ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

0
17

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು, ಕಲಬುರಗಿ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಹಿರಿಯ ಮುಖಂಡರಿಂದ ಶೃದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ  ಕೆ ನೀಲಾ ವಿದ್ಯಾರ್ಥಿ ಜೀವನದಿಂದಲೇ ಚಳುವಳಿಗೆ ಧುಮುಕಿದ್ದ ಕಾ.ಸೀತಾರಾಮ ಅವರು ಅಂದಿನ ಪ್ರದಾನ ಮಂತ್ರಿಯವರಾಗಿದ್ದ ಇಂದಿರಾಗಾಂಧಿಯವರ ಧೋರಣೆ ಖಂಡಿಸಿ ಹೋರಾಟ ಮಾಡಿ ಜೈಲು ಸೇರಿದ್ದರು. ನಂತರ ಶ್ರಮಿಕರ ಪರವಾದ ಧೋರಣೆಯೊಂದಿಗೆ ಮುಂದುವರೆದ ಅವರ ಹೋರಾಟದ ಬದುಕು ಸೈದ್ಧಾಂತಿಕ ಬದ್ಧತೆಯೊಂದಿಗೆ ಇಲ್ಲಿವರೆಗೆ ಬಂದಿತು ಎಂದು ತಿಳಿಸಿದ್ದರು.

Contact Your\'s Advertisement; 9902492681

ಎರಡು ಬಾರಿ ಸಂಸದರಾಗಿ ನೀತಿ ನಿರೂಪಣೆಯಲ್ಲಿ ಅವರು ಕೊಟ್ಟ ಕೊಡುಗೆ ಅಗಾಧವಾದದ್ದು. ಅತ್ಯಂತ ವಿವೇಕಪೂರ್ಣವಾದ  ಶ್ರಮಿಕರ ಪರವಾದ ವಾಕ್ಪಟುವಾಗಿದ್ದರು. ಭಾರತದಲ್ಲಿ ಸಿಪಿಐಎಂ ಪಕ್ಷವನ್ನು ಕಟ್ಟುವಲ್ಲಿ, ಬಹುಸಾಂಸ್ಕೃತಿಕ ಪರಂಪರೆಯನ್ನು ಬಲಿಷ್ಠಗೊಳಿಸುವಲ್ಲಿ ಕಾ.ಸೀತಾರಾಮ ಯೇಚೂರಿಯವರ ಅನವರತ ಶ್ರಮ ಭಾರತ ಎಂದೂ ಮರೆಯದು ಎಂದು ನೆನೆಪಿಸಿಕೊಂಡರು.

ದೇಶದ ಐಕ್ಯತೆಗಾಗಿ, ಭಾವೈಕ್ಯ ಪರಂಪರೆಗಾಗಿ, ಕೋಮುಸೌಹಾರ್ದತೆಗಾಗಿ ಕಾ.ಯೇಚೂರಿ ದಣಿವರಿಯದೆ ಶ್ರಮಿಸುವ ಸಂಗಾತಿಯಾಗಿದ್ದರು. ಫ್ಯಾಸಿಜಂನ ಕರಾಳ ಮುಖವನ್ನು ಬಯಲುಗೊಳಿಸಿ ಅದನ್ನು ಹಿಮ್ಮೆಟ್ಟಿಸಲು ಪಕ್ಷವನ್ನು ಮುನ್ನಡೆಸಿದವರು. ಚಿಂತನೆ ಮತ್ತು ಚಳುವಳಿ ಮೇಳೈಸಿದಂತಹ ವ್ಯಕ್ತಿತ್ವ ಅವರದಾಗಿತ್ತು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here