ಕಲಬುರಗಿ; ಅಫಜಲಪೂರ ತಾಲ್ಲೂಕಿನ ಗೊಬ್ಬುರ (ಬಿ)ಗ್ರಾಮದಲ್ಲಿ ದತ್ತು ಸುತಾರ(ಬಡಿಗೇರ) ಎಂಬುವವನಿಗೆ ಸೇರಿದ ಟಿನ್ ಶೆಡ್ ಮಲೆ ಅಬಕಾರಿ ದಾಳಿ ಅಬಕಾರಿ ದಾಳಿ ಮಾಡಿ ಅಕ್ರಮವಾಗಿ ಮಾರಾಟದ ಸಲುವಾಗಿ ಸಂಗ್ರಹಿಟ್ಟಿದ್ದ ಹೂ, ಬೀಜ ಮತ್ತು ಹಸಿರು ಎಲೆಗಳಿಂದ ಕೂಡಿದ್ದ ಒಟ್ಟು 2.664 ಏg ಹಸಿ ಗಾಂಜಾವನ್ನು ಹಾಗೂ ಒಂದು ಹೀರೋ ಪಾಶನ್ ಪೆÇ್ರ ದ್ವಿ – ಚಕ್ರ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ದಾಳಿಯಲ್ಲಿ 3 ಜನ ಆರೋಪಿತರನ್ನು ಸ್ಥಳದಲ್ಲಿ ಬಂಧಿಸಿ ದಾಳಿಯ ಕಾಲಕ್ಕೆ ಪರಾರಿಯಾದ 4 ಜನ ಆರೋಪಿಗಳ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ 1985 ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿತ 3 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರು ಕಲಬುರಗಿ ರವರ ನಿರ್ದೇಶನದಂತೆ ರವೀಂದ್ರ ಪಾಟೀಲ್ ಪತ್ರಾಂಕಿತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪುರ ರವರ ನೇತೃತ್ವದಲ್ಲಿ, ಉಪ ವಿಭಾಗ ಅಧೀಕ್ಷಕ ದೊಡ್ಡಪ್ಪ ಹೆಬಳೆ, ನರೇಂದ್ರ ಹೊಸಮನಿ ಅಬಕಾರಿ ನಿರೀಕ್ಷಕರು, ಶರಣಪ್ಪ ಮೇದ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್ ಮುಬಿನ್, ಮಲ್ಲಿಕಾರ್ಜುನ ನಟಿಕರ ಇವರುಗಳ ತಂಡ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ.