ಕಲಬುರಗಿ: ಜೇವರ್ಗಿಯ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಶಿವಲಿಂಗಪ್ಪ ಮಯೂರ ಅವರ ಕೊಲೆಗೆ ನಾನು ಕಾರಣವೆಂಬಂತೆ ಬಿಂಬಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ ನನಗೂ ಆ ಕೊಲೆಗೂ ಸಂಬಂಧವೇ ಇಲ್ಲ. ಕೊಲೆ ಮಾಡಿದ ಆರೋಪಿಗಳು ನನ್ನ ಸಂಬಂಧಿಕರು ಎನ್ನುವ ಒಂದೇ ಕಾರಣಕ್ಕೆ ನನ್ನ ಹೆಸರು ತಳಕು ಹಾಕಲಾಗುತ್ತಿದೆ ಎಂದು ಇಜೇರಿ ಜಿಲ್ಲಾ ಪಂಚಾಯಿತಿ ಸದಸ್ಶ ಶಾಂತಪ್ಪ ಚಂದ್ರಶಾ ಕೂಡಲಗಿ ಹೇಳಿದ್ದಾರೆ.
ಅಜ್ಞಾತ ಸ್ಥಳದಿಂದ ಗುರುವಾರ ತಮ್ಮ ವಿರುದ್ಧದ ಆರೋಪದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬೆಳವಣಿಗೆಯನ್ನು ಸಹಿಸದೆ ಈ ರೀತಿಯಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಮಯೂರ ಗ್ರಾಮದ ರವಿ ಹೊಸಮನಿ ಎಂಬುವರಿಗೆ ನಾನು 50 ಲಕ್ಷದ ಸಿ.ಸಿ ರಸ್ತೆಯ ಟೆಂಡರ್ ಕೆಲಸ ಮಾಡಿಸಿಕೊಟ್ಟಿದ್ದೆ. ರವಿ ಸಿ.ಸಿ ರಸ್ತೆ ಮಾಡಿದ ನಂತರ ಶಿವಲಿಂಗಪ್ಪ ಮಯೂರ ಅವರ ಸಹೋದರರು ಆ ಸಿ.ಸಿ ರಸ್ತೆಯನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿದ್ದರಂತೆ.
ತಾನು ಸಿ.ಸಿ ರಸ್ತೆಗೆ ಹಾಕಿದ್ದ 50 ಲಕ್ಷ ರೂ. ಲಾಸ್ ಆಯ್ತಲ್ಲ ಎನ್ನುವ ಸಿಟ್ಟು ರವಿ ಮಯೂರ ಅವರಿಗೆ ಇದ್ದಿದ್ದರಿಂದ ಕೊಲೆ ಮಾಡಿರಬಹುದು. ಮ್ರತ ಶಿವಲಿಂಗಪ್ಪ ಮಯೂರ ಅವರ ಸಹೋದರರು ರವಿ ಹೊಸಮನಿ ಅವರ ಕುಟುಂಬಕ್ಕೆ ಊರು ಬಿಡಿಸಿದ್ದರು ಎನ್ನುವ ಆರೋಪವಿತ್ತು. ಇಂತಹ ವಿಷಯಗಳನ್ನು ಇಟ್ಟುಕೊಂಡು ರವಿ ಹೊಸಮನಿ ಅವರು ಶಿವಲಿಂಗಪ್ಪ ಅವರನ್ನು ಕೊಲೆ ಮಾಡಿರಬಹುದು. ಆದರೆ ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ. ವಿನಹ ಕಾರಣ ನನ್ನ ಹೆಸರನ್ನು ಆ ಘಟನೆಯ ಜೊತೆಗೆ ಸೇರಿಸಲಾಗಿದೆ ಎಂದಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…