ಕಲಬುರಗಿ: ಚಿಂಚೋಳಿ ಹೊರವಲಯದ ಸಿದ್ದಸಿರಿ ಇಥೆನಾಲ್ ಕಾರ್ಖಾನೆಗೆ ಸ್ಥಳೀಯ ಚಿಂಚೋಳಿ ಹಾಗು ಸುತ್ತ ಮುತ್ತಲಿನ ತಾಲೂಕಿನ ರೈತರಿಗೆ ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್ ಷೇರು ಕೊಡಿಸಬೇಕೆಂದು ರೈತರ ಪರವಾಗಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರರಾದ ಶರಣು ಪಾಟೀಲ ಮೋತಕಪಲ್ಲಿ ಮನವಿ ಮಾಡಿದ್ದಾರೆ.
ಕಬ್ಬು ನುರಿಸಿವ ಕಾರ್ಖಾನೆ ಕೇವಲ ವ್ಯಾಪಾರ ಕೇಂದ್ರವಾಗದೆ ನಮ್ಮೆಲ್ಲ ರೈತರ ಜೀವನಾಡಿ ಆಗಬೇಕು, ಕಬ್ಬು ಬೆಳೆಯುವ ರೈತರು ಅದರ ಷೇರುದಾರ ಆಗುವದು ಅತೀ ಅವಶ್ಯ. ದಶಕಗಳಿಂದ ಯಾವುದೇ ತೋಡಕಿಲ್ಲದೆ ಪಕ್ಕದ ಬೀದರ ಜಿಲ್ಲೆಯಲ್ಲಿ ನಿರಾಯಸವಾಗಿ ಕಾರ್ಖಾನೆಗಳು ಹೇಗೆ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ. ಕಾರ್ಖಾನೆ ಕೇವಲ ವ್ಯಾಪಾರ ಕೇಂದ್ರ ಆಗದೆ, ರೈತರು ಕೇವಲ ಗ್ರಾಹಕರು ಆಗಬಾರದು. ಇವರಿಬ್ಬರ ಒಡೆತನದಲ್ಲಿ ಕಾರ್ಖಾನೆ ನಡೆದಾಗ ಮಾತ್ರ ಒಂದು ಕೈಗಾರಿಗೆ ಗಟ್ಟಿಯಾಗಿ ನೆಲೆಯೂರಿ ನಿಜವಾಗಿ ರೈತರ ಉಪಯೋಗಿ ಆಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಶಾಸಕರು ಸ್ಥಳೀಯ ರೈತರೆಲ್ಲರ ಅಭಿಪ್ರಾಯ ಪಡೆದು, ಸಿದ್ದಿಸಿರಿ ಕಾರ್ಖಾನೆ ಮಾಲೀಕರಾದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಮನವರಿಕೆ ಮಾಡಿಕೊಟ್ಟು ಸ್ಥಳೀಯ ರೈತರನ್ನು ಷೇರುದಾರರನ್ನಾಗಿ ತೆಗೆದುಕೊಳ್ಳಲು ಒತ್ತಾಯಿಸಿ ನಮ್ಮ ರೈತರ ಹಿತ ಕಾಪಾಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…