ರಾಜಕೀಯವಾಗಿ ನನ್ನನ್ನು ಮುಗಿಸಲು ವಿರೋಧಿಗಳು ಕೊಲೆ ಆರೋಪ ಮಾಡುತ್ತಿದ್ದಾರೆ: ಜಿಪಂ ಸದಸ್ಶ ಶಾಂತಪ್ಪ ಕೂಡಲಗಿ ಹೇಳಿಕೆ

0
1501

ಕಲಬುರಗಿ: ಜೇವರ್ಗಿಯ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಶಿವಲಿಂಗಪ್ಪ ಮಯೂರ ಅವರ ಕೊಲೆಗೆ ನಾನು ಕಾರಣವೆಂಬಂತೆ ಬಿಂಬಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ ನನಗೂ ಆ ಕೊಲೆಗೂ ಸಂಬಂಧವೇ ಇಲ್ಲ. ಕೊಲೆ ಮಾಡಿದ ಆರೋಪಿಗಳು ನನ್ನ ಸಂಬಂಧಿಕರು ಎನ್ನುವ ಒಂದೇ ಕಾರಣಕ್ಕೆ ನನ್ನ ಹೆಸರು ತಳಕು ಹಾಕಲಾಗುತ್ತಿದೆ ಎಂದು ಇಜೇರಿ ಜಿಲ್ಲಾ ಪಂಚಾಯಿತಿ ಸದಸ್ಶ ಶಾಂತಪ್ಪ ಚಂದ್ರಶಾ ಕೂಡಲಗಿ ಹೇಳಿದ್ದಾರೆ.

ಅಜ್ಞಾತ ಸ್ಥಳದಿಂದ ಗುರುವಾರ ತಮ್ಮ ವಿರುದ್ಧದ ಆರೋಪದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬೆಳವಣಿಗೆಯನ್ನು ಸಹಿಸದೆ ಈ ರೀತಿಯಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಮಯೂರ ಗ್ರಾಮದ ರವಿ ಹೊಸಮನಿ ಎಂಬುವರಿಗೆ ನಾನು 50 ಲಕ್ಷದ ಸಿ.ಸಿ ರಸ್ತೆಯ ಟೆಂಡರ್ ಕೆಲಸ ಮಾಡಿಸಿಕೊಟ್ಟಿದ್ದೆ. ರವಿ ಸಿ.ಸಿ ರಸ್ತೆ ಮಾಡಿದ ನಂತರ ಶಿವಲಿಂಗಪ್ಪ ಮಯೂರ ಅವರ ಸಹೋದರರು ಆ ಸಿ.ಸಿ ರಸ್ತೆಯನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿದ್ದರಂತೆ.

Contact Your\'s Advertisement; 9902492681

ಮಯೂರ ಗ್ರಾಮದಲ್ಲಿ ರವಿ ಹೊಸಮನಿ ಮಾಡಿದ ಸಿ.ಸಿ ರಸ್ತೆಯನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿರುವುದು.

ತಾನು ಸಿ.ಸಿ ರಸ್ತೆಗೆ ಹಾಕಿದ್ದ 50 ಲಕ್ಷ ರೂ. ಲಾಸ್ ಆಯ್ತಲ್ಲ ಎನ್ನುವ ಸಿಟ್ಟು ರವಿ ಮಯೂರ ಅವರಿಗೆ ಇದ್ದಿದ್ದರಿಂದ ಕೊಲೆ ಮಾಡಿರಬಹುದು. ಮ್ರತ ಶಿವಲಿಂಗಪ್ಪ ಮಯೂರ ಅವರ ಸಹೋದರರು ರವಿ ಹೊಸಮನಿ ಅವರ ಕುಟುಂಬಕ್ಕೆ ಊರು ಬಿಡಿಸಿದ್ದರು ಎನ್ನುವ ಆರೋಪವಿತ್ತು. ಇಂತಹ ವಿಷಯಗಳನ್ನು ಇಟ್ಟುಕೊಂಡು ರವಿ ಹೊಸಮನಿ ಅವರು ಶಿವಲಿಂಗಪ್ಪ ಅವರನ್ನು ಕೊಲೆ ಮಾಡಿರಬಹುದು. ಆದರೆ ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ. ವಿನಹ ಕಾರಣ ನನ್ನ ಹೆಸರನ್ನು ಆ ಘಟನೆಯ ಜೊತೆಗೆ ಸೇರಿಸಲಾಗಿದೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here