ಕಲಬುರಗಿ; ಇಂದು ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮೂಡ್ ರವರಿಗೆ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಮನವಿಪತ್ರ ವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಭಾಗದ ಬಗರ ಹುಕುಂ ರೈತರ ಕುರಿತು ಚರ್ಚೆ ಮಾಡಲು ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾನ್ಯ ಶಾಸಕರು ದಿನಾಂಕ 8 ನೇಯ ತಾರೀಖು ಬೆಳಿಗ್ಗೆ 8ಗಂಟೆಗೆ ಮಾನ್ಯ ಶಾಸಕರ ಮನೆಯಲ್ಲಿ ಇರುವ ಕಚೇರಿಯಲ್ಲಿ ರೈತರೊಂದಿಗೆ ತಹಶೀಲ್ದಾರರ ಸಭೆಯನ್ನು ಗೊತ್ತುಡಿಸಿದರು.
ಈ ಸಮಯದಲ್ಲಿ ಗ್ರಾಮೀಣ ಭಾಗದ ರೈತರ ಬಗರ್ ಹುಕುಂ ಸಮಸ್ಯೆಗಳ ಕುರಿತು ಚರ್ಚಿಸೋಣ ಎಂದು ಭರವಸೆ ನೀಡಿದರು. ಹಾಗೂ ಡಿಸೆಂಬರ್ 9 ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೂ ಮಾತನಾಡುವುದಾಗಿ ತಿಳಿಸಿದರು.
ಈ ನಿಯೋಗದ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹಾಗೂ ಭೂಮಿಯ ಹಕ್ಬಕಿಗಾಗಿ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ಮಹೇಶ್ ಎಸ್. ಬಿ. ಯವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿವಶರಣಪ್ಪ ದೊಡ್ಮನಿ, ದಶರತ್ ತೆಗನೂರ, ಕಾಶಿಪತಿ, ಶರಣಪ್ಪ ತಳವಾರ್, ರವಿಚಂದ್ರ, ಪರಶುರಾಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.