ಕಥೆ, ಕಾವ್ಯ ಸಮಾಜಮುಖಿಯಾಗಿ ಸಂಭ್ರಮಿಸಲಿ: ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ

ಕಲಬುರಗಿ: ಕಷ್ಟ ಸುಖ, ನೋವು ನಲಿವುಗಳಿಗೆ ಸ್ಪಂದಿಸುವ ಹಾಗೂ ಸಮಾಜಮುಖಿ ಚಿಂತನೆಗಳ ಕಾವ್ಯ ಸಂಭ್ರಮಿಸಬೇಕು ಎಂದು ಹಿರಿಯ ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸಾಹಿತ್ಯ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ ದಸರಾ ಕಾವ್ಯ ಸಂಭ್ರಮ-2024 ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾವ್ಯ ನಮ್ಮ ಮನಸ್ಸು ಕಟ್ಟಿ ಅರಳಿಸುತ್ತದೆ. ಮತ್ತು ಜೀವ ಭಾವ ಒಂದಾಗಿಸುತ್ತದೆ. ಅಂಥ ತುಡಿತದ ಕಾವ್ಯಗಳು ಸಂಭ್ರಮಿಸಿದಾಗಲೇ ಉತ್ತಮ ಕವನ ಹುಟ್ಟಲು ಸಾಧ್ಯ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕವಿಯಾದವ ನಿರಂತರ ಅಧ್ಯನದಲ್ಲಿ ತೊಡಗಿದರೆ ಮಾತ್ರ ಗಟ್ಟಿಯಾದ ಕಾವ್ಯ ರಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಹೊಸ ಪೀಳಿಗೆಯ ಬರಹಗಾರರು ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಪರಿಷತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಆ ಮೂಲಕ ಪರಿಷತ್ತು ಜನಸಾಮಾನ್ಯರ ಬಳಿ ತೆಗೆದುಕೊಂಡೊಯ್ಯುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಸುರೇಶ ಜಾಧವ, ಚಿಕ್ಕ ಚೊಕ್ಕ ಕವನಗಳು ಹೃದಯಕ್ಕೆ ನಾಟುತ್ತವೆ. ಕಥೆಗಳು ಬದುಕಿನ ಹಂದರವನ್ನು ಹೆಣೆಯುತ್ತವೆ. ಯುವ ಕವಿಗಳು ಕಥೆಗಳು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಬೇಕು ಎಂದರು.

ಹಿರಿಯ ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಚಿಂತಕಿ ಉಮಾ ಗಚ್ಚಿನಮನಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ಪ್ರಭುಲಿಂಗ ಮೂಲಗೆ ವೇದಿಕೆ ಮೇಲಿದ್ದರು.

ಗಮನ ಸೆಳೆದ ಕವನಗಳು : ಕವಿಗಳಾದ ಅನುಪಮಾ ಅಪಗೊಂಡ, ಬಾಬುರಾವ ಪಾಟೀಲ, ಗೋದಾವರಿ ಪಡಶೆಟ್ಟಿ, ವೀರಭದ್ರಪ್ಪ ಗುರುಮಿಠಕಲ್, ಡಾ. ಸಂಗೀತಾ ಹಿರೇಮಠ, ರಾಜಕುಮಾರ ಉದನೂರ, ಮಂಜುಳಾ ಪಾಟೀಲ, ರವೀಂದ್ರನಾಥ ಮೋಘಾ, ಪಲ್ಲವಿ ಕುಲಕರ್ಣಿ, ಖಾಜಾ ಪಟೇಲ್, ಕವಿತಾ ಮಾಲಿಪಾಟೀಲ, ವಿಜಯಕುಮಾರ ಪಾಟೀಲ, ಶಿವಲೀಲಾ ಕಲಗುರ್ಕಿ, ಅಂಜುನಾಥ ನಾಯ್ಕಲ್, ಸರೋಜಾ ನಂದಿ, ಭೀಮಶಾ ದೊಡ್ಮನಿ, ಶಿವಶರಣ ಬಡದಾಳ, ಸವಿತಾ ಪುಟಪಾಕ್, ಸಂಗೀತಾ ಗುಡಿ, ಮಹಾಂತಯ್ಯ ಹಿರೇಮಠ, ಎಂ ಎನ್ ಸುಗಂದಿ, ಸ್ವಾತಿ ಬಿ ಕೋಬಾಳ, ಸಾಗರ ವಾಗ್ಮೋರೆ, ಸರೋಜಾ ನಂಧಿ ಸೇರಿದಂತೆ ಅನೇಕ ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿ ಸಭೀಕರ ಗಮನ ಸೆಳೆದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago