ಉತ್ಸವ ಹಾಗೂ ಹಬ್ಬಗಳು ಸರ್ವರ ಮನಸ್ಸನ್ನು ಗಟ್ಟಿಗೊಳಿಸಿ ಸನ್ಮಾರ್ಗದ ದಾರಿ

ಕಲಬುರಗಿ; ಉತ್ಸವ ಹಾಗೂ ಹಬ್ಬಗಳು ಸರ್ವರ ಮನಸ್ಸನ್ನು ಗಟ್ಟಿಗೊಳಿಸಿ ಸನ್ಮಾರ್ಗದ ದಾರಿ ತೋರಿಸುತ್ತವೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ನಗರದ ಸಂತೋಷ ಕಾಲೋನಿಯ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ನವರಾತ್ರಿ ಉತ್ಸವ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುತ್ತ ಯಾವುದೇ ಧರ್ಮ ಜಾತಿ ಎನ್ನದೆ ಸರ್ವರು ನಮ್ಮವರೆಂದು ಅಪ್ಪಿಕೊಂಡು ಒಪ್ಪಿಕೊಂಡು ಒಳ್ಳೆಯ ಸಮಾಜ ನಿರ್ಮಿಸುತ್ತಿರುವ ಕೆಎಚಬಿ ಬಡಾವಣೆ ಎಲ್ಲರಿಗೂ ಆದರ್ಶವಾಗಿದೆ. ದಸರಾ ಹಬ್ಬ ದುಷ್ಟ ಶಕ್ತಿಗಳನ್ನು ಹೋಗಲಾಡಿಸಿ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈ ಹಬ್ಬದ ಸಂಕೇತವಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ನ್ಯೂ ರಾಘವೇಂದ್ರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಕುಬೇರ ರಾಯಮಾನೆ ಆಗಮಿಸಿದರು.

ವೇದಿಕೆ ಮೇಲೆ ಸಮಿತಿಯ ಅಧ್ಯಕ್ಷರಾದ ಸಂಜುಕುಮಾರ ಶೆಟ್ಟಿ, ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ ಉಪಸ್ಥಿತರಿದ್ದರು. ಶಿವಕಾಂತ ಚಿಮ್ಮಾ ಸ್ವಾಗತಿಸಿದರು. ವೀರೇಶ ಬೋಳಶೆಟ್ಟಿ ನಿರುಪಿಸಿದರು. ಚಂದ್ರಕಾಂತ ತಳವಾರ ವಂದಿಸಿದರು.

ಕಾರ್ಯಕ್ರಮದ ಮುಂಚಿತವಾಗಿ ದೇವಿಯ ಮೂರ್ತಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಹಲವಾರು ವಾದ್ಯಗಳೊಂದಿಗೆ, ಕುಂಭ ಕಳಸದ ಮೂಲಕ ಭವ್ಯವಾದ ಮೆರವಣಿಗೆ ಮಾಡಲಾಯಿತು. ಕ್ಷೇಮಾಭಿವೃದ್ಧಿ ಸಂಘದ ಸರ್ವ ಪಧಾದಿಕಾರಿಗಳು ಹಾಗೂ ಬಡಾವಣೆಯ ಅನೇಕ ಜನ ಭಾಗವಹಿಸಿದರು.

emedialine

Recent Posts

ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ಆರ್.ವಿ.ನಾಯಕ ಚಾಲನೆ

ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ…

50 mins ago

ಸಂಸ್ಕøತಿ ಉಳಿಸಿ ಬೆಳೆಸುವ ಸಂಘದ ಕಾರ್ಯ ಶ್ಲಾಘನೀಯ

ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…

52 mins ago

ಸುರಪುರ:ಅಭಾವೀಲಿಂ ಮಹಾಸಭೆಗೆ ಪದಾಧಿಕಾರಿಗಳ ನೇಮಕ

ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…

55 mins ago

ಕಲಬುರಗಿ ಪಾಲಿಕೆ ಉಪ ಆಯುಕ್ತರನ್ನು ಅಮಾನತುಗೊಳಿಸಲು ಶಾಸಕ ಬಿ.ಆರ್. ಪಾಟೀಲ ಆಗ್ರಹ

ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…

58 mins ago

ಅ.6 ರಂದು ಡಾ. ಲಕ್ಷ್ಮಣ ದಸ್ತಿಯವರಿಂದ 371 J ಕಲಂ ಸೌಲತ್ತುಗಳ ಬಗ್ಗೆ ವಿಶೇಷ ಉಪನ್ಯಾಸ

ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…

1 hour ago

ಜಾತಿ, ಧರ್ಮ, ಭಾಷೆ, ಎಲ್ಲವನ್ನು ಮೀರಿನಿಂತ ಭಕ್ತಿಯ ದೇವರ ಉಪಾಸನೆಯೇ ಭಜನೆ

ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420