ಕಲಬುರಗಿ: ಕೆಬಿಎನ್ ದರ್ಗಾದ ಪೀಠಾಧಿಪತಿ ಡಾ. ಸೈಯದ್ ಷಾ ಖುಸ್ರೋ ಹುಸೈನಿ ವಿಧಿವಶ; ಇಂದು ಅಂತ್ಯಕ್ರಿಯೆ

0
57

ಗುರುವಾರ ಇಂದು ಸಂಜೆ 6 ಗಂಟೆಗೆ ಹಝ್ರತ್ ಖಾಜಾ್ ಬಂದಾ ನವಾಝ್ ದರ್ಗಾದ ಆವರಣದಲ್ಲಿ ವಿಶೇಷ ಪ್ರಾರ್ಥನೆದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಕಲಬುರಗಿ: ಹಝ್ರತ್ ಖ್ವಾಜಾ ಬಂದಾ ನವಾಝ್ (ರ.ಅ) ದರ್ಗಾದ ಪೀಠಾಧಿಪತಿ ಹಾಗೂ ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಖ್ಯಾತ ವಿದ್ವಾಂಸರಾಗಿದ್ದ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಸಾಹೇಬ್‌ (79) ಅವರು ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.

ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿದ್ದ, ಇವರು ಚಿಸ್ತಿ ಮತ್ತು ಸೂಫಿ ಪರಂಪರೆಯ ಪ್ರಮುಖ ವ್ಯಕ್ತಿಯಾಗಿದ್ದರು. ಪ್ರಸಿದ್ಧ ಸೂಫಿ ಸಂತ ಹಝ್ರತ್ ಖ್ವಾಜಾ ಬಂದಾ ನವಾಝ್ (ರ.ಅ) ಅವರ 23 ನೇ ನೇರ ವಂಶಸ್ಥರಾಗಿದ್ದ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಅವರು ತನ್ನ ಆಳವಾದ ಆಧ್ಯಾತ್ಮಿಕತೆಗೆ ಮಾತ್ರವಲ್ಲದೆ ಬೌದ್ಧಿಕ ಕೊಡುಗೆಗಳಿಗಾಗಿಯೂ ಹೆಸರುವಾಸಿಯಾಗಿದ್ದರು.

Contact Your\'s Advertisement; 9902492681

ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿ ಆಗಿದ್ದ ಇವರು KBN ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಆಧುನಿಕ ತಂತ್ರಜ್ಞಾನದೊಂದಿಗೆ ಸೂಫಿ ಪರಂಪರೆಯ ಸೇತುವೆ ಆಗಿ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪೀಳಿಗೆಗಳಿಗೆ ಸೂಫಿ ಪರಂಪರೆಯನ್ನು ತಿಳಿಸುವ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳ ಪ್ರಮುಖ ಭಾಗವಾಗಿದ್ದರು.

ಅವರು ಆಧ್ಯಾತ್ಮಿಕತೆಯಿಂದ ಕೂಡಿದ್ದ ಜೀವನದ ಮೂಲಕ ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಡಾ. ಸೈಯದ್ ಷಾ ಖುಸ್ರೋ ಹುಸೈನಿ ಅವರ ನಿಧನದಿಂದ ಅವರ ಅಪಾರ ಅನುಯಾಯಿ ಮತ್ತು ಸೂಫಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಬ್ಬರು ಗಂಡು ಮತ್ತು ಮೂವರು ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here