ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಿಹಾದೇವಿ

ಕಲಬುರಗಿ: ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತುಕೊಟ್ಟಂತಿರುವ, ಪ್ರಮಾಣ ಮಾಡಿದಂತಿರುವ ಈ ವಚನಗಳನ್ನು ನಿರ್ವಚನ ಮಾಡುವುದು ಎಂದರೆ ಕುರುಡನೊಬ್ಬ ಆನೆಯನ್ನು ವರ್ಣಿಸಿದಂತಾಗುತ್ತದೆ ಎಂದು ಶರಣ ಚಿಂತಕಿ ಸಾಕ್ಷಿ ಎಸ್. ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಡಾ. ಬಿ.ಡಿ.‌ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನ- 14 ವಚನ ನಿರ್ವಚನ ಗೋಷ್ಠಿ-1 ರಲ್ಲಿ “ಬಸವಣ್ಣ ನಿಮ್ಮ ಅಂಗದಾಚಾರವ ಕಂಡು” ಅಕ್ಕನ ವಚನ ನಿರ್ವಚನ ಮಾಡಿದ ಅವರು, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ಕತೃತ್ವ ಶಕ್ತಿ ಏನು? ಎಂಥದು? ಎಂಬುದನ್ನು ಅರಿಯುವುದು ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.

ಬಸವಣ್ಣನವರು ತಾವೊಬ್ಬರೇ ದಾರ್ಶನಿಕರಾಗಲಿಲ್ಲ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನು ಆ ಎತ್ತರಕ್ಕೆ ಬೆಳೆಸಿದ ಕೀರ್ತಿವಂತರು ಎಂದು ಹೇಳಿದರು.

ಬದುಕಿನಲ್ಲಿ ಅದು ಬೇಕು ಇದು ಬೇಕು, ಅದನ್ನು ತನ್ನದಾಗಿಸಿಕೊಳ್ಳಬೇಕು ಎಂಬ ವಯಸ್ಸಿನಲ್ಲೇ ಅದು ತನಗೆ ಬೇಡ, ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂಬ ಉನ್ನತ ಸ್ಥಿತಿ ತಲುಪಿ, ಹಸಿವೆ ನೀನು ನಿಲ್ಲು, ತೃಷೆಯೇ ನೀನು ನಿಲ್ಲು, ಕಾಮವೇ ನೀನು ನಿಲ್ಲು ಎಂದು ಹೊರಟ ಅಕ್ಕಮಹಾದೇವಿ ಆಸೆ ತೊರೆದು, ರೋಷ ಬಿಚ್ಚಿಟ್ಟು ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದವಳು.

ಚನ್ನಮಲ್ಲಿಕಾರ್ಜುನನೆಂಬ ತನ್ನ ಮನದ ನಲ್ಲನನ್ನು ಹುಡುಕುವ ದಾರಿಯಲ್ಲಿ ಬಸವನೆಂಬ ಬಳ್ಳಿಯನ್ನು ಕಾಲಿಗೆ ತಾಗಿಸಿಕೊಂಡು ಶರಣರ ಅನುಭವ ಮಂಟಪದಲ್ಲಿ ಮಾಗಿ ಉರಿಯುಂಡ ಕರ್ಪುರವಾಗಿ ಬೆಳಗಿದವಳು ಎಂದು ಹೇಳಿದರು.

“ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ” ವಚನ ಕುರಿತು ಸುಮಂಗಲಾ ಬಾಳಿ, “ಅಂಗದಲ್ಲಿ ಆಚಾರವ ತೋರಿದ” ವಚನ ಕುರಿತು ಛಾಯಾ ಪಟ್ಟಣಶೆಟ್ಟಿ, ” ದೇವಲೋಕದವರಿಗೂ ಬಸವಣ್ಣನೆ ದೇವರು” ಎಂಬ ವಚನ ಕುರಿತು ನಿರ್ವಚನ ಮಾಡಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago