ಉತ್ಸವ ಹಾಗೂ ಹಬ್ಬಗಳು ಸರ್ವರ ಮನಸ್ಸನ್ನು ಗಟ್ಟಿಗೊಳಿಸಿ ಸನ್ಮಾರ್ಗದ ದಾರಿ

0
57

ಕಲಬುರಗಿ; ಉತ್ಸವ ಹಾಗೂ ಹಬ್ಬಗಳು ಸರ್ವರ ಮನಸ್ಸನ್ನು ಗಟ್ಟಿಗೊಳಿಸಿ ಸನ್ಮಾರ್ಗದ ದಾರಿ ತೋರಿಸುತ್ತವೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ನಗರದ ಸಂತೋಷ ಕಾಲೋನಿಯ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ನವರಾತ್ರಿ ಉತ್ಸವ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುತ್ತ ಯಾವುದೇ ಧರ್ಮ ಜಾತಿ ಎನ್ನದೆ ಸರ್ವರು ನಮ್ಮವರೆಂದು ಅಪ್ಪಿಕೊಂಡು ಒಪ್ಪಿಕೊಂಡು ಒಳ್ಳೆಯ ಸಮಾಜ ನಿರ್ಮಿಸುತ್ತಿರುವ ಕೆಎಚಬಿ ಬಡಾವಣೆ ಎಲ್ಲರಿಗೂ ಆದರ್ಶವಾಗಿದೆ. ದಸರಾ ಹಬ್ಬ ದುಷ್ಟ ಶಕ್ತಿಗಳನ್ನು ಹೋಗಲಾಡಿಸಿ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈ ಹಬ್ಬದ ಸಂಕೇತವಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ನ್ಯೂ ರಾಘವೇಂದ್ರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಕುಬೇರ ರಾಯಮಾನೆ ಆಗಮಿಸಿದರು.

Contact Your\'s Advertisement; 9902492681

ವೇದಿಕೆ ಮೇಲೆ ಸಮಿತಿಯ ಅಧ್ಯಕ್ಷರಾದ ಸಂಜುಕುಮಾರ ಶೆಟ್ಟಿ, ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ ಉಪಸ್ಥಿತರಿದ್ದರು. ಶಿವಕಾಂತ ಚಿಮ್ಮಾ ಸ್ವಾಗತಿಸಿದರು. ವೀರೇಶ ಬೋಳಶೆಟ್ಟಿ ನಿರುಪಿಸಿದರು. ಚಂದ್ರಕಾಂತ ತಳವಾರ ವಂದಿಸಿದರು.

ಕಾರ್ಯಕ್ರಮದ ಮುಂಚಿತವಾಗಿ ದೇವಿಯ ಮೂರ್ತಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಹಲವಾರು ವಾದ್ಯಗಳೊಂದಿಗೆ, ಕುಂಭ ಕಳಸದ ಮೂಲಕ ಭವ್ಯವಾದ ಮೆರವಣಿಗೆ ಮಾಡಲಾಯಿತು. ಕ್ಷೇಮಾಭಿವೃದ್ಧಿ ಸಂಘದ ಸರ್ವ ಪಧಾದಿಕಾರಿಗಳು ಹಾಗೂ ಬಡಾವಣೆಯ ಅನೇಕ ಜನ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here