ಕೊರೊನಾ ವೇಳೆ ದೇವರು ಎಲ್ಲಿಗೆ ಹೋಗಿದ್ದರು? ಡಾ. ಹುಲಿಕಲ್ ನಟರಾಜ್ ಪ್ರಶ್ನೆ

ಕಲಬುರಗಿ: ಕೋವಿಡ್ ಸಂದರ್ಭದಲ್ಲಿ ಗುಡಿ, ಚರ್ಚ್, ಮಸೀದಿಗಳಿಗೆ ಬೀಗ ಹಾಕಿದಾಗ ದೇವರು ಎಲ್ಲಿ ಹೋಗಿದ್ದರು? ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ. ಹುಲಿಕಲ್ ನಟರಾಜಪ್ರಶ್ನಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಮೂರನೇ ಗೋಷ್ಠಿಯಲ್ಲಿ ‘ಕಲ್ಲು ದೇವರು ದೇವರಲ್ಲ ವಿಷಯ’ ಕುರಿತು ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣಪತಿ ಉತ್ಸವ ಸಂದರ್ಭದಲ್ಲಿ ಯುವಕರು ಕುಣಿಯುತ್ತಿದ್ದಾಗ ಒಬ್ಬ ಯುವಕ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ. ಗಣಪತಿಗೆ ಆ ಯುವಕನನ್ನು ಏಕೆ ತಡೆಯಲಾಗಲಿಲ್ಲ? ಎಂದು ಸವಾಲು ಹಾಕಿದರು.

ದೇವಸ್ಥಾನಗಳು ಸಮಾಧಾನ ಕೇಂದ್ರಗಳು. ಮನುಸ್ಸು ಪರಿವರ್ತನೆ ಮಾಡದ‌ ದೇವರ ಅಸ್ತಿತ್ವ ಎಲ್ಲಿದೆ? ಎಂದರು.

ಬಸವಣ್ಣನವರ ಕಳಬೇಡ ಕೊಲಬೇಡ ಎನ್ನುವ ವಚನ ಮೈಗೂಡಿಸಿಕೊಂಡಿದ್ದರೆ ಪೊಲೀಸ್ ಠಾಣೆ ಬರುತ್ತಿರಲಿಲ್ಲ? ಕಲ್ಲು ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಬದಲು ತಂದೆ ತಾಯಿಗಳನ್ನು ಉಳಿಸಿಕೊಳ್ಳಬೇಕು ಎಂದು ವಿವರಿಸಿದರು.

ಇಂದು ವಿಜ್ಞಾನ ಬಹಳ ಮುಂದುವರಿದಿದೆ. ಮಂಗಳಗ್ರಹದಲ್ಲಿ ಮನೆ ಮಾಡಿ, ಭೂಮಿ ನನ್ನ ತವರು ಮನೆ ಎಂದು ಕರೆಯುವ ಕಾಲ ದೂರವಿಲ್ಲ. ನಿಜವಾದ ಧರ್ಮ ಬೀದಿಯಲ್ಲಿ ಬಿದ್ದು ಒದ್ದಾಡುತ್ತಿದೆ. ಇಂದಿನ ತಾಂತ್ರಿಕಯುಗದಲ್ಲಿ ನಾವು ಅಪ್ ಡೇಟ್ ಆಗಬೇಕಿದೆ ಎಂದರು.

ಇಂತಹ ಸಭೆ ಸಮಾರಂಭಗಳು ನಮ್ಮ ಮನಸ್ಸನ್ನು ಸಾಣೆ ಹಿಡಿಯುತ್ತವೆ. ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನ ಕೊಡಬೇಕಾಗಿದೆ. ಪಂಚಾಂಗ ನೋಡುವ ಬದಲು ಪಂಚ ಅಂಗಗಳಿಗೆ ಹೆಚ್ಚಿನ ಗಮನ ಕೊಡಿ.ಇನ್ನೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುವುದು ಧರ್ಮ ಎಂದು ಹೇಳಿದರು.

ಸಮಾಜ, ದೇಹವನ್ನು ದಂಡಿಸುವ ದೇವರು ದೇವರಲ್ಲ. ದೇಹಕ್ಕೆ ಕಾಯಿಲೆ ಬಂದರೆ ಸರಿ ಹೋಗುತ್ತದೆ.‌ ಮನಸ್ಸಿಗೆ ಕಾಯಿಲೆ ಬಂದರೆ ದೇವರಪ್ಪ ಬಂದರೂ ಸಾಧ್ಯವಿಲ್ಲ. ದೇವರಿಗೂ ಮೋಸ ಮಾಡುವವರು ಮನುಷ್ಯರು ಮಾತ್ರ! ಬೆಂಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂದು ವಿಷಾದ ವ್ಯಕ್ತಪಡಿಸಿದರು.

‘ಅನುಭವ ಮಂಟಪ ಅನುವು ಮಾಡಿದಾತ’ ವಿಷಯ ಕುರಿತು ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಮಾತನಾಡಿ, ನೀಲಮ್ಮತಾಯಿಯವರ ಈ ವಚನ 60 ಸಾಲಿನ ಈ ವಚನ ಬಸವಣ್ಣನವರ ಚರಿತ್ರೆಯನ್ನು ಕಟ್ಟಿಕೊಡುತ್ತದೆ.‌ ಬಸವಣ್ಣನವರ ಕತೃತ್ವಶಕ್ತಿಗೆ ದರ್ಪಣದಂತಿದೆ ಎಂದು ತಿಳಿಸಿದರು.

ಅನುಭವ ಮಂಟಪಕ್ಕೆ ಸಂಬಂಧಿಸಿದ ಏಕೈಕ ವಚನವಿದು. ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡಲು ಅನುಭವ ಮಂಟಪವೇ ಮೂಲ‌ಕಾರಣ. ಅನುಭವ ಮಂಟಪಕ್ಕೆ ಪಾರ್ಲಿಮೆಂಟ್, ವಿಶ್ವ ಸಂಸ್ಥೆಗೆ ಹೋಲಿಸುತ್ತಾರೆ. ಆದರೆ ಅನುಭವ ಮಂಟಪಕ್ಕೆ ಸರಿ ಸಮಾನವಾದ ಶಬ್ದ ಮತ್ತೊಂದಿಲ್ಲ. ಅನುಭವ ಮಂಟಪ ಕಾಯಕ ಭಂಡಾರಿಗಳ ನೆಲೆ,‌ ದಾಸೋಹ ಸಂಪನ್ನವರು ಇರುವ ತಾಣ ಎಂದರು.

ಅನುಭವ ಮಂಟಪ ಮತ್ತು ಮಹಾಮನೆ ಪರಿಕಲ್ಪನೆ ತಂದ ಬಸವಣ್ಣನವರು ಕಾರ್ತಿಕ ಕತ್ತಲಿನ ದೀಪ. ಅನುಭವ ಮಂಟಪದ ಮೂಲಕ ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆ. ಸಮಾಜದ ಕಟ್ಟ ಕಡೆಯ ಜನರಿಗೆ, ಸ್ತ್ರೀಯರಿಗೆ ಸಮಾನತೆ, ಸ್ವಾತಂತ್ರ್ಯ ತಂದು ಕೊಟ್ಟರು ಎಂದು ವಿವರಿಸಿದರು.

ಸಿಯುಕೆ ಪ್ರಾಧ್ಯಾಪಕಿ ಡಾ.‌ಶಿಗಂಗಾ ರುಮ್ಮಾ ಅಧ್ಯಕ್ಷತೆ ವಹಿಸಿದ್ದರು. ಕಮಲಾಬಾಯಿ ರವೀಂದ್ರ ಶಾಬಾದಿ ಇತರರು ವೇದಿಕೆಯಲ್ಲಿ ಇದ್ದರು.

ಸಾಕ್ಷಿ ಸತ್ಯಂಪೇಟೆ ನಿರೂಪಿಸಿದರು. ಜಯಶ್ರೀ ಚಟ್ನಳ್ಳಿ ಸ್ವಾಗತಿಸಿದರು. ಸಂಜಯ ಪಾಟೀಲ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

53 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

54 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

56 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago