ಬಿಸಿ ಬಿಸಿ ಸುದ್ದಿ

ಶಿಕ್ಷಕರೇ, ಪಾಲಕರೇ ಮಕ್ಕಳನ್ನು ಮೊಬೈಲ್‍ನಿಂದ ರಕ್ಷಿಸಿ ಅದರ ಮೋಹದಿಂದ ಹೊರತನ್ನಿ; ಪ್ರೊ. ಚನ್ನಾರಡ್ಡಿ ಪಾಟೀಲ

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ “ಮಕ್ಕಳ ದಿನಾಚರಣೆ”ಯ ನಿಮಿತ್ಯವಾಗಿ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಪಂಡಿತ್ ಜವಾಹರ್‍ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ನುಡಿಮುತ್ತಾದ “ವಿದ್ಯಾರ್ಥಿ ಜೀವನ ಹಾಳು ಮಾಡಿಕೊಂಡರೆ ಮುಂಬರುವ ಇಡೀ ಜೀವನವನ್ನೇ ಹಾಳು ಮಾಡಿಕೊಂಡಂತೆ” ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಟಿ.ವಿ., ಮೊಬೈಲ್‍ಗಳನ್ನು ಅತಿಯಾಗಿ ಬಳಸದೆ ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಂಡು ಅದಕ್ಕಾಗಿ ಕಠಿಣ ಪರಿಶ್ರಮ ಹಾಗೂ ಸತತ ಅಧ್ಯಯನ ಅವಶ್ಯವೆಂದರು.

ಅತ್ಯುತ್ತಮ ಅಂಕಗಳಿಸಲು ವಿದ್ಯಾರ್ಥಿಗಳು ಓದಿನ ಜೊತೆಗೆ ಪೌಷ್ಟಿಕ ಆಹಾರ, ಸರಿಯಾದ ನಿದ್ರೆ ಹಾಗೂ ಆಟೋಟಗಳಲ್ಲಿ ಮತ್ತು ಸ್ವಲ್ಪ ಮನರಂಜನೆ ಅವಶ್ಯ ಎಂದರು. ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಸುವುದರಿಂದ ಉದ್ವೇಗಕ್ಕೆ ಒಳಗಾಗಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡದೆ ಆರೋಗ್ಯ ಸಮಸ್ಯೆ ಎದುರಿಸಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಪಾಲಕರ ಬಗ್ಗೆ ಅಸಡ್ಡೆ, ಓದಿನಲ್ಲಿ ನಿರಾಸಕ್ತಿ, ಸಂಬಂಧಿಕರೊಡನೆ ಹಾಗೂ ಸ್ನೇಹಿತರೊಡನೆ ಅನಾವಶ್ಯಕ ಮನಸ್ತಾಪ ಹೆಚ್ಚಾಗುತ್ತಿದೆ. ಆದ್ದರಿಂದ ಶಿಕ್ಷಕರು ಹಾಗೂ ಪಾಲಕರು ಅಂತಹ ಮಕ್ಕಳನ್ನು ಗುರುತಿಸಿ ಅವರನ್ನು ಮೊಬೈಲ್‍ನಿಂದ ರಕ್ಷಿಸಿ ಅದರ ವ್ಯಾಮೋಹದಿಂದ ಹೊರತರಬೇಕೆಂದು ಶಿಕ್ಷಕರಿಗೆ ಹೇಳಿದರು.

ವಿದ್ಯಾರ್ಥಿಗಳೂ ಕೂಡ ತಮ್ಮ ಭವಿಷ್ಯವನ್ನು ಅಲಕ್ಷ್ಯ ಮಾಡದೆ ತಂದೆ-ತಾಯಿಯ ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳದೇ ಶ್ರದ್ಧೆಯಿಂದ ಓದಿ ಜ್ಞಾನದ ದಾಸರಾಗಬೇಕೆ ಹೊರತು ಮೊಬೈಲ್‍ನ ದಾಸರಾಗಬೇಡಿ ಎಂದು ಹೇಳಿ ಕೆಟ್ಟ ಹವ್ಯಾಸಗಳಿಗೆ ಒಳಗಾಗದೇ ಉತ್ತಮ ಹವ್ಯಾಸಗಳನ್ನು ಹೊಂದಿ ದೇಶದ ಆಸ್ತಿಯಾಗಿ ಹೊರಹೊಮ್ಮಬೇಕೆಂದು ಪ್ರೋತ್ಸಾಹಿಸಿದರು.

ಉಪನ್ಯಾಸಕರು ಮಕ್ಕಳಿಗಾಗಿ ಪೌಷ್ಠಿಕಾಂಶದಿಂದ ಕೂಡಿದ ವಿವಿಧ ರೀತಿಯ ತಿಂಡಿ, ತಿನಿಸುಗಳ “ಫುಡ್ ಫೇರ್” ಆಯೋಜಿಸಿ ಅವರಿಗೆ ಉಣಬಡಿಸಿದರು ಹಾಗೂ ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರು ಹಾಗೂ ಸುಖಿ ಸಾಂಸ್ಕøತಿಕ ಮತ್ತು ಸಂಗೀತ ಸಂಸ್ಥೆಯವರು ಅರ್ಥಗರ್ಭಿತವಾದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಪ್ರಾಚಾರ್ಯರಾದ ಪ್ರಶಾಂತ ಕುಲಕರ್ಣಿ, ವಿನುತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಖಿ ಸಾಂಸ್ಕøತಿಕ ಸಂಸ್ಥೆಯವರಿಂದ ನಡೆದ ಸಂಗೀತ ಕಾರ್ಯಕ್ರಮ ಎಲ್ಲರ ಮನರಂಜಿಸಿದವು. ಶ್ರೀಮತಿ ಲಕ್ಷ್ಮೀ ಶೈಲಜಾ ಕುಲಕರ್ಣಿ ಮತ್ತು ಶ್ರೀಮತಿ ವಿನುತಾ ಆರ್.ಬಿ. ಪ್ರಾರ್ಥಿಸಿದರು. ಡಾ. ವಿದ್ಯಾವತಿ ನಿರೂಪಿಸಿದರು.

emedialine

Recent Posts

ಮಂಡ್ಯ ಟೈಮ್ಸ್ ಸಂಪಾದಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…

3 hours ago

ಬಿ.ಸಿ.ಎಂ. ಮಹಿಳಾ ವಸತಿ ನಿಲಯಕ್ಕೆ ಉಪ ಲೋಕಾಯುಕ್ತರ ದಿಢೀರ್ ಭೇಟಿ

ಕಲಬುರಗಿ:  ಪ್ರವಾಸದಲ್ಲಿರುವ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಶುಕ್ರವಾರ ದಿನವಿಡೀ ಸಾರ್ವಜನಿಕರ ಅಹವಾಲು ಸ್ಚೀಕರಿಸಿದದ ನಂತರ ರಾತ್ರಿ…

3 hours ago

ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ಸರ್ಕಾರ ಆದೇಶ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ…

3 hours ago

ನ. 18ರಂದು ಕನಕದಾಸ ಜಯಂತಿ ಆಚರಣೆ

ಕಲಬುರಗಿ: ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ನವೆಂಬರ್ 18ರಂದು ಕಲಬುರಗಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರದೇಶ…

3 hours ago

ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ: ಇಲ್ಲಿನ ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳು ನೂತನ ಆವಿಷ್ಕಾರವೊಂದನ್ನು ಮಾಡುವ‌ ಮೂಲಕ ಗೋವಾದಲ್ಲಿ ನಡೆದ ವಾರ್ಷಿಕ…

3 hours ago

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಿಗೆ ಕಸಾಪದಿಂದ ಆಹ್ವಾನ

ಶಹಾಬಾದ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ…

3 hours ago