ಬಿಸಿ ಬಿಸಿ ಸುದ್ದಿ

ನಾಳೆ ಶಹಾಬಾದ ಕಸಾಪ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರ ಕುರಿತು ಲೇಖನ

ಶಹಾಬಾದ:ಎಚ್.ಬಿ.ತೀರ್ಥೆ ಅವರ ಪೂರ್ಣ ಹೆಸರು ಹಣಮಂತರಾಯ ಬಸವಂತರಾಯ ತೀರ್ಥೆ.ಇವರು 11-09-1956 ರಂದು ಜನಿಸಿದರು. ಮೂಲತಃ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು.

ಇವರ ತಂದೆ ಬಸವಂತರಾಯ ತೀರ್ಥೆ ಮತ್ತು ತಾಯಿ ಲಕ್ಷ್ಮಿಬಾಯಿ ತೀರ್ಥೆ. ತಂದೆಯವರು ವೃತ್ತಿಯಿಂದ ಆದರ್ಶ ಶಿಕ್ಷಕರಾಗಿದ್ದರು. ಅವರು ಎಲ್ಲಿ ಕಾರ್ಯನಿರ್ವಹಿಸಿದ್ದಾರೆಯೋ ಅಲ್ಲಲ್ಲಿ ಅವರನ್ನು ಬಸವಂತರಾಯ ತೀರ್ಥೆ ಗುರೂಜಿ ಎಂದೇ ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ.

ಬಸವಂತರಾಯ ತೀರ್ಥೆವರಿಗೆ ಮೂವ್ವರು ಸುಪುತ್ರರು, ನಾಲ್ವರು ಸುಪುತ್ರಿಯರು ಇದ್ದಾರೆ. ಅವರ ಹಿರಿಯ ಸುಪುತ್ರರಾದ ಹಣಮಂತರಾವ ತೀರ್ಥೆ, ಅಪ್ಪಾಸಾಹೇಬ ತೀರ್ಥೆ, ತುಕಾರಾಮ ತೀರ್ಥೆ. ಅಲ್ಲದೇ ಸುಶೀಲಾ,ಶಾರದಾ, ರತ್ನಾ,ಪುತಳಾ ಸುಪುತ್ರಿಯರು.

ಸಮ್ಮೇಳನದ ಸವಾಧ್ಯಕ್ಷರಾದ ಹಣಮಂತರಾವ ತೀರ್ಥೆಅವರ ಪತ್ನಿ ಕಲಾವತಿ, ಇಬ್ಬರು ಸುಪುತ್ರರಾದ ಶರಣಕುಮಾರ, ಶಿವಕುಮಾರ ಇಂಜಿನಿಯರ್ ವೃತ್ತಿಯಲ್ಲಿದ್ದಾರೆ. ಸಹೋದರ ಅಪ್ಪಾಸಾಹೇಬ ತೀರ್ಥೆ ಆಳಂದ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಜಿಲ್ಲಾ ಉತ್ತಮ ಶಿಕ್ಷಕ ಪ್ರಶ್ಸತಿಯನ್ನು ಪಡೆದುಕೊಂಡಿದ್ದಾರೆ.ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಹಣಮಂತರಾವ ತೀರ್ಥೆ ಅವರ ಪ್ರಾಥಮಿಕ ಶಿಕ್ಷಣ ಆಳಂದ ತಾಲೂಕಿನ ಪಡಸಾವಳಿಯಲ್ಲಿ 1ನೇ ಯಿಂದ 7ನೇ ತರಗತಿವರೆಗೆ ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತರು. ನಂತರ ಅವರ ತಂದೆ ಕಮಲಾಪೂರದಲ್ಲಿ ಶಿಕ್ಷಕರ ತರಬೇತಿಗೆ ಕಮಲಾಪೂರಕ್ಕೆ ಹೋದ ಸಂದರ್ಭದಲ್ಲಿ ಅವರು ಕೂಡ ಮುಂದಿನ ಪ್ರೌಢಶಿಕ್ಷಣವನ್ನು ಅಲ್ಲಿಯೇ ಮುಗಿಸಿದರು.

ನಂತರ ಕಲಬುರಗಿಯ ಶರಣಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಕಾಮ್ ಪದವಿ ಮುಗಿಸಿದರು. ನಂತರ ಕಲಬುರಗಿ ಜಿಲ್ಲೆ ಶಹಾಬಾದನ ಎ.ಬಿ.ಎಲ್ ಕಾರ್ಖಾನೆಯಲ್ಲಿ ಕ್ಲರ್ಕ್ ಹುದ್ದೆ ದೊರಕಿತು.ಸುಮಾರು 37 ವರ್ಷ ಸೇವೆ ಸಲ್ಲಿಸಿ 2016ರಲ್ಲಿ ನಿವೃತ್ತರಾಗಿದ್ದಾರೆ. ಕಾರ್ಖಾನೆಯಲ್ಲಿ ಯಾವುದೇ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿದ್ದರೇ ಮೊದಲು ಬರುವ ಹೆಸರೇ ತೀರ್ಥೆ.ಅಷ್ಟೊಂದು ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತಿದ್ದರು.

ಎಲ್ಲಾ ಕಾರ್ಯಕ್ರಮಗಳನ್ನು ಅವರೇ ನಡೆಸಿಕೊಂಡು ಹೋಗುತ್ತಿದ್ದರು. ವೃತ್ತಿಯ ಜತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದ ವ್ಯಕ್ತಿ ಅವರಾಗಿದ್ದರು. ಕಾರ್ಖಾನೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದಾರೆ.ಎಸಿಸಿ ಆಲ್ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿ 1500 ಮೀ ಓಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ತೀರ್ಥೆ ಅವರ ಬರಹಗಳು : ತೀರ್ಥೆ ಅವರು ಬರೆದಿದ್ದು ಎರಡು ಕಥಾ ಸಂಕಲನಗಳಾದ “ಹೊಟ್ಟೆ ಬಾಕ ನರಿ” -1998 ಮತ್ತು “ಗಿಜಗನ ಗೂಡು- 2003, ಕನ್ನಡ ಶ್ರೀ, ಪ್ರಗತಿ ಹಾಗೂ ಶಹಾಬಾದ ಬಸವ ಸಮಿತಿ ನಡೆದು ಬಂದ ದಾರಿ ಎಂಬ ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ.ಅಲ್ಲದೇ ಕಥೆಗಳು-25, ಕವನಗಳು-50,ಮಕ್ಕಳ ಕಥೆಗಳು-50, ಹಾಸ್ಯ ಲೇಖನಗಳು-15,ಮಕ್ಕಳ ಕವನಗಳು-40, ವೈಚಾರಿಖ ಲೇಖನಗಳು-15 ಬರೆದಿದ್ದಾರೆ. ರಾಜ್ಯದ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಖ್ತ ಕರ್ನಾಟಕ, ಕನ್ನಡ ಪ್ರಭ, ಸುಧಾ, ಮಯೂರ, ವಿಜಯ ಕರ್ನಾಟಕ, ಕರ್ಮವೀರ, ಪ್ರಜಾಮತ, ಮಲ್ಲಿಗೆ, ಶಾಸನ, ಗ್ರಿನೋಬಲ್ಸ, ಸತ್ಯಕಾಮ ಹಾಗೂ ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಅಕಾಡೆಮಿ ಹೊರತರುವ ಆಯಾ ವಾರ್ಷಿಕ ಪತ್ರಿಕೆಗಳಲ್ಲಿ 3 ಕಥೆಗಳು ಆಯ್ಕೆಯಾಗಿವೆ.

ಕಲಬುರಗಿ ಜಿಲ್ಲಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಸಣ್ಣ ಕಥಾ ಸ್ಪರ್ಧೆಯಲ್ಲಿ ನೆಮ್ಮದಿ ಕಥೆಗೆ ಪ್ರಥಮ ಬಹುಮಾನ ಲಭಿಸಿದೆ. ಸೋಲಾಪೂರದಿಂದ ಹೊರಬರುತ್ತಿದ್ದ ಸಂಕೀರ್ಣ ಪತ್ರಿಕೆಯವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಬಲಿ ಕಥೆಗೆ ದ್ವಿತೀಯ ಬಹುಮಾನ ಪಡೆದಿದೆ.

ಪ್ರಶಸ್ತಿಗಳು : ಶಹಾಬಾದ ಲಾಂiÀi ನ್ಸ್ ಸಂಸ್ಥೆಯಿಂದ ಅತ್ಯುತ್ತಮಪತ್ರಕರ್ತ ಪ್ರಶಸ್ತಿ, ಯಾದಗಿರಿ ಜಿಲ್ಲೆಯ ಹಣಸಗಿಯ ಮಕ್ಕಳ ಕಲರವ ಟ್ರಸ್ಟ್ ವತಿಯಿಂದ ಮಕ್ಕಳ ಕಲರವ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ.ವಿಶೇಷವಾಗಿ ತೀರ್ಥೆ ಅವರು ಆಡು ಮುಟ್ಟದ ಸೊಪಿಲ್ಲ ಅವರೂ ಮಾಡದ ಕೆಲಸವಿಲ್ಲ ಎಂಬಂತೆ ಯೋಗ ಶಿಕ್ಷಕರಾಗಿ ಕನ್ನಡ ಗೆಳೆಯರ ಬಳಗ ಕಾರ್ಯದರ್ಶಿಯಾಗಿ, ಜವಾಹರ್ ತರುಣ ಸಂಘದ ಕಾರ್ಯದರ್ಶಿಯಾಗಿ, ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ,ಚಿತ್ತಾಪೂರ ಪತ್ರಕರ್ತ ಸಂಘದ ಕಾರ್ಯದರ್ಶಿಯಾಗಿ, ಬಸವ ಸಮಿತಿ ಶಾಲೆಯ ಕಾರ್ಯದರ್ಶಿಯಾಗಿ, ಕಸಾಪ ಸಲಹೆಗಾರರಾಗಿ, ಗಣೇಶ ಉತ್ಸವ ಮಂಡಳಿಯ ಕಾರ್ಯದರ್ಶಿಯಾಗಿ,ದಸರಾ ಉತ್ಸವ ಕಮಿಟಿಯ ಕಾರ್ಯದರ್ಶಿಯಾಗಿ, ನಿರೂಪಕರಾಗಿ, ಮಾರ್ಗದರ್ಶಕರಾಗಿ, ಪ್ರವಾಚಕರಾಗಿ, ಸಂಘಟನೆಗಾರರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದಲೇ ಶಹಾಬಾದ ಕಸಾಪ ಹಾಗೂ ಕನ್ನಡಪರ ಅಭಿಮಾನಿ ಬಳಗ ಅವರನ್ನು ಶಹಾಬಾದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸ.

emedialine

Recent Posts

ಬಸವಸೇವಾ ಪ್ರತಿಷ್ಠಾನದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…

18 hours ago

ಬಸವಸೇವಾ ಪ್ರತಿಷ್ಠಾನದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್  ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…

20 hours ago

ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಶ್ರೀಮತಿ ಜ್ಯೋತಿ ಅವಿನಾಶ ಉಪಳಾಂವಕರ ಅವರಿಗೆ  ಅಭಿನಂದನೆ

ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ…

2 days ago

ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಸ್ಮರಣಾರ್ಥ ಬೆಸ್ಟ್ ಪೊಲೀಸ್ ಪ್ರಶಸ್ತಿ ಸನ್ಮಾನ ಸಮಾರಂಭ

ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…

2 days ago

ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಸ್ಮರಣಾರ್ಥ ಬೆಸ್ಟ್ ಪೊಲೀಸ್ ಪ್ರಶಸ್ತಿ ಸನ್ಮಾನ ಸಮಾರಂಭ

ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…

2 days ago

ಉರ್ದು ಹಿರಿಯ ಪತ್ರಕರ್ತ ಸರ್ಮಸ್ತ್ ಸೇವೆ ಶ್ಲಾಘನೀಯ: ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ಹಿರಿಯ ಪತ್ರಕರ್ತರಾದ ಅಜೀಜುಲ್ಲಾ ಸರ್ಮ ಅವರ 47ನೇ ವರ್ಷಗಳ ಉರ್ದು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆ ಹಾಗೂ ಉರ್ದು ಪತ್ರಿಗೆಯಲ್ಲಿನ…

2 days ago