ಕಲಬುರಗಿ; ದಸರಾ ವೈಭವ

0
182

ಕಲಬುರಗಿ; ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ದಸರಾ ವೈಭವ. ದುಷ್ಟ ಶಕ್ತಿಯ ವಿರುದ್ಧ ವಿಜಯ ಸಾದಿಸುವದೆ ನವರಾತ್ರಿ ಉತ್ಸವದ ಸಂಕೇತ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಢಗೆ ಹೇಳಿದರು.

ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ನವರಾತ್ರಿ ಉತ್ಸವ ಉದ್ಘಾಟಿಸಿ ಮಾತನಾಡುತ್ತಾ ದಸರಾ ಉತ್ಸವ ಎಂದರೆ ಅಜ್ಞಾನದ ಮೇಲೆ ಜ್ಞಾನದ ಗೆಲುವು ಮತ್ತು ಕೆಟ್ಟದರ ಮೇಲೆ ಒಳ್ಳೆಯದರ ಗೆಲುವಿನ ಸಂಕೇತ. ಒಟ್ಟಿನಲ್ಲಿ ದುಷ್ಟ ಶಕ್ತಿಯ ವಿರುದ್ಧ ದೈವಿ ಶಕ್ತಿ ಜಯ ಸಾದಿಸಿದ ದಿನ, ಕೆಟ್ಟದ್ದು ನಶಿಸಿ ಒಳ್ಳೆಯದ್ದು ಮೆರೆದ ದಿನವಾಗಿದೆ. ಸಂಬಂಧಗಳನ್ನು ಗಟ್ಟಿ ಮಾಡಿ, ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಹಬ್ಬಗಳು ಪ್ರೇರಣಾದಾಯಕವಾಗಿವೆ. ಪ್ರತಿಯೊಬ್ಬರೂ ಬದುಕನ್ನು ಸಂಭ್ರಮದಿಂದ ಜೀವಿಸಬೇಕು. ಬಡಾವಣೆಯ ಜನರು ಒಗ್ಗಟ್ಟಿನಿಂದ ಉತ್ಸವಗಳನ್ನು ಆಚರಣೆ ಮಾಡುವುದು ಬಡಾವಣೆಯ ವಿಶೇಷವಾಗಿದೆ‌ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸವರಾಜ ಮತ್ತಿಮುಡ, ವಿಧಾನ ಪರಿಷತ್ತ ಸದಸ್ಯರಾದ ಜಗದೇವ ಗುತ್ತೆದಾರ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ನೀತಿನ ಗುತ್ತೆದಾರ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಾವಿತ್ರಿ ಸಲಗರ, ಐ.ಜಿ.ಪಿ ಕಚೇರಿಯ ಆಡಳಿತ ಅಧಿಕಾರಿ ಗಂಗೂಬಾಯಿ,ಅನಿತಾ ಭಕ್ರೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಸೇರಿದಂತೆ ಎಲ್ಲಾ ಪಧಾದಿಕಾರಿಗಳು ಬಡಾವಣೆಯ ಜನರು ಭಾಗವಹಿಸಿದ್ದರು. ವಿರೇಶ ಬೋಳಶೆಟ್ಟಿ ನಿರೂಪಿಸಿದರು, ನ್ಯಾಯವಾದಿ ಹಣಮಂತರಾಯ ಅಟ್ಟೂರ ಪ್ರಾರ್ಥಿಸಿದರು, ಶಿವಕಾಂತ ಚಿಮ್ಮಾ ಸ್ವಾಗತಿಸಿದರು, ಬಾಲಕೃಷ್ಣ ಕುಲಕರ್ಣಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here