ಬಿಸಿ ಬಿಸಿ ಸುದ್ದಿ

ಕಲಬುರಗಿ | ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು; ಐ ಕೆ ಪಾಟೀಲ್

ಕಲಬುರಗಿ: ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ನಿಮಿತ್ತ ಕ್ರೀಡಾ ವಿಧ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜು ರಾಜ್ಯಕ್ಕೆ ರಾಷ್ಟ್ರಕ್ಕೆ ಹಲವಾರು ಕ್ರೀಡಾಪಟುಗಳನ್ನು ನೀಡಿದೆ. ಇಲ್ಲಿಯ ಅನೇಕ ವಿಧ್ಯಾರ್ಥಿಗಳು ಕ್ರೀಡಾ ಸಾಧಕರಾಗಿ ಹೊರ ಹೊಮ್ಮಿದ್ದಾರೆ ರಾಜ್ಯ ರಣಜಿ ಕ್ರಿಕೆಟ್ ತಂಡದಲ್ಲಿಯೂ ಸಹ ಇಲ್ಲಿನ ಕ್ರಿಕೆಟ್ ತಾರೆ ಶಶಿಕುಮಾರ್ ಕಾಂಬ್ಳೆ ಆಟ ಆಡುತ್ತಿದ್ದಾನೆ ಎಂದು ಹೇಳಿದರು.

ಕೇವಲ ಭೌತಿಕವಾಗಿ ಸದೃಢವಾಗಿದ್ದರೆ ಮಾತ್ರ ಸಾಧನೆ ಮಾಡಬಹುದು ಎಂಬುದು ತಪ್ಪು ಕಲ್ಪನೆ ಮಾನಸಿಕವಾಗಿ ದೃಡ ನಿಲುವು ಹೊಂದಿದರೆ ಏನು ಬೇಕಾದರೂ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ಮಾತನಾಡಿ ಸಂಸ್ಕಾರಗಳು ಮನುಷ್ಯನನ್ನು ರೂಪಿಸುತ್ತವೆ.ದೃಢ ಸಂಕಲ್ಪದಿಂದ ಗುರಿ ಸಾಧನೆ ಸಾಧ್ಯ ಎಂಬುದನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರಿಯೆಗಳಲ್ಲಿ ಆಯ್ಕೆಯಾಗುವದರೋಂದಿಗೆ ನಮ್ಮ ಕಾಲೇಜಿಗೆ, ಸಂಸ್ಥೆಗೆ ಕಿರ್ತಿ ತಂದಿದ್ದಾರೆ ಎಂದು ಹೇಳಿದರು

ನಂತರ ರಾಷ್ಟ್ರ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಪ್ರಥಮ ಪಿಯುಸಿ ಆಶೀಶ್ ಧನರಾಜ್, ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಶ್ವಾಸ ವಿಠಲ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಬಂಡಂಗ್ ಸನಪ್ ಜಮೀರ್ ಅವರನ್ನು ಕಾಲೇಜಿನ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ನಂತರ ಮಕ್ಕಳ ದಿನಾಚರಣೆ ನಿಮಿತ್ತ ಆಟವಾಡಿಸಿದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ ಪಾಂಡುರಂಗ ಚಿಂಚನಸೂರ, ಗುರುಶಾಂತ್ ಹೂಗಾರ, ಆನಂದ , ಮಲಕಮ್ಮ  ಪಾಟೀಲ್, ವಿ ಜಿ ಮಹಿಳಾ ಪ ಪೂ ಮಹಾವಿದ್ಯಾಲಯದ ಸರೋಜಾದೇವಿ ಪಾಟೀಲ್ ಸಂಗೀತಾ ಸಡಕೀನ್, ಅಶ್ವಿನಿ ಪಾಟೀಲ್, ಭಾಗ್ಯಶ್ರೀ ಬೇನೂರ, ರುದ್ರಾಂಬಿಕಾ ಕಿರಾಣಿ, ಮಧುಶ್ರೀ ಘಂಟಿ, ವಿಜಯಲಕ್ಷ್ಮಿ ಶಾಬಾದಿ ಉಪಸ್ಥಿತರಿದ್ದರು ಉಪನ್ಯಾಸಕಿ ಶ್ವೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ

ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…

13 mins ago

ಜಾನಪದ ನೃತ್ಯೋತ್ಸವ ಕಾರ್ಯಕ್ರಮ

ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …

16 mins ago

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಹನುಮಂತರಾವಗೆ ಅಭಿನಂದನ ಸಮಾರಂಭ

ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…

18 mins ago

ಕಲಬುರಗಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ಸಂಘಟನಾ ವೇದಿಕೆ (ಕನ್ನಡಿಗರ ಶಕ್ತಿ) ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಕನ್ನಡದ ಹಬ್ಬ…

22 mins ago

ನೊಂದವರ ಬಾಳಿಗೆ ಬೆಳಕಾಗುವವರೇ ನೈಜ ಸಾಧಕರು

ಕಲಬುರಗಿ: ಯಾವ ವ್ಯಕ್ತಿ ಸಮಾಜದಲ್ಲಿರುವ ನೊಂದವರು, ಬಡವರು, ಅಸಹಾಯಕರ ಪರ ಕಾಳಜಿ ಹೊಂದಿ ಅವರಿಗೆ ಸಹಾಯ ಮಾಡುತ್ತಾನೆಯೋ, ಅವರೇ ಸಮಾಜದ…

25 mins ago

ಮಂಡ್ಯ ಟೈಮ್ಸ್ ಸಂಪಾದಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…

4 hours ago