ಸಂಬಂಧ ಬೆಸೆಯುವ ಶಕ್ತಿ ಕಾವ್ಯಕ್ಕಿದೆ; ಕಸಾಪದಲ್ಲಿ ಶಿಕ್ಷಕರ ಕವಿಗೋಷ್ಠಿ

ಕಲಬುರಗಿ: ಸ್ವಾರ್ಥ ಜೀವನದಲ್ಲಿ ಮನುಷ್ಯತ್ವದ ಸಂಬಂಧಗಳು ಕಳಚುತ್ತಿರುವ ಈ ದಿನಗಳಲ್ಲಿ ಸಂಬಂಧ ಬೆಸೆಯುವ ಶಕ್ತಿ ಕಾವ್ಯಕ್ಕಿದೆ ಎಂದು ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನ್ಯೆ ಹೇಳಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ರವಿವಾರ ಏರ್ಪಡಿಸಿದ ಕಲಿಸುವ ಮನಸಿನ ಕವಿತೆ ಎಂಬ ಶಿಕ್ಷಕರ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೂಡಿ ಬಾಳುವ ಮನಸ್ಸುಗಳು ದೂರಾಗುತ್ತಿವೆ. ಅಂಥ ಮನಸ್ಸುಗಳನ್ನು ಒಂದುಗೂಡಿಸುವಲ್ಲಿ ಸಾಹಿತ್ಯದ ಪಾತ್ರ ಮುಖ್ಯವಾಗಿದೆ. ಈ ದಿಸೆಯಲ್ಲಿ ಸಾಹಿತ್ಯವು ಸಮಾಜ ಪರಿವರ್ತನೆಗೆ ಪೂರಕವಾಗಿದೆ. ಪರಸ್ಪರ ಪ್ರೀತಿ ಮತ್ತು ಮಾನವೀಯತೆಗಾಗಿ ಮಿಡಿಯುವ ಕಾವ್ಯಗಳು ರಚನೆಯಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ವೈದ್ಯ ಚಿಂತಕಿ ಡಾ. ಪ್ರತಿಮಾ ಎಸ್ ಕಾಮರೆಡ್ಡಿ ಮಾತನಾಡಿ, ಸಮಾಜದಲ್ಲಿ ಗೌರವಯುತ ಸ್ಥಾನಮಾನ ಶಿಕ್ಷಕರಿಗಿದೆ. ಆದರ್ಶ ಜೀವನ ರೂಪಿಸುವಲ್ಲಿ ಶಿಕ್ಷಕರ ತ್ಯಾಗ ಮತ್ತು ಪರಿಶ್ರಮ ತುಂಬಾ ಮುಖ್ಯವಾಗಿದೆ. ಇಂದು ಶಿಕ್ಷಕರು ರಚಿಸಿದ ಕಾವ್ಯಗಳು ಜೀವನ ಪ್ರೀತಿಯಿಂದ ಕೂಡಿರುತ್ತವೆ. ಸಾಹಿತ್ಯ ಮತ್ತು ಸಂಗೀತ ಕೂಡಿದಾಗ ಅನುರಾಗದ ಅಲೆ ಸೃಷ್ಠಿಯಾಗಿ ಆನಂದ ತರುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಾವು ರಚಿಸುವ ಕಾವ್ಯಕ್ಕೆ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಮೌಲ್ಯಗಳನ್ನು ಹೊಮದಿರುವ ವಿಷಯ ವಸ್ತುಗಳನ್ನು ಮುಂದಿಟ್ಟುಕೊಂಡು ಕವಿಗಳಾದವರು ಕಾವ್ಯಗಳನ್ನು ರಚನೆ ಮಾಡಬೇಕಾಗಿದೆ. ಶಿಕ್ಷಕರು ಹಾಗೂ ಸರಕಾರಿ ನೌಕರರು ಪರಿಷತ್ತಿಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಶಿಕ್ಷಕರನ್ನು ಸದಾ ಕಾಲ ಸ್ಮರಿಸುವ ಮತ್ತು ಗೌರವಿಸುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು.

ನಿವೃತ್ತ ಪ್ರಾಚಾರ್ಯರಾದ ಗೌಸುದ್ದೀನ್ ತುಮಕೂರಕರ್ ಅಧ್ಯಕ್ಷತೆ ವಹಿಸಿದ್ದಾರೆ. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡಿದರು.

ಕವಿಗಳಾದ ಗಂಗಮ್ಮ ನಾಲವಾರ, ಆರ್ ಎಚ್ ಪಾಟೀಲ, ರಾಜೇಶ ನಾಗೂರೆ, ನಾಗೇಂದ್ರಪ್ಪ ಮಾಡ್ಯಾಳೆ, ರೇಣುಕಾ ಎನ್., ವಿಶಾಲಾಕ್ಷಿ ಮಾಯಣ್ಣವರ್, ವೆಂಕುಬಾಯಿ ರಜಪೂತ, ಉಷಾ ಗೊಬ್ಬೂರ, ರಾಜಕುಮಾರ ರಂಜೋಳಕರ್, ಪವನಕುಮಾರ ಕಲಬುರಗಿ, ಸಂಜುಕುಮಾರ ಜಟ್ಡೇಗೋಳ, ಎಂ.ಪಿ. ಪ್ರಕಾಶ ಸರಸಂಬಾ, ಜಯಶ್ರೀ ಜಮಾದಾರ, ಪ್ರಭುಲಿಂಗ ಮೂಲಗೆ, ಮುರುಗೆಪ್ಪ ಹಣುಮನಹಳ್ಳಿ, ಡಾ. ಬಿ.ಆರ್. ತಳವಾರ, ಮಹಾದೇವ ಕೋಟ್ಯಾಳ ಸೇರಿದಂತೆ ಅನೇಕ ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದರು.

ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ಎಂ ಎನ್ ಸುಗಂಧಿ, ರವೀಂದ್ರಕುಮಾರ ಭಂಟನಳ್ಳಿ, ಸಂಜಿವಕುಮಾರ ಮಾಲೆ, ಸಂತೋಷ ಕುಡಳ್ಳಿ, ಗಣೇಶ ಚಿನ್ನಾಕಾರ, ಶಿವಲಿಂಗಮ್ಮ ಸಾವಳಗಿ, ಶಿವಶರಣ ಬಡದಾಳ, ನಾಗನ್ನಾಥ ಯಳಸಂಗಿ, ಸಿ.ಎಸ್. ಮಾಲಿಪಾಟೀಲ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ದಿನೇಶ ಮದಕರಿ, ಭೀಮರಯ ಹೇಮನೂರ, ಸಿದ್ಧಲಿಂಗ ಬಾಳಿ, ಅಪ್ಪರಾವ ಭಾವಿಮನಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago