ಚಿತ್ರ ಕಲಾವಿದರಿಗೆ ಸಹಕಾರದ ಭರವಸದೆ: ಜಿಲ್ಲಾಧಿಕಾರಿ | ಕಸಾಪ ದಿಂದ ಕಲಾ ಸೌಧ ಸ್ಥಾಪನೆ

ಕಲಬುರಗಿ: ಸಾಹಿತ್ಯ, ಸಂಸ್ಕøತಿಯ ಜತೆಗೆ ಜಿಲ್ಲೆಯ ಚಿತ್ರಕಲಾ ಪ್ರತಿಭೆಗಳಿಗೂ ಸಂಪೂರ್ಣ ಸಹಕಾರ ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿನ ಬಾಪೂಗೌಡ ದರ್ಶನಾಪೂರ ರಂಗಮಂದಿರದ ಎಡಭಾಗದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ ಕಲಾ ಸೌಧವನ್ನು ಉದ್ಘಾಟಿಸಿ ಮತ್ತು ದಶವರ್ಣ ಕಲಾವಿದರಿಂದ ನಡೆದ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂರಾರು ಚಿತ್ರಕಲಾ ಪ್ರತಿಭೆಗಳು ಸೇವೆ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಹಾಯ ಸಹಕಾರ ಇಲ್ಲದಂತಾಗಿದೆ. ಇಂದು ಕಲೆ ಮತ್ತು ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ಚಿತ್ರಕಲಾವಿದರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಾ ಸೌಧ ಸ್ಥಾಪಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಭಾಗದ ಕಲಾವಿದರನ್ನು ಬೆಳಕಿಗೆ ತರಲು ಕಲಾ ಪ್ರದರ್ಶನಗಳು ಪರಿಷತ್ತು ಈ ರೀತಿಯ ಹೊಸ ಹೆಜ್ಜೆ ಇಟ್ಟಿದ್ದು ಕಲಾವಿದರಿಗೆ ವಿಶೇಷ ಗೌರವ ಕೊಟ್ಟಿದೆ. ನಿತ್ಯ ನೂತನ ರಚನಾತ್ಮಕ ಮತ್ತು ಕ್ರಿಯಾಶೀಲವಾಗಿ ಪರಿಷತ್ತು ಕಾರ್ಯಕ್ರಮಗಳು ರೂಪಿಸುವ ಮೂಲಕ ಜಿಲ್ಲೆಯ ಸಾಂಸ್ಕøತಿಕ ಪರಿಸರವನ್ನಾಗಿ ನಿರ್ಮಿಸುತ್ತಿದ್ದಾರೆ ಎಂದು ಮನದುಂಬಿ ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಚಿತ್ರಕಲಾವಿದರ ಕಲಾ ಕುಂಚದಲ್ಲಿ ಅರಳಿದ ಪ್ರತಿಭೆಗಳು ಜಿಲ್ಲೆಯಲ್ಲಿ ಎಲೆ ಮರೆಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಂಥ ಕೆಲ ಪ್ರತಿಭೆಗಳ ಚಿತ್ರಕಲಾ ಅನಾವರಣಗೊಂಡಿದ್ದು ನಮಗಂತೂ ತುಂಬಾ ಖುಷಿ ನೀಡಿದೆ. ಚಿತ್ರಕಲಾವಿದರು, ಸಂಗೀತ ಕಲಾವಿದರು ಸೇರಿದಂತೆ ಎಲ್ಲಾ ವರ್ಗದ ಕಲಾವಿದರು ಸೇರಿದರೆ ಮಾತ್ರ ಪರಿಷತ್ತಿನ ಘನತೆ ಹೆಚ್ಚುತ್ತದೆ. ಎಲ್ಲಾ ಧರ್ಮ-ಜಾತಿಯವರು ಒಗ್ಗೂಡಿಸುವ ಮತ್ತು ಒಂದೂಗೂಡಿಸುವ ಕಾರ್ಯ ಪರಿಷತ್ತು ಮಾತ್ರ ಮಾಡುತ್ತಾ ಬಂದಿದೆ. ಈ ಭಾಗದ ಕಲಾವಿದರ ಬಹು ದಿನದ ಕನಸು ಇವಾಗ ಈಡೇರಿದಂತಾಗಿದೆ. ಈ ಮೂಲ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿ ನಿರ್ಮಿಸಲಾಗುತ್ತಿದೆ ಎಂದರು.

ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ., ನಾಡೋಜ ಡಾ. ಜೆ.ಎಸ್. ಖಂಡೇರಾವ, ಡಾ. ಎ ಎಸ್ ಪಾಟೀಲ, ಡಾ. ರೆಹಮಾನ್ ಪಟೇಲ್, ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ರವೀಂದ್ರ ಭಂಟನಳ್ಳಿ, ಧರ್ಮರಾಜ ಜವಳಿ, ಬಾಬುರಾವ ಪಾಟೀಲ ಇತರರಿದ್ದರು.

ದಶವರ್ಣ ಕಲಾವಿದರಾದ ಬಸವರಾಜ ಉಪ್ಪಿನ, ಡಾ. ಸುಬ್ಬಯ್ಯ ನೀಲಾ ರಾಜಶೇಖರ ಶ್ಯಾಮಣ್ಣ, ಮಹ್ಮದ್ ಅಯಾಜೋದ್ದಿನ್ ಪಟೇಲ್, ರಾಜೇಶ ಸಾಂಗ್ವಿಕರ್, ಡಾ. ರೆಹಮಾನ್ ಪಟೇಲ್, ಡಾ. ಶಾಹೇದ ಪಾಷಾ, ರಾಘವೇಂದ್ರ ಬುರ್ಲಿ, ಶಿವಲೀಲಾ ಉಪ್ಪಿನ, ನಾಗರಾಜ ಕುಂಬಾರ ಅವರು ಕಲಾ ಕುಂಚದಲ್ಲಿ ಅರಳಿದ ವಿವಿಧ ಬಗೆಯ ಚಿತ್ರಕಲೆಗಳು ವೀಕ್ಷಕರ ವಿಶೇಷ ಗಮನ ಸೆಳೆಯಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

57 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

59 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago