ಭಾರತ ಸ್ವಾತಂತ್ರ್ಯ ಗೊಳಿಸುವುದಕ್ಕಾಗಿ ತ್ಯಾಗ ಮಾಡಿದ ಅಶ್ಫಾಕುಲ್ಲಾ ಖಾನ್

ಶಹಾಬಾದ: ಭಾರತ ಸ್ವಾತಂತ್ರ್ಯ ಗೊಳಿಸುವುದಕ್ಕಾಗಿ ತ್ಯಾಗ ಮಾಡಿದ ಮಹಾನ್ ಕ್ರಾಂತಿಕಾರಿ ಎಂದರೆ ಅಶ್ಫಾಕುಲ್ಲಾ ಖಾನ್ ಎಂದು ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ.ಎಸ್.ಹೆಚ್ ಹೇಳಿದರು.

ಅವರು ಎಐಡಿವೈಒ ಸ್ಥಳೀಯ ಸಮಿತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾದ ಅಶ್ಫಾಕುಲ್ಲಾ ಖಾನ್ ಅವರ 125ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲೇ ದೇಶಪ್ರೇಮ ಹಾಗೂ ಬ್ರಿಟಿಷರ ವಿರುದ್ಧ ಕ್ರೋಧವನ್ನೆ ಬೆಳೆಸಿಕೊಂಡ ಅಶ್ಫಾಕುಲ್ಲಾ ಖಾನ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದೇ ನನ್ನ ಗುರಿ ಎಂದು ನಿರ್ಧರಿಸಿದ್ದರು ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ರವರ ವಿಚಾರಗಳಿಂದ ಪ್ರಭಾವಿತರಾಗಿ ಕ್ರಾಂತಿಕಾರಿ ಸಂಘಟನೆಯಾದ ಹೆಚ್.ಆರ್.ಎ.ನ ಸದಸ್ಯರಾದರು.
ಆಬ್ರಿಟಿμï ಸರ್ಕಾರದ ‘ಒಡೆದು ಆಳುವ’ ನೀತಿಯ ಹಿನ್ನೆಲೆಯಲ್ಲಿ ಒಬ್ಬ ಹಿಂದೂ ಮತ್ತು ಒಬ್ಬ ಮುಸ್ಲಿಂ ಹುಡುಗನ ಮಧ್ಯೆ ಈ ಸ್ನೇಹ, ಆ ಕಾಲದಲ್ಲಿ ಅದ್ವಿತೀಯವಾದುದು.

ಆತನ ಗುಣನಡತೆಯಲ್ಲಿ ಕ್ರಾಂತಿಕಾರಿ ನೈತಿಕತೆ ಮತ್ತುಸಿದ್ಧಾಂತದ ಪ್ರಭಾವ ಎಷ್ಟಿತ್ತೆಂದರೆ, ಭಾμÉ ಅಥವಾ ಧರ್ಮದ ಪ್ರಶ್ನೆಗಳು ಬದಿಗೆ ಸರಿದಿದ್ದವು. ಇಡೀ ಮುಸ್ಲಿಂ ಜನಾಂಗವನ್ನು ರಾಜಿರಹಿತ ಸ್ವಾತಂತ್ರ್ಯ ಸಂಗ್ರಾಮದ ಹಿಡಿತಕ್ಕೆ ತರುವ ಬಗ್ಗೆ ಅವರು ಚಿಂತಿಸುತ್ತಿದ್ದರು.

ಜನರನ್ನು ಸ್ವಾತಂತ್ರ್ಯ ಚಳುವಳಿಗೆ ಬರುವಂತೆ ಉತ್ತೇಜಿಸಲು, ಬಿಸ್ಮಿಲ್ ರನ್ನು ಅವರು ಉರ್ದುವಿನಲ್ಲಿ ಕವನ ಬರೆಯಬೇಕೆಂದು ಕೇಳಿಕೊಂಡರು. ಆದರೆ ಆ ಸಮಯದಲ್ಲಿ ಹೆಚ್ಚಿನ ಕ್ರಾಂತಿಕಾರಿ ಸಾಹಿತ್ಯ ಮತ್ತು ದೇಶಭಕ್ತಿಕವನಗಳು ಹಿಂದಿಯಲ್ಲಿ ಬರೆದವುಗಳಾಗಿದ್ದವು. ತನ್ನ ಸಂಗಾತಿಗಳನ್ನು ತನಗಾಗಿ ಅವುಗಳನ್ನೆಲ್ಲಾ ಓದಿ ಹೇಳಬೇಕೆಂದು ಕೇಳಿಕೊಳ್ಳುತ್ತಿದ್ದರು.

ಈ ರೀತಿಯಾಗಿಯೇ, ಆನಂದಮಠ, ಐರಿμï ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಗಳು, ಮೋತಿಲಾಲರ ಕವನ ‘ಕನಯ್‍ಲಾಲ್’, ಕಾಜಿ ನಜ್ರುಲ್ ಇಸ್ಲಾಮ್‍ರ ಕ್ರಾಂತಿಕಾರಿ ಕವನಗಳು ಅವರಿಗೆ ಪರಿಚಿತವಾಗಿದ್ದವು.

ಧೀರರು ಸಾವಿಗೆ ಹೆದರುವುದನ್ನು ನಾನೆಂದೂ ಕಂಡಿಲ್ಲ” ಎಂಬುವುದು ಅಶ್ವಾಕುಲ್ಲಾರ ಮರೆಯಲಾಗದ ಹೇಳಿಕೆಯಾಗಿದೆ. ಭಾರತ ಸ್ವಾತಂತ್ರ್ಯವನ್ನು ಗೆದ್ದ ನಂತರ ಮತ್ತು ಬಿಳಿಯರ ಆಡಳಿತದ ಜಾಗದಲಿ, ಬಡವ-ಶ್ರೀಮಂತ, ಜಮೀನ್ದಾರ-ರೈತರ ಭೇದಗಳನ್ನು ಜೀವಂತವಾಗಿಟ್ಟು ಕೊಂಡು, ಸ್ವದೇಶೀ ಶೋಷಕರು ಅಧಿಕಾರವನ್ನು ಕೈವಶಮಾಡಿಕೊಂಡರೆ, ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ – ದೇವರೇ ನಮ್ಮ ಮಾತೃಭೂಮಿಯಲ್ಲಿ ಸಮಾನತೆ ಬರುವವರೆಗೂ ನಮಗೆ ಅಂತಹ ಸ್ವಾತಂತ್ರ್ಯ ಕೊಡಬೇಡ. ಯಾವುದೇ ಭೇದಭಾವ ಇಲ್ಲದೆ ನಾವೆಲ್ಲರೂ ಸಮಾನರು ಎಂದು ಹೇಳಿದರೆ ಇಂತಹ ಮಹಾನ್ ಕ್ರಾಂತಿಕಾರಿಯ ವಿಚಾರಗಳು ಯುವಜನರು ಅರಿಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಅಧ್ಯಕ್ಷರಾದ ರಘು ಪವಾರ್, ಕಾರ್ಯದರ್ಶಿ ರಮೇಶ ದೇವಕರ್, ಉಪಾಧ್ಯಕ್ಷರು ತೇಜಸ್ ಆರ್ ಇಬ್ರಾಹಿಂಪುರ, ಕಿರಣ ಮಾನೆ, ಆನಂದ ದಂಡಗುಲಕರ್, ಶಾಮ ಪವಾರ್, ಅಜೇಯ ದೊರೆ, ಹಾಗೂ ಇನ್ನಿತರು ಯುವಜನರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago