ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿಯಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ”ಹಾಗೂ “ವಿಶ್ವದೃಷ್ಟಿ ದಿನಾಚರಣೆ”ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದಿನಾಚರಣೆಗಳ ಕುರಿತು ಆಡಳಿತ ವೈದ್ಯಾಧಿಕಾರಿ ಡಾ. ಅಪರ್ಣ ಭದ್ರ ಶೆಟ್ಟಿ ಮೇಡಮ್ ರವರು ಪ್ರಾಸ್ತಾವಿಕ ಮಾತುಗಳ ನಾಡಿ ಪ್ರಸ್ತುತ ದಿನಮಾನಗಳಲ್ಲಿ ಸಾರ್ವಜನಿಕರು, ಮಕ್ಕಳು ಈ ರೋಗಗಳಿಗೆ ತುತ್ತಾಗಿ ಬಳಲುತ್ತಿರುವುದು ನಾವು ನೋಡ್ತಾ ಇದ್ದೇವೆ. ಅದಕ್ಕಾಗಿ ವಿಶ್ವಾದ್ಯಂತ ಈ ದಿನಾಚರಣೆಗಳನ್ನು ಆಚರಿಸಿ, ಅದರ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದೇ ಈ ಎರಡು ಆಚರಣೆಗಳ ಉದ್ದೇಶವಾಗಿದೆ ಎಂದು ಮಾತುಗಳಾಡಿದರು.
ತರುವಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ದಿನಾಚರಣೆಗಳಲ್ಲಿ ಘೋಷವಾಕ್ಯಗಳನ್ನು ನೀಡುವುದು . ಈ ಸಲದ ವಾಕ್ಯ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಎಂದಾಗಿದೆ.
ಈ ಕುರಿತು ಮಾಹಿತಿಯನ್ನು ನೀಡುತ್ತಾ ನಾವುಗಳೆಲ್ಲ ಪ್ರಸ್ತುತವಾಗಿ ಒಂದಲ್ಲ ಒಂದು ರೀತಿ ಅಂದರೆ ತಮ್ಮ ದೈನಂದಿನ ಕಾರ್ಯಗಳಲ್ಲಿ ಇಲ್ಲವೇ ಕುಟುಂಬದಲ್ಲಿ ಒಂದಲ್ಲ ಒಂದು ರೀತಿ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಅದನ್ನು ಸರಿಪಡಿಸಲು ನಾವು ಇಂದು ಮಾನಸಿಕ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಎಲ್ಲರೂ ಅದಕ್ಕೆ ಕಾರಣ ಏನು? ಪ್ರಸ್ತುತ ನಮ್ಮ ಒತ್ತಡದ ಬದುಕು, ಹಾಗೂ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಮುಖ್ಯವಾಗಿ ಎದ್ದು ಕಾಣುತ್ತಿದ್ದು ಪ್ರತಿ 15 ಜನರಲ್ಲಿ ಒಬ್ಬರು ಮಾನಸಿಕ ರೋಗದಿಂದ ಬಳಲುತ್ತಿದ್ದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಅದಕ್ಕಾಗಿ ನಾವೆಲ್ಲರೂ ಮಾನಸಿಕ ರೋಗವನ್ನು ಅಲಕ್ಷಿಸದೆ ಎಲ್ಲರೂ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಅದಕ್ಕೆ ಚಿಕಿತ್ಸೆಯು ಕೂಡ ಲಭ್ಯವೆಂದು ಸಮುದಾಯದಲ್ಲಿ ಅರಿವು ಮೂಡಿಸಿ, ಆರೋಗ್ಯವಾಗಿದ್ದೇವೆ ಎಂದು ಹೇಳಬೇಕಾದರೆ ಅವರ ಮಾನಸಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವುದು ಮಹತ್ವದಾಗಿದೆ. ಅದಕ್ಕಾಗಿ ಮನೋ ತಜ್ಞರನ್ನು ಪ್ರಾರಂಭಿಕ ಹಂತದಲ್ಲಿ ಭೇಟಿ ಮಾಡಿ ಚಿಕಿತ್ಸೆ ಕೈಗೊಳ್ಳಲು ಸರಕಾರ ಈ ಕಾರ್ಯಕ್ರಮದಲ್ಲಿ ಪ್ರತಿ ಎರಡನೇ ಶುಕ್ರವಾರ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಭ್ಯವಿದ್ದು ಅವರನ್ನು ಭೇಟಿ ಮಾಡಿ ಪರಿಹಾರ ಕೈಗೊಳ್ಳುವಂತೆ ಮಾಹಿತಿ ನೀಡಿದರು.
ಅಲ್ಲದೆ ಹೊಸ ಹೊಸ ಔಷಧಪಚಾರವು ಉಚಿತವಾಗಿ ಲಭ್ಯವಿದ್ದು ಅದರ ಸದುಪಯೋಗ ಪಡೆಯುವಂತೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಆಚರಣೆಯ ನಿಮಿತ್ಯ ದಿನಾಂಕ 14.10.2024 ರಂದು ಅಫ್ಜಲ್ಪುರದಲ್ಲಿ ಹಾಗೂ 16 10 20 204 ರಂದು ದೇವಲ್ ಗಾಣಗಾಪುರ ದಲ್ಲಿಆಚರಿಸುತ್ತಿದ್ದು ಅಂದು ಮನೋ ತಜ್ಞರು ಆಗಮಿಸುತ್ತಿದ್ದು ತಾವುಗಳು ಅದರ ಸದುಪಯೋಗ ಪಡೆದು ಆ ಕಾರ್ಯಕ್ರಮಕ್ಕೆ ಯಶಸ್ಸು ತರಲು ತಿಳಿಸಿದರು.
ಶಿಬಿರಕ್ಕೆ ಕರೆದೊಯಲು ತಮ್ಮ ಕ್ಷೇತ್ರದಲ್ಲಿ ವ್ಯಕ್ತಿಯು ಸಾಮಾನ್ಯ ಜನರಂತೆ ವರ್ತಿಸದೆ ಆತನ ಆಚಾರ ವಿಚಾರ, ನಡುವಳಿಕೆಯಲ್ಲಿ ಬದಲಾವಣೆ ಯಾದರೂ ಅಂಥವರನ್ನು ಗುರುತಿಸಿ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿ, ಈಗಾಗಲೇ ಸಂಶಯಾಸ್ಪದ ಮಾನಸಿಕ ರೋಗಿಗಳೆಂದು ತಮ್ಮ ಗ್ರಾಮದಲ್ಲಿ ಗುರುತಿಸಿ ಎಂದು ಹೇಳಿ ಅದರ ಲಕ್ಷಣಗಳ ಬಗ್ಗೆ ಕೂಡ ಮಾಹಿತಿ ನೀಡಿದರು.
ತರುವಾಯ ವಿಶ್ವದೃಷ್ಟಿ ದಿನ ಕುರಿತು ಮಾಹಿತಿ ನೀಡುತ್ತಾ ನಿಮ್ಮ ಕಣ್ಣುಗಳನ್ನು ರಕ್ಷಿಸಿ, ಪ್ರೀತಿಸಿ, ದೃಷ್ಟಿ ಇಲ್ಲದಿದ್ದರೆ ಪ್ರಪಂಚವೇ ಶೂನ್ಯ, ಕಣ್ಣುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಕುರಿತು ಮಾಹಿತಿ ನೀಡಿದರು.
ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ದೇವರಾಜ್ ಆಯುಷ್ಯ ವೈದ್ಯಾಧಿಕಾರಿಗಳು, ಗ್ರಾಮದ ಮುಖಂಡರಾದ ಮಡು ದೇವತ್ಕಲ್,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಯ್ಯದ್ ಅಸರರ್ ಹಾಸ್ಮಿ, ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಶೃತಿ, ಸಿಬ್ಬಂದಿಗಳಾದ ರಾಜೇಶ್ವರಿ, ಜೋಶಭತ, ಸಂಗೀತ, ಪುಷ್ಪ, ಶ್ವೇತಾ, ಶೋಭಾ, ಶಹಬಾಜ್, ಮಲ್ಲು ಪಿಸ್ತೆ, ಗುರು ಗಂಟೆ, ಆಪ್ತಸಮಾಲೋಚಕರಾದ ಎನ್ ಸುಧಾಕರ್, ರಾಜು, ಆಶಾ, ಕಾಜಪ್ಪ, ಇತರರು, ಸಾರ್ವಜನಿಕರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…