಭದಲ್ಲಿ ಮಾತನಾಡಿದರು.

ಪತ್ರಕರ್ತ ಸುಭಾಷ ಬಣಗಾರ ವೇದಿಕೆ ಮೇಲೆ ಇದ್ದರು.ವಿರೇಶ ದಂಡೋತಿ, ಸೂರ್ಯಕಾಂತ ಕೆ.ಬಿ, ಬಂಡಪ್ಪ ಕೇಸೂರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ,ಶಿವಕುಮಾರ ಪಾಟೀಲ,ಸುನೀಲ ಬಿಡಪ್,ನಾಗರಾಜ ಖೂಬಾ, ಎಂ.ಡಿ.ಮಠಪತಿ,ಎಸ್ .ಡಿ.ಸೇಡಂಕರ,ಗುರುಪಾದಪ್ಪ ಕಾಂತಾ,ಬಸವರಾಜ ಪುರ್ಮಾ,ಭೀಮಾಶಂಕರ ಶೆಟ್ಟಿ,ಮಲ್ಲಯ್ಯ ಸ್ವಾಮಿ ಗಂಗಾಧರ ಮಠ,ವೀರಪ್ಪ ಹುಡುಗಿ,ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನಿತಾ ನವಣಿ, ಸುಷ್ಮಾ ಮಾಗಿ, ವಿಜಯಾ ದಂಡೋತಿ, ಗೀತಾ ಸಿರಗಾಪೂರ, ಲತಾ ತುಪ್ಪದ,ಸೇರಿದಂತೆ ನೂರಾರು ಮಹಿಳೆಯರು,ಹಿರಿಯರು ಹಾಗೂ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago