ಕಲಬುರಗಿ: ಹಝ್ರತ್ ಖ್ವಾಜಾ ಬಂದಾ ನವಾಝ್ (ರ.ಅ) ದರ್ಗಾದ ಪೀಠಾಧಿಪತಿ ಹಾಗೂ ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಖ್ಯಾತ ವಿದ್ವಾಂಸರಾಗಿದ್ದ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಸಾಹೇಬ್ (79) ಅವರು ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.
ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿದ್ದ, ಇವರು ಚಿಸ್ತಿ ಮತ್ತು ಸೂಫಿ ಪರಂಪರೆಯ ಪ್ರಮುಖ ವ್ಯಕ್ತಿಯಾಗಿದ್ದರು. ಪ್ರಸಿದ್ಧ ಸೂಫಿ ಸಂತ ಹಝ್ರತ್ ಖ್ವಾಜಾ ಬಂದಾ ನವಾಝ್ (ರ.ಅ) ಅವರ 23 ನೇ ನೇರ ವಂಶಸ್ಥರಾಗಿದ್ದ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಅವರು ತನ್ನ ಆಳವಾದ ಆಧ್ಯಾತ್ಮಿಕತೆಗೆ ಮಾತ್ರವಲ್ಲದೆ ಬೌದ್ಧಿಕ ಕೊಡುಗೆಗಳಿಗಾಗಿಯೂ ಹೆಸರುವಾಸಿಯಾಗಿದ್ದರು.
ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿ ಆಗಿದ್ದ ಇವರು KBN ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಆಧುನಿಕ ತಂತ್ರಜ್ಞಾನದೊಂದಿಗೆ ಸೂಫಿ ಪರಂಪರೆಯ ಸೇತುವೆ ಆಗಿ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪೀಳಿಗೆಗಳಿಗೆ ಸೂಫಿ ಪರಂಪರೆಯನ್ನು ತಿಳಿಸುವ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳ ಪ್ರಮುಖ ಭಾಗವಾಗಿದ್ದರು.
ಅವರು ಆಧ್ಯಾತ್ಮಿಕತೆಯಿಂದ ಕೂಡಿದ್ದ ಜೀವನದ ಮೂಲಕ ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಡಾ. ಸೈಯದ್ ಷಾ ಖುಸ್ರೋ ಹುಸೈನಿ ಅವರ ನಿಧನದಿಂದ ಅವರ ಅಪಾರ ಅನುಯಾಯಿ ಮತ್ತು ಸೂಫಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಬ್ಬರು ಗಂಡು ಮತ್ತು ಮೂವರು ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಬಿ.ಆರ್. ಪಾಟೀಲರ 76ನೇ ಹುಟ್ಟುಹಬ್ಬದ ಆಚರಣೆ ನಿಮಿತ್ತ ಕಲಬುರಗಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವಿನ…
ಸುಳ್ಳು ದೂರು ಕೊಟ್ಟಲ್ಲಿ 3 ವರ್ಷ ಜೈಲು ಶಿಕ್ಷೆ ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ…
ಕಲಬುರಗಿ: ಕಲಬುರಗಿ ಜಿಲ್ಲೆ ಶರಣರ ಹೆಬ್ಬಾಗಿಲು. ಇಲ್ಲಿ ಅನೇಕ ಶರಣರು, ದಾಸರು ಬಾಳಿ ಬದುಕಿದ ನೆಲ. ಶಿಕ್ಷಣ ಮತ್ತು ದಾಸೋಹ…
ಧಾರವಾಡ: ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆಂದು ಖ್ಯಾತ ನಟ, ನಿರ್ದೇಶಕ ರಾಜು ತಾಳಿಕೋಟೆ…
ಕಲಬುರಗಿ : ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕದ ಬೆನ್ನ ಹಿಂದೆ…
ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ…