JOB

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆ ನೀಡಲು ಅಖಿಲ ಕರ್ನಾಟಕ ರಾಜ್ಯ ಸಮಿತಿ ಆಗ್ರಹ

ಕಲಬುರಗಿ: ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ ಅಂಬೇಡ್ಕರರು ಮಹಾನ ಚೇತನರು ಮತ್ತು ಜಗತ್ತಿನ ಬೆಳಕು. ಅಸ್ಪೃಷ್ಯರು, ಮಹಿಳೆಯರು, ಶೋಷಿತರ ಬದುಕನ್ನು ಪ್ರತಿದಿನವು ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಇದ್ದರೆ ಬಾಬಾಸಾಹೇಬರು ಬರೆದ ಸಂವಿಧಾನದಿಂದ ಮಾತ್ರ ಸಾಧ್ಯ. ದೇವರು, ಧರ್ಮಗಳು, ಭಾರತದ ಶೋಷಿತ ಜನರನ್ನು ರಕ್ಷಣೆ ಮಾಡಲಿಲ್ಲ ಎಂದು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರಯ ಕುಡಕಿ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆ ಪ್ರಶ್ನಿಸಿದ್ದಾರೆ.

ಬಾಬಾಸಾಹೇಬರು ಹೇಳಿದ ಹಾಗೆ ವೈಜ್ಞಾನಿಕ, ವೈಚಾರಿಕತೆ, ಶಿಕ್ಷಣದಿಂದ ಮಾತ್ರ ಜನರ ಬದುಕನ್ನು ಬದಲಿಸುವ ಕೀಲಿ ಕೈ ಎಂದು ಬಾಬಾಸಾಹೇಬರು ಸಾರಿ ಸಾರಿ ಹೇಳಿದರು.
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಆರ್. ಎಸ್. ಎಸ್. ದವರ ಅಣತಿಯಂತೆ ಅಂಬೇಡ್ಕರ್ ಅವರ ವಿರೋಧಿಗಳಾದ ಬಿಜೆಪಿಯವರು ಬಾಬಾಸಾಹೇಬರನ್ನು ಕಂಡರೆ ಅಸಡ್ಡೆವನ್ನು ವ್ಯಕ್ತಪಡಿಸುತ್ತಾರೆ. ಅಂಬೇಡ್ಕರ ಹೆಸರು ಕೇಳಿದರೆ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷದವರಿಗೆ ಹೊಟ್ಟೆ ಉರಿಯುತ್ತದೆ. ಈ ಹಿಂದೆ ಬಾಬಾಸಾಹೇಬರ ಪ್ರತಿಕೃತಿಗಳು ಸುಟ್ಟಿರುತ್ತಾರೆ. ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಾರೆ. ಮತ್ತು ಬಾಬಾಸಾಹೇಬರನ್ನು ದ್ವೇಷಿಸುತ್ತಾರೆ. ಅನ್ನುವುದಕ್ಕೆ ಅಮಿತ್‌ಶಾ ಅವರ ಹೇಳಿಕೆ ನಿದರ್ಶನವಾಗಿದೆ ಎಂದಿದ್ದಾರೆ.

೧೭-೧೨-೨೦೨೪ ರಂದು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ಲೋಕಸಭೆಯಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ. ಏಳೇಳು ಜನ್ಮಗಳಲ್ಲು ಸ್ವರ್ಗ ಪ್ರಾಪ್ತಿಯಾಗುತ್ತಿತ್ತು. ಎಂದು ಅವರು ಹೇಳಿರುವ ಸೊಕ್ಕಿನ ಹೇಳಿಕೆಯನ್ನು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯ ಸಮಿತಿ ಖಂಡಿಸಿದ್ದಾರೆ.

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಬಿ. ಆರ್. ಅಂಬೇಡ್ಕರವರನ್ನು ಅವಮಾನಿಸುವಂತಹ ಹೇಳಿಕೆ ನೀಡಿರುವ ಅಮಿತ್‌ಶಾ ಅವರು ಭಾರತದ ಜನತೆಗೆ ಕ್ಷಮೆ ಕೋರಿ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯ ಸಮಿತಿ ಆಗ್ರಹಪಡಿಸಿದ್ದಾರೆ.

sajidpress

Recent Posts

ಡಿ.೨೮, ೨೯ರಂದು ಬಾಗಲೂರಿನಲ್ಲಿ ವೈಜ್ಞಾನಿಕ ಸಮ್ಮೇಳನ

ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ.೨೮ ಮತ್ತು ೨೯ರಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ…

6 hours ago

ಗ್ರಾಮೀಣ ವಿವಿಗೆ ಗಾಂಧಿ ಹೆಸರಿಡಿ: ಬಿ.ಆರ್. ಪಾಟೀಲ

ಗ್ರಾಮೀಣ ವಿವಿಗೆ ಗಾಂಧಿ ಹೆಸರಿಡ ಕಲಬುರಗಿ: ಗದಗನಲ್ಲಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮಗಾಂಧಿ ಅವರ ಹೆಸರಿಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ…

6 hours ago

ಜಾಗೃತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ: ನ್ಯಾಯವಾದಿ ಝಳಕಿ

ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…

1 day ago

ಜಾಗ್ರತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ: ನ್ಯಾಯವಾದಿ ಝಳಕಿ

ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…

1 day ago

ಜಾಗ್ರತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ: ನ್ಯಾಯವಾದಿ ಝಳಕಿ

ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…

1 day ago

ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಷಾ ಕಾರ್ಯ.

ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಚಾ ಕಾರ್ಯಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ…

1 day ago