ಆಳಂದ:ಮುಖ್ಯಮಂತ್ರಿಗಳ ಸಲಹಗಾರ, ಶಾಸಕ ಬಿ.ಆರ್.ಪಾಟೀಲ ಅವರ ೭೬ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ಭಾರತೀಯ ರಡ್ ಕ್ರಾಸ್ ಹಾಗೂ ಸಮತಾ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ೩೨೦ ಜನರ ಆರೋಗ್ಯ ತಪಾಸಣೆ ಮತ್ತು ೭೮ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ಭೂಸನೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗಜಂಗಮ ಪಾಟೀಲ, ಸಿದ್ದು ಗೌಡ ಪಾಟೀಲ ಮತ್ತಿತರ ರಾಜಕೀಯ ಮುಖಂಡರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಾಸಕರ ಅಭಿಮಾನಿಗಳು ಈ ಸಂದರ್ಭದಲ್ಲಿ ರಕ್ತದಾನಗೈದರು. ರಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಅರುಣಕುಮಾರ ಲೋಹಿಯಾ, ಕಾರ್ಯದರ್ಶಿ ರವೀಂದ್ರ ಶಾಬಾದಿ, ಬಾಬುರಾವ ಮಡ್ಕ, ಜಿಡಿಮನಿ, ಪ್ರಾಚಾರ್ಯ ಮಂಜುನಾಥ ಅಕ್ಕಿ, ಜೀಮ್ಸ್ ಆಸ್ಪತ್ರೆ ರಕ್ತನಿಧಿ ಮುಖ್ಯಸ್ಥೆ ಮಮತಾ ಪಾಟೀಲ, ಭಾಗ್ಯಲಕ್ಷ್ಮಿ ಸೋಮನಾಥ ಗಿನ್ನಿ ಉಪಸ್ಥಿತರಿದ್ದರು.
ಕಲಬುರಗಿ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರದ ವೈದ್ಯರಿಂದ ೧೨೯ ಜನರ ತಪಾಸಣೆ ನಡೆಸಲಾಯಿತು. ಮತ್ತಿತರ ಆರೋಗ್ಯ ಸಮಸ್ಯೆಗಳ ತಪಾಸಣೆಯನ್ನು ಸಮತಾ ಆಯುರ್ವೇದಿಕ್ ಆಸ್ಪತ್ರೆಯಿಂದ ನಡೆಸಿ, ಚಿಕಿತ್ಸೆ ನೀಡಲಾಯಿತು. ಕಲಬುರಗಿ ಜಿಮ್ಸ್ ಕೇಂದ್ರದ ರಕ್ತನಿಧಿ ಸಿಬ್ಬಂದಿಗಳು ಹಾಗೂ ಸಮತಾ ಆಯುರ್ವೇದಿಕ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ರಕ್ತದಾನದ ಶಿಬಿರವನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಯಿತು.
ಪಟ್ಟಣ ಸಮತಾ ಲೋಕ ಶಿಕ್ಷಣ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಬಿ.ಆರ್.ಪಾಟೀಲ ಅವರ ಸಾಧನೆ ಮತ್ತು ಹೋರಾಟ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಕಡಗಂಚಿಯ ಸಿಯುಕ ಸಹ ಕುಲಸಚಿವ ಡಾ.ಅಜೀಂ ಪಾಶಾ ಅವರು ಮಾತನಾಡಿ ಬಿ.ಆರ್.ಪಾಟೀಲ ಅವರು ದೂರದೃಷ್ಟಿಯುಳ್ಳ ನಾಯಕರಾಗಿದ್ದು, ವಿಶೇಷವಾಗಿ ಈ ಭಾಗದ ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಅವರಲ್ಲಿ ಕಾಳಜಿ ಹೆಚ್ಚಿದೆ ಎಂದರು.
ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ, ಕಲ್ಯಾಣರಾವ ಪಾಟೀಲ, ಜೈನೋದಿನ್ ಮುಜಾವರ, ಸಾತಲಿಂಗಪ್ಪ ಪಾಟೀಲ ಉಪಸ್ಥಿತರಿದ್ದರು.
ಸರಸಂಬಾ ಗ್ರಾಮದಲ್ಲಿಯೂ ಉಪನ್ಯಾಸ ಕಾರ್ಯಕ್ರಮ ಜರುಗಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಭಾಗವಹಿಸಿದರು.
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…
ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …
ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…
ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ಸಂಘಟನಾ ವೇದಿಕೆ (ಕನ್ನಡಿಗರ ಶಕ್ತಿ) ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಕನ್ನಡದ ಹಬ್ಬ…
ಕಲಬುರಗಿ: ಯಾವ ವ್ಯಕ್ತಿ ಸಮಾಜದಲ್ಲಿರುವ ನೊಂದವರು, ಬಡವರು, ಅಸಹಾಯಕರ ಪರ ಕಾಳಜಿ ಹೊಂದಿ ಅವರಿಗೆ ಸಹಾಯ ಮಾಡುತ್ತಾನೆಯೋ, ಅವರೇ ಸಮಾಜದ…
ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…