ಕಲಬುರಗಿ; ಸರಕಾರ ನಿಜವಾದ ಕಲಾವಿದರನ್ನು ಗುರುತಿಸಿ ಅವರ ಕುಟುಂಬಕ್ಕೆ ಭದ್ರತೆ ಒದಗಿಸುವುದರೊಂದಿಗೆ ಕಲಾವಿದರಿಗಾಗಿ ಗ್ಯಾರಂಟಿ ಯೋಜನೆ ಜಾರಿಗೆ ಮಾಡಲಿ ಎಂದು ಶರಣ ಚಿಂತಕರಾದ ಅಂಬಾರಾಯ ಬಿರಾದಾರ ಹೇಳಿದರು.
ತಾಲೂಕಿನ ಜಂಬಗಾ(ಬಿ) ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ವಿಶ್ವ ಜಾನಪದ ದಿನಾಚರಣೆಯ ನಿಮಿತ್ಯ ಕನ್ನಡ ಜಾನಪದ ಪರಿಷತ್ ತಾಲೂಕ ಉತ್ತರ ವಲಯದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅರ್ಜಿ ಹಾಕಿದವರನ್ನು ಕಾರ್ಯಲಯದಲ್ಲಿ ಕುಳಿತುಕೊಂಡು ಫೋಟೋಗಳನ್ನು ನೋಡಿ ಕೆಲವರಿಗೆ ಧನ ಸಹಾಯ ಮಾಡುತ್ತಿದೆ ಆದರೆ ನಿಜವಾದ ಕಲಾವಿದರನ್ನು ಗುರುತಿಸದಿರುವದು ವಿಷಾದಕರ ಸಂಗತಿ. ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ತಮ್ಮ ಕಲೆಗಾಗಿ ಹಗಲಿರುಳು ಸೇವೆ ಮಾಡಿ ತಮ್ಮ ಜೀವನವೇ ಸಮರ್ಪಣೆ ಮಾಡಿದ್ದಾರೆ ಅಂತವರಿಗೆ ಯಾವುದೇ ಸೌಲಭ್ಯ ಇರದೆ ಸಂದೀಗ್ಧ ಪರಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಅಂಥವರನ್ನು ಸರಕಾರ ಹಾಗೂ ಸಾರ್ವಜನಿಕರು ಗುರುತಿಸಲಿ. ಕಲಾವಿದರಿಗೆ ಕಲೆಯಿಂದ ಗುರ್ತಿಸಲಿ ರಿಕ್ಮೆಂಡ್ ಬೇಡ ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಜನಪದ ಕಲಾವಿದರು ಸಮಯಕ್ಕೆ ಸರಿಯಾಗಿ ತಮ್ಮ ಗೀತೆಗಳು ರಚನೆ ಮಾಡಿ ಆಧುನಿಕ ಸಮಾಜದ ಪರಿಕಲ್ಪನೆಯನ್ನು ನೀಡುತ್ತಿದ್ದಾರೆ. ಇಂತಹ ಜನಪದ ಕಲಾವಿದರನ್ನು ಗೌರವಿಸಿ ಸಮಾಜಕ್ಕೆ ಪರಿಚಯ ಮಾಡುವುದು ಕನ್ನಡ ಜಾನಪದ ಪರಿಷತದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ವೇದಿಕೆ ಮೇಲೆ ಮುಖಂಡರಾದ ಜಗನ್ನಾಥ ಮಂಠಾಳ, ಗಿರಿರಾಜ ಬಿರಾದಾರ, ನಾಗೇಂದ್ರಪ್ಪಾ ಬಾಬನ ಗೋಳ, ಗುಂಡೆರಾಯ ಪಾಟ್ಲಿ, ಉದಯಕುಮಾರ ಹತಗುಂದಿ, ಅಟ್ಟೂರ ಗ್ರಾಮದ ಯುವ ಮುಖಂಡರಾದ ಪರಶುರಾಮ ಎಸ್. ಜಡಗೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಂಬಗಾ(ಬಿ)ಗ್ರಾಮದ ಹಿರಿಯ ಜನಪದ ಕಲಾವಿದರಾದ ಶಿವರಾಯ ಎಸ್ ಬಾಬನಗೋಳ, ಚಂದ್ರಕಾಂತ ಎಸ್ ಬಿರಾದಾರ, ಯಶವಂತರಾವ ಎಮ. ಭೂತಿ,ಬಸವರಾಜ ಬಿ. ಗುತ್ತೇದಾರ ಹಾಗೂ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದ ಕಲಾವಿದರಾದ ವಿಠಲ ನಿಂಬಾಳೆ, ಶರಣಪ್ಪ ಬಿರಬಿಟ್ಟೆ ಎಲದಗುಂಡಿ ಗ್ರಾಮದ ಕಲಾವಿದರಾದ ಚಂದ್ರಕಾಂತ ಪಾಟೀಲ, ಬಸವರಾಜ ಪಾಟೀಲ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಜನರು ಭಾಗವಹಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…