ಕಲಬುರಗಿ: ತಾವುಗಳು ಟ್ರಾನ್ಸಪೆÇೀಟರ್ಸಗಳಾಲ್ಲ, (ಸಾಗಣೆದಾರು ಅಲ್ಲ ) ನಮಗೆ ನೀವು ಪಾರ್ಟರ್ಸ್, ಬೇರೆ ಬೇರೆ ಕಂಪನಿಗಳು ನಿಮಗೆ ಟ್ರಾನ್ಸಪೆÇೀಟರ್ಸಗಳೆಂದು ತಿಳಿದುಕೊಳ್ಳಬಹುದು, ಆದರೆ ನಾವು ನಿಮಗೆ ಬಿಜಿನೆಸ್ ಪಾರ್ಟನರ್ ಎಂದು ತಿಳಿದುಕೊಳ್ಳ್ಳುತ್ತೇವೆ ಎಂದು ಓರಿಯಂಟ್ ಸಿಮೆಂಟ ಕಂಪನಿಯ ಪ್ಲಾಂಟ್ ಮುಖ್ಯಸ್ಥ ಸತ್ಯಭರ್ತ ಶರ್ಮಾ ಅವರು ಹೇಳಿದರು.
ಅವರು ಪಟ್ಟಣದಲ್ಲಿ ಚಿತ್ತಾಪುರ ಲಾರಿ ಮಾಲೀಕರ ಸಂಘದ ಕಚೇರಿಯನ್ನು ಉದ್ಘಾಟನೆ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಲಾರಿ ಮಾಲೀಕರ ಸಂಘದ ತಾಲೂಕು ಘಟಕ ಮತ್ತು ಅದರ ಕಚೇರಿಯನ್ನು ಉದ್ಘಾಟನೆ ಮಾಡುತ್ತಿರುವುದು ನನಗೆ ಖುಷಿಯಾಗುತ್ತಿದೆ.
ಈ ಸಂಘ ಸ್ವಾರ್ಥಕ್ಕಾಗಿ ಅಲ್ಲ ಎಲ್ಲಾರ ಒಳ್ಳೆಯದಾಗಿ ಇರುತ್ತೆ, ಭವಿಷ್ಯದಲ್ಲಿ ಸಂಘದ ಮೂಲಕ ಲಾರಿ ಮಾಲೀಕರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವ ಉದ್ದೇಶಕ್ಕಾಗಿ ಆಸೋಸಿಯೇಶನ್ ಮಾಡಿದ್ದು, ಇದಕ್ಕಿಂತ ಒಳ್ಳೆಯ ಕೆಲಸ ಬೇರೆ ಇಲ್ಲ, ಸಂಘದ ಉದ್ದೇಶವನ್ನು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಲಾರಿ ಮಾಲೀಕರ ಅಸೋಸಿಯೇಶನ್‍ನವರಿಗೆ ನಮ್ಮ ಸಹಕಾರ ಯಾವಾಗಲೂ ಇರುತ್ತೆ ಯಾವುದೇ ರೀತಿಯ ಸಮಸ್ಯೆ ಆದಾಗ ಯೋಚಿಸದೇ ಬನ್ನಿ ಅದನ್ನು ಪರಿಹಾರ ನೀಡುವ ನಿಟ್ಟಿನಲ್ಲಿ ನಾವು ಪ್ರಮಾಣಿವಾಗಿ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕ ಘಟಕದ ಅಧ್ಯಕ್ಷ ರವೀಂದ್ರ ಸಜ್ಜನ್ ಶೆಟ್ಟಿ ಅವರು ಮಾತನಾಡಿ. ನೀವು ಲಾರಿ ಮಾಲೀಕರ ಸಂಘ ಯಾವಾಗಲೂ ಒಗ್ಗಟಾಗಿ ಇರಬೇಕು, ಒಳ್ಳೆಯ ಕೆಲಸ ಮಾಡಿದರೆ ಸಂಘಕ್ಕೂ ಕೂಡ ಒಳ್ಳೆಯ ಹೆಸರು ಬರುತ್ತೆ, ನಮ್ಮ ಸಹಕಾರ ನಿಮ್ಮ ಜೊತೆ ಇರುತ್ತೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಅಬ್ದುಲ್ ರಹೀಂ ಸಗರಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಲಾರಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪ್ರಕಾಶ ಕೆಎಂಜಿ, ಉಪಾಧ್ಯಕ್ಷ ಅಬ್ದುಲ್ ರಶೀದ, ಸಂಘದ ಕಾರ್ಯದರ್ಶಿ ಹುಲಿರಾಜ ಕಾಜಳೆ, ಬಿಜೆಪಿ ತಾಲೂಕ ಘಟಕದ ಅಧ್ಯಕ್ಷ ರವೀಂದ್ರ ಸಜ್ಜನ್ ಶೆಟ್ಟಿ, ಮಾತನಾಡಿದರು.
ಸಂಘದ ನೂತನ ಪದಾಧಿಕಾರಿಗಳು : ಲಾರಿ ಮಾಲೀಕರ ಸಂಘದ ತಾಲೂಕ ಅಧ್ಯಕ್ಷ ಅಬ್ದುಲ್ ಮನ್ನನ, ಉಪಾಧ್ಯಕ್ಷರಾಗಿ ಶೇಖ್ ನಿಯಾಜ್ ಡಕಾರೆ, ಕಾರ್ಯದರ್ಶಿ ಸುನೀಲ್ ಚೌದರಿ, ಸಹ ಕಾರ್ಯದರ್ಶಿ, ಕಾಶಪ್ಪ ಭೈರಿ, ಖಜಾಂಚಿ ಹಸನ್ ಪಟೇಲ (ಮುನ್ನಾ), ಸದಸ್ಯರಾದ, ಸೈಯದ್ ಮಜರ್ ಉಲ್ ಹಸನ್, ಖಾಸೀಂ ಎಟುಝಡ್,ಆಶೋಕ ಗುತ್ತೇದಾರ,ಮಹೇಶ ಕುಮಾರ, ಶ್ರೀಚೌದರಿ, ಮಹ್ಮದ ವಾಸೀಂ, ನಾಗರಾಜ ಭೋವಿ, ಅವರನ್ನು ನೇಮಕ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷ ಸಾದೀಕ್ ಸೇಠ, ಪ್ರಮುಖರಾದ ಸೈಯದ್ ಜಫರುಲ್ ಹಸನ್, ಅಬ್ದುಲ್ ಕಲೀಂ, ನಜೀರ ಮಿಯಾ ಅಡಕಿ, ಮಹಮ್ಮದ್ ಯೂನುಸ್, ಖಾಸೀಂ ಎಟುಝಡ, ಖಾಜಾ ಪಾಶ ಲಿಮರಾ, ಸದಂ ಹುಸೇನ್, ಶ್ರೀನಿವಾಸ ರಡ್ಡಿ, ಸೇರಿದಂತೆ ಇತರರು ಉಪಸ್ಥಿತದರು. ಸೈಯದ್ ಅತೀಕ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ತಾಪುರ ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷನ್ನಾಗಿ ನನಗೆ ಮಾಡಿದ್ದು ಸಂತೋಷ ತಂದಿದ್ದೆ. ಇನ್ನೊಂದು ಕಡೆ ಲಾರಿ ಮಾಲೀಕರ ಸಂಘ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬರದಂತೆ ನೋಡಿಕೊಂಡು, ಸಂಘದಲ್ಲಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಭವಿಷ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸ ನನಗಿದೆ. -ಅಬ್ದುಲ್ ಮನ್ನನ ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…