ಕಲಬುರಗಿ: ಗುಲ್ಬರ್ಗದ ಬಹಮನಿ ಫೌಂಡೇಶನ್ ಕಿಲಾ ಆಯೋಜಿಸಿದ್ದ 10ನೇ ವರ್ಷದ “ಜಶ್ನ್-ಎ-ರಹಮತುಲ್-ಲಿಲ್-ಅಲಮೀನ್” ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರದಂದು ಗುಲ್ಬರ್ಗಾದ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಅತ್ಯುತ್ತಮ ಆಧ್ಯಾತ್ಮಿಕ, ವಿದ್ವತ್ಪೂರ್ಣ ಮತ್ತು ಶೈಕ್ಷಣಿಕ ಕೊಡುಗೆಗಳಿಗಾಗಿ ಕೆಬಿಎನ್ ವಿಶ್ವ ವಿದ್ಯಾಲ ಯದ ಕುಲಾಧಿಪತಿ ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೇನಿ ಅವರಿಗೆ “ಮಿನಾರ್-ಇ-ಇಲ್ಮ್-ಒ-ನೂರ್” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಯ್ಯದ್ ಮೊಹಮ್ಮದ್ ಅಲಿ ಅಲ್ ಹುಸೈನೀ ಅವರು ಮಾತನಾಡುತ್ತ, “ಪ್ರಶಸ್ತಿ ಯಾವಾಗಲೂ ವ್ಯಕ್ತಿಯ ಸೇವೆಗಳ ಮಾನ್ಯತೆಗೆ ನೀಡುತ್ತವೆ, ಅಲ್ಲದೇ ಇದು ದೇವರ ಒಂದು ಉಡುಗೊರೆಯಂತೆ ಭಾಸವಾಗುತ್ತದೆ,” ಎಂದು ಹೇಳಿದರು.
ಯುವಕರು ಸಮರ್ಥವಾಗಿ ನಿತ್ಯವೂ ಒಂದು ಪುಣ್ಯದ ಕೆಲಸವನ್ನು ಮಾಡಿ, ದೇವರು ಮತ್ತು ಪ್ರವಾದಿಯ ಅನುಗ್ರಹವನ್ನು ಪಡೆಯುವ ಗುರಿ ಇರಲಿ. ಯುವಕರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು” ಎಂದು ಸಲಹೆ ನೀಡಿದರು. ತಮಗೆ ಪ್ರಶಸ್ತಿ ನೀಡಿದ್ದಕ್ಕಾಗಿ ಫೌಂಡೇಶನ್‌ಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿ ಸಜ್ಜಾದ ನಶೀನ್ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿ, ಕ್ರೈಸ್ತ ಧರ್ಮಗುರು ಬಿಷಪ್ ಮಿರಾಂಡಾ, ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ಎಸ್ ದೇಶಮುಖ್, ಗುರುದ್ವಾರ ಗುರುನಾನಕ ಮುಖ್ಯಸ್ಥ ಭಾಯ್ ದೀಪ ಸಿಂಘ, ನಿವೃತ್ತ ಕಮಿಷನರ ಎಕ್ಸಸ್ ವಿಭಾಗ ಅಸದ್ ಅಲಿ ಅನ್ಸಾರಿ ಆಗಮಿಸಿದ್ದರು.
ಖಾಜಿ ರಿಜ್ವಾನೂರ್ ರೆಹಮಾನ್ ಮಶ್ಹೂದ್ ಅವರ ಅಧ್ಯಕ್ಷತೆ ವಹಿಸಿದ್ದರು.ಇದೆ ಸಂದರ್ಭದಲ್ಲಿ ಶಿಕ್ಷಣ ಮತ್ತು ಕಲೆಯಲ್ಲಿ ಅನುಕರಣೀಯ ಸೇವೆ ಸಲ್ಲಿಸಿದ ಪ್ರೊ.ನಿಶಾತ್ ಆರೀಫ್ ಹುಸೇನಿ ಮತ್ತು ಹಿರಿಯ ಕಲಾವಿದ ಬಸವರಾಜ ದೇಸಾಯಿ ಅವರಿಗೆ ಕರ್ನಾಮಾ-ಎ-ಹಯಾತ್ ಪ್ರಶಸ್ತಿ, ಬೀಬಿ ರಜಾ ಪ್ರೌಢಶಾಲೆಗೆ ಉರ್ದು ಎಕ್ಸಲೆನ್ಸ್ ಪ್ರಶಸ್ತಿ,
ಹುಮೈರಾ ಬೇಗಂ ಅವರಿಗೆ ಗುಲ್ಬರ್ಗ ರೈಸಿಂಗ್ ಸ್ಟಾರ್ ಪ್ರಶಸ್ತಿ, ಡಾ.ಶಿವಶಂಕರಪ್ಪ ಕೊಡ್ಲಿ, ಡಾ. ಅಶ್ಫಾಕ್ ಅಹ್ಮದ್, ನುಸ್ರತ್ ಮೊಹಿಯುದ್ದೀನ್, ಡಾ.ಕಮರುಜ್ಜಮಾನ್ ಇನಾಮದಾರ, ಎಂ.ಎಸ್.ಅಸ್ಮಾ ಆಲಂ, ಡಾ.ಶಾಹಿದ್ ಪಾಷಾ, ಮತ್ತು ಮುಬೀನ್ ಅಹ್ಮದ್ ಝಖಮ್ ಇವರೆಲ್ಲರಿಗೆ ಗುಲ್ಬರ್ಗ ಅನ್ಮೋಲ್ ರತ್ನ ಪ್ರಶಸ್ತಿ ಪ್ರಧನಿಸಲಾಯಿತು.
ಮಿನಾರ್-ಎ-ಇಲ್ಮ್-ಒ-ನೂರ್ ಪ್ರಶಸ್ತಿಯನ್ನು ಸೈಯದ್ ಮುಹಮ್ಮದ್ ಅಲಿ ಅಲ್-ಹುಸೇನಿ ಅವರಿಗೆ ಸಮರ್ಪಿಸಲಾಗಿದೆ, ಭವಿಷ್ಯದಲ್ಲಿ ಇತರರಿಗೆ ಪ್ರಸ್ತುತಪಡಿಸುವ ಯಾವುದೇ ಯೋಜನೆಗಳಿಲ್ಲ ಎಂದು ಖ್ವಾಜಾ ಬಂದಾ ನವಾಜ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಥರ್ ಮೊಯಿಜ್ ಅವರು ಪ್ರಶಸ್ತಿಯ ಉಲ್ಲೇಖವನ್ನು ಓದಿದರು.
ಈ ಕಾರ್ಯಕ್ರಮದಲ್ಲಿ ಫೌಂಡೇಶನ್ ಚಟುವಟಿಕೆಗಳ ಕುರಿತು ವರದಿಯನ್ನು ಕಾರ್ಯದರ್ಶಿ ಅಲ್ಲಾವುದ್ದೀನ್ ಮುಹಮ್ಮದ್ ಅಕ್ಬರ್ ಮಂಡಿಸಿದರು. ಖಾಝಿ ರಿಝ್ವಾನುರ್ ರಹ್ಮಾನ್ ಮಶ್ಹೂದ್ ಅವರು ಸ್ವಾಗತಿಸಿದರೆ ಮುಹಮ್ಮದ್ ಯೂಸುಫ್ ಸರ್ಮಸ್ತ್ ಅವರು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಜನರು ಭಾಗವಹಿಸಿದ್ದರು.
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…
ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…
ಕಲಬುರಗಿ: ಹಿರಿಯ ಪತ್ರಕರ್ತರಾದ ಅಜೀಜುಲ್ಲಾ ಸರ್ಮ ಅವರ 47ನೇ ವರ್ಷಗಳ ಉರ್ದು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆ ಹಾಗೂ ಉರ್ದು ಪತ್ರಿಗೆಯಲ್ಲಿನ…