ಕಲಬುರಗಿ; ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ದಸರಾ ವೈಭವ. ದುಷ್ಟ ಶಕ್ತಿಯ ವಿರುದ್ಧ ವಿಜಯ ಸಾದಿಸುವದೆ ನವರಾತ್ರಿ ಉತ್ಸವದ ಸಂಕೇತ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಢಗೆ ಹೇಳಿದರು.
ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ನವರಾತ್ರಿ ಉತ್ಸವ ಉದ್ಘಾಟಿಸಿ ಮಾತನಾಡುತ್ತಾ ದಸರಾ ಉತ್ಸವ ಎಂದರೆ ಅಜ್ಞಾನದ ಮೇಲೆ ಜ್ಞಾನದ ಗೆಲುವು ಮತ್ತು ಕೆಟ್ಟದರ ಮೇಲೆ ಒಳ್ಳೆಯದರ ಗೆಲುವಿನ ಸಂಕೇತ. ಒಟ್ಟಿನಲ್ಲಿ ದುಷ್ಟ ಶಕ್ತಿಯ ವಿರುದ್ಧ ದೈವಿ ಶಕ್ತಿ ಜಯ ಸಾದಿಸಿದ ದಿನ, ಕೆಟ್ಟದ್ದು ನಶಿಸಿ ಒಳ್ಳೆಯದ್ದು ಮೆರೆದ ದಿನವಾಗಿದೆ. ಸಂಬಂಧಗಳನ್ನು ಗಟ್ಟಿ ಮಾಡಿ, ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಹಬ್ಬಗಳು ಪ್ರೇರಣಾದಾಯಕವಾಗಿವೆ. ಪ್ರತಿಯೊಬ್ಬರೂ ಬದುಕನ್ನು ಸಂಭ್ರಮದಿಂದ ಜೀವಿಸಬೇಕು. ಬಡಾವಣೆಯ ಜನರು ಒಗ್ಗಟ್ಟಿನಿಂದ ಉತ್ಸವಗಳನ್ನು ಆಚರಣೆ ಮಾಡುವುದು ಬಡಾವಣೆಯ ವಿಶೇಷವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸವರಾಜ ಮತ್ತಿಮುಡ, ವಿಧಾನ ಪರಿಷತ್ತ ಸದಸ್ಯರಾದ ಜಗದೇವ ಗುತ್ತೆದಾರ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ನೀತಿನ ಗುತ್ತೆದಾರ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಾವಿತ್ರಿ ಸಲಗರ, ಐ.ಜಿ.ಪಿ ಕಚೇರಿಯ ಆಡಳಿತ ಅಧಿಕಾರಿ ಗಂಗೂಬಾಯಿ,ಅನಿತಾ ಭಕ್ರೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಸೇರಿದಂತೆ ಎಲ್ಲಾ ಪಧಾದಿಕಾರಿಗಳು ಬಡಾವಣೆಯ ಜನರು ಭಾಗವಹಿಸಿದ್ದರು. ವಿರೇಶ ಬೋಳಶೆಟ್ಟಿ ನಿರೂಪಿಸಿದರು, ನ್ಯಾಯವಾದಿ ಹಣಮಂತರಾಯ ಅಟ್ಟೂರ ಪ್ರಾರ್ಥಿಸಿದರು, ಶಿವಕಾಂತ ಚಿಮ್ಮಾ ಸ್ವಾಗತಿಸಿದರು, ಬಾಲಕೃಷ್ಣ ಕುಲಕರ್ಣಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…