ಬೆಳಂ‌ ಬೆಳಗ್ಗೆ ಕಲಬುರಗಿಯಲ್ಲಿ ಗುಂಡಿನ‌ ಸದ್ದು

ಕಲಬುರಗಿ: ಆಳಂದ ತಾಲ್ಲೂಕಿನ ಮಾಜಿ ಗ್ರಾಪಂ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಭವಿಸಿದ ಆರೋಪಿಯನ್ನು ಬಂಧಿಸಲು ತೆರಳುದ ಸಂಧರ್ಭದಲ್ಲಿ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿರುವ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ಐ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಬಳಿ ನಡೆದಿದೆ.

ಆರೋಪಿ‌ ಲಕ್ಷ್ಮಣ ಪೂಜಾರಿ ಹಿತ್ತಲಸೀರೂರು (45) ಬಂಧಿತ ಆರೋಪಿ. ಪಿಎಸ್ಐ ಇಂದುಮತಿ ಅವರ ಮೇಲೆ ಧಾಳಿ ನಡೆಸಲು ಯತ್ನಿಸಿದ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಆಳಂದ ತಾಲ್ಲೂಕಿನ ಮಾಜಿ ಗ್ರಾ.ಪಂ ಸದಸ್ಯ ವಿಶ್ವನಾಥ್ ಜಮಾದರ ಮೇಲೆ ಗುಂಡು‌ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಲಕ್ಷ್ಮಣ ಪೂಜಾರಿ ಹಿತ್ತಲಸೀರೂ ಕೊಲೆ ಮಾಡಿ ತಲೆ ಮರಿಸಿಕೊಂಡಿರುವ ಬಗ್ಗೆ ಶುಕ್ರವಾರ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತು.

ಶನಿವಾರ ಬೆಳಿಗ್ಗೆ ಆರೋಪಿ ಬಂಧನಕ್ಕೆ ಪೊಲೀಸರು ಮುಂದಾಗಿರುವ ವೇಳೆ ಪೊಲೀಸರಿಂದ ಪೈರಿಂಗ್ ನಡೆದಿದೆ. ಆರೋಪಿ ಲಕ್ಷ್ಮಣ ಪೂಜಾರಿ ವಿರುದ್ಧ 11 ಕೇಸ್​ಗಳಿವೆ ಎಂದು ತಿಳಿದುಬಂದಿದೆ. ಫೈರಿಂಗ್ ಒಳಗಾದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

emedialine

Recent Posts

ಅರವತ್ತಾದ ಮೇಲೆ ಆರೋಗ್ಯ ಕಡೆ ಗಮನವಿರಲಿ

ಕಲಬುರಗಿ: ಅರವತ್ತು ವರ್ಷ ದಾಟಿದ ಪ್ರತಿಯೋಬ್ಬರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಚಿಂತಕ ಡಾ.ಬಸವರಾಜ ಗುಳಶೆಟ್ಟಿ ಅವರು…

37 mins ago

ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಿಹಾದೇವಿ

ಕಲಬುರಗಿ: ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತುಕೊಟ್ಟಂತಿರುವ,…

2 hours ago

ತನುವಿನೊಳಗಿದ್ದು ತನುವ ಗೆದ್ದ ಅಕ್ಕಮಹಾದೇವಿ

ಕಲಬುರಗಿ: ವಚನ ಕಾಲ ಅತ್ಯಪೂರ್ವವಾದುದು. ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸುತ್ತಿದೆ ಎಂದು ಡಾ. ಶಾಂತಲಾ ನಿಷ್ಠಿ ನುಡಿದರು.…

2 hours ago

ವಿಶ್ವಶಾಂತಿ ದಿನದ ನಿಮಿತ್ತ ವಾಕ್ ಎ ಥಾನ್: ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗಿ

ಕಲಬುರಗಿ: ನಗರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ಜಿಲ್ಲಾ ಶಾಖೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ YRC ಘಟಕದ ವತಿಯಿಂದ ವಿಶ್ವಶಾಂತಿ…

3 hours ago

ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನದ ಕರಪತ್ರ ಬಿಡುಗಡೆ

ಶಹಾಬಾದ:ಕಲಬುರಗಿಯಲ್ಲಿ ಸೆಪ್ಟೆಂಬರ್ 29 ಹಾಗೂ 30ರಂದು ನಡೆಯುವ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ…

8 hours ago

ಕಾರ್ಮಿಕರು ರಾಜಕೀಯ ಸ್ಥಾನಮಾನ ಪಡೆದರೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ: ನೀಲಾ

ಕಟ್ಟಡ ಕಾರ್ಮಿಕರ 2ನೇ ಶಾಖಾ ಸಮ್ಮೇಳನ : ಕಾಪೆರ್Çರೇಟ್ ಕಂಪೆನಿಗಳಿಗೆ ಧಾರೆ ಎರೆದ ದೇಶದ ಸಂಪತ್ತು ಶಹಾಬಾದ: ರಾಜಕೀಯ ಪಕ್ಷಗಳು…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420