ಕಲಬುರಗಿ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಬಿಡುಗಡೆಗೊಳಿಸಿರುವ ವಿಚಾರ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ, ಅದು ಜಾಮೀನು ಸಹಿತ ಪ್ರಕರಣವಾಗಿದೆ. ಅದಕ್ಕೆ ಬಿಜೆಪಿಯವರು ಸತ್ಯಕ್ಕೆ ಜಯ, ಕಾಂಗ್ರೆಸ್ ಗೆ ಮುಖಭಂಗ ಅಂತೆಲ್ಲ ಹೇಳುತ್ತಿದ್ದಾರೆ. ಮುಖಭಂಗ ಯಾಕಾಗುತ್ತದೆ? ಎಫ್ ಎಸ್ ಎಲ್ ವರದಿ ಬರಲಿ ಆಮೇಲೆ ನೋಡೋಣ. ಕಾನೂನು ಕೇವಲ ಬಿಜೆಪಿಯವರಿಗೆ ಮಾತ್ರ ಗೊತ್ತಿಲ್ಲ ನಮಗೂ ಗೊತ್ತಿದೆ, ಎಂದರು.
ಕಲಬುರಗಿ ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಪರಿಷತ್ ನಲ್ಲಿ ಒಬ್ಬ ಮಹಿಳೆಗೆ ಅವಮಾನಕರವಾಗಿ ಮಾತನಾಡಿದ್ದಾರೆ ಅವರ ಬೆನ್ನಿಗೆ ಹಲವಾರು ಶಾಸಕರು ನಿಂತಿದ್ದಾರೆ. ಹಾಗೆ ಮಾತನಾಡಿದ್ದು ತಪ್ಪು ಅಂತ ಕೂಡಾ ಹೇಳುತ್ತಿಲ್ಲ ಅಂದರೆ ಎಷ್ಟು ದುರಹಂಕಾರ ಇರಬೇಕು. ಬಿಜೆಪಿಯ ಯಾರಾದರೂ ಒಬ್ಬರು ಖಂಡಿಸಿದ್ದಾರೆಯೇ? ಈ ಪ್ರಕರಣದಿಂದ ಎಲ್ಲರೂ ಒಗ್ಗಾಟ್ಟಾಗಿದ್ದೇವೆ ಎನ್ನುತ್ತಾರೆ. ಅಂದರೆ ಎಲ್ಲರೂ ಹಾಳು ಬುದ್ದಿಯವರೇ, ಒಬ್ಬರೂ ಖಂಡಿಸಿಲ್ಲ ಎಂದರೆ ಎಲ್ಲರೂ ದುಶ್ಯಾಸನರು ಅಲ್ವಾ ? ಜನರ ಮನೆ ಬೆಳಗುವ ಒಂದಾದರೂ ಕೆಲಸ ಅವರು ಮಾಡಿದ್ದಾರೆಯೇ? ಬರೀ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮುಂದುವರೆದ ಅವರು, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡಾ ಘಟನೆ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ರವಿ ಹಾಗೇ ಹೇಳಿದ್ದರೇ, ಕ್ರಮ ಕೈಗೊಳ್ಳುತ್ತೇವೆ ಎನ್ನಲಿಲ್ಲ. ಬದಲಿಗೆ ಬಿಜೆಪಿಯವರು ಬಳೆ ತೊಟ್ಟಿಲ್ಲ ಎಂದಿದ್ದಾರೆ. ಬಳೆ ತೊಟ್ಟವರಿಗೆ ಬಿಜೆಪಿಯವರು ಅವಮಾನ ಮಾಡಿದ್ದಾರಲ್ಲ ? ಅದಕ್ಕೆ ವಿಜಯೇಂದ್ರ ಏನು ಹೇಳುತ್ತಾರೆ. ಪೂಜ್ಯ ಅಪ್ಪಾಜಿಯವರ ಮೇಲೆಯೇ ಪೋಕ್ಸೋ ಅಡಿಯಲ್ಲಿ ಕೇಸು ದಾಖಲಾಗಿರುವಾಗ ಅವರು ಏನು ಹೇಳುತ್ತಾರೆ? ಮುನಿರತ್ನ ವಿಚಾರದಲ್ಲಿ ಒಂದು ನೋಟಿಸು ಕೂಡಾ ನೀಡಲಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.
ರಾತ್ರಿ ಇಡೀ ರವಿ ಅವರನ್ನು ಸುತ್ತಿಸಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರೋಪಿ ಅರೆಸ್ಟ್ ಆಗಿದ್ದಾನೆ. ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ನಾಯಕರಿಗೇನು ಕೆಲಸ ? ಅವರು ಅಲ್ಲೇಕೆ ಹೋಗಿದ್ದಾರೆ ? ಆರೋಪಿ ಅರೆಸ್ಟ್ ಆದ ಕೂಡಲೇ ಅವರ ಬಾಡಿ ಸರ್ಜ್ ಮಾಡುವುದು ಒಂದು ಪ್ರಕ್ರಿಯೆ ಅದರ ಪ್ರಕಾರ ಪೊಲೀಸರು ಮಾಡಿದ್ದಾರೆ, ಎಂದರು
ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಅವಮಾನ ಮಾಡಿದ್ದಕ್ಕೆ ರವಿಯನ್ನು ಹಾಗೆ ಬಿಟ್ಟಿದ್ದಾರಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಡಿಸಿಎಂ ಹಾಗೇ ಹೇಳೇ ಇಲ್ಲ. ಕಾನೂನು ಕೈಗೆತ್ತಿಕೊಳ್ಳಲು ಡಿಸಿಎಂ ಹೇಳುತ್ತಾರೆಯೇ? ಸಿ.ಟಿ. ರವಿ ಹರಕಲು ಬಾಯಿಯವರು. ಇಂತವರಿಗೆ ಸದನದಲ್ಲಿ ಅವಕಾಶ ಕೊಡಬಾರದು ಎಂದಿದ್ದಾರೆ ಅಷ್ಟೇ ಎಂದರು.
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವ ಬಿಜೆಪಿ ಆರೋಪವನ್ನು ಸಾರಾಸಗಟ ತಳ್ಳಿ ಹಾಕಿದ ಸಚಿವರು,’ ನಾವು ಅಧಿಕಾರಕ್ಕೆ ಬಂದ ಮೇಲೆ ಯಾರ ಆಸ್ತಿ ಪಾಸ್ತಿಗೆ ಏನಾದರೂ ಮಾಡಿ ತೊಂದರೆ ಕೊಟ್ಟಿದ್ದೇವಾ? ಸುಳ್ಳನ್ನು ಸತ್ಯ ಹೇಗೆ ಮಾಡಬೇಕು ಎನ್ನುವುದು ಅವರಿಗೆ ತಿಳಿದಿದೆ. ಅದು ಅವರ ರಾಜಕಾರಣ. ನಮ್ಮದು ಪ್ರಗತಿಪರ ರಾಜಕಾರಣ’ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಗೃಹಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ದೇವರ ಹೆಸರು ಸಾವಿರ ಬಾರಿ ಜಪಿಸಿದರೆ ಏಳು ಜನ್ಮದಲ್ಲಿಯೂ ಸ್ವರ್ಗ ಪ್ರಾಪ್ತಿಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಅವರ ಹೆಸರು ಹೇಳಿದರೆ ಈ ಜನ್ಮದಲ್ಲಿಯೇ ಸ್ವಾಭಿಮಾನದ ಬದುಕು ಸಿಗುತ್ತದೆ ಎಂದರು.
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಚಾ ಕಾರ್ಯಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ…
ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ…
ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ…