ಬಿಸಿ ಬಿಸಿ ಸುದ್ದಿ

ಭುವಿಗೆ ಬಂದ “ಸ್ತ್ರೀ ಕುಲೋದ್ಧಾರಕ” ಚೈತನ್ಯ

ನಮ್ಮಲ್ಲಿ ಎರಡು ಕ್ಷೇತ್ರಗಳನ್ನು ವಿಶ್ವದ ಅತ್ಯಂತ ಸುಂದರ ತಾಣಗಳು, ರಮಣೀಯ ತಾಣಗಳು ಎಂದು ಗುರುತಿಸುತ್ತೇವೆ. ಒಂದು ಭಾರತದ ಉತ್ತರದಲ್ಲಿರುವ ಭೂಸ್ವರ್ಗವೆಂದು ಕರೆಯಲಾಗುವ ಕಾಶ್ಮೀರ. ಇನ್ನೊಂದು ಭಾರತದ ದಕ್ಷಿಣದ ಶಿವಮೊಗ್ಗೆ. ನಿಸರ್ಗದ ಮಡಿಲಿನ ಅಲ್ಲಿನ ಉಡುತಡಿ ಗ್ರಾಮದಲ್ಲಿ ಲಿಂಗಮ್ಮ ಹಾಗೂ ಓಂಕಾರ ದಂಪತಿಗಳಾಗಿದ್ದರು. ಅವರು ವ್ಯಾಪಾರಸ್ಥರಾಗಿದ್ದರು. ಮನೆಯೆಲ್ಲ ದವಸ ಧಾನ್ಯಗಳಿಂದ, ಮೈಯೆಲ್ಲ ಒಡೆವೆಗಳಿಂದ, ಮನೆ ತುಂಬ ಅನ್ನ ತುಂಬಿದ್ದರೂ ಅವ್ವಾ ಎನ್ನುವ ಮಗುವಿಲ್ಲದ ಕಾರಣ ಲಿಂಗಮ್ಮ ಸದಾಕಾಲ ಚಿಂತಾಕ್ರಾಂತಳಾಗಿದ್ದಳು.

ಆ ಚರ ಜಂಗಮರ ಮೂಲಕ ಬಸವಣ್ಣ, ವಚನ, ಅನುಭವ ಮಂಟಪದ ವೈಭವ ತಿಳಿದು ಅವರಿಗೆ ಹಣೆ ಮಣಿದ ದಂಪತಿಗಳು ತಮ್ಮ ಮಠದಲ್ಲಿಯೂ ಅನುಭವ ಮಂಟಪ ನಡೆಯಬೇಕು ಎಂದು ತಿಳಿಸುತ್ತಾರೆ. ಆಗ ಆ ಚರ ಜಂಗಮರು, ಬಸವಣ್ಣ ಕರುಣಿಸಿದ ಇಷ್ಟಲಿಂಗ, ಅವರು ಕೊಟ್ಟ ಲಿಂಗಾಯತವೆಂಬ ಪ್ರತಿವ್ರತಾ ಧರ್ಮ ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತಾರೆ. ಶರಣರ ವಚನಗಳಿಂದ, ತತ್ವದ ವಿಚಾರಗಳಿಂದ ಪ್ರಭಾವಿತರಾದ ದಂಪತಿ, ತಮ್ಮ ಕುಲಗುರು ಲಿಂಗ ದೇವರು ಕೂಡ ಬಸವಣ್ಣವರಿಂದ ಅನುಗ್ರಹಿತರಾಗಿ ಬಂದಿದ್ದಾರೆ. ತಾವು ಕೂಡ ಗುರುಗಳಿಂದ ಲಿಂಗದೀಕ್ಷೆ ಪಡೆದುಕೊಳ್ಳುತ್ತಾರೆ. ಆಗ ಗುರುಗಳು, ಅಂಗದ ಮೇಲೆ ಲಿಂಗ ಬಂದ ಬಳಿಕ ಅನ್ಯ ದೈವಗಳತ್ತ, ಮೂರ್ತಿಗಳತ್ತ ನೋಡಿದರೆ ವ್ಯಭಿಚಾರವಾಗುತ್ತದೆ. “ಹಾಡಿದೊಡೆ ಎನ್ನೊಡೆಯನ ಹಾಡುವೆ, ಬೇಡಿದೊಡೆ ಎನ್ನೊಡೆಯನ ಬೇಡುವೆ”, ಬಸವಣ್ಣನೆ ತಂದೆ, ಬಸವಣ್ಣನೆ ತಾಯಿ ಎನ್ನುವಂತೆ ಬದುಕು ಸಾಗಿಸಬೇಕು ಎಂದು ಆಜ್ಞೆ ವಿಧಿಸುತ್ತಾರೆ.

ಅಂತೆಯೇ ಪ್ರತಿ ದಿನ ತ್ರಿಕಾಲ ಪೂಜೆ, ಧ್ಯಾನಗಳಲ್ಲಿ ತೊಡಗುತ್ತಾಳೆ. ಒಮ್ಮೆ ಗುರುಲಿಂಗ ದೇವರ ಧ್ಯಾನಾಸಕ್ತರಾಗಿ ಕುಳಿತಿದ್ದಾಗ ಅವರ ಎದುರು ಮಂಡಿಯೂರಿ ಕುಳಿತ ಲಿಂಗಮ್ಮನಿಗೆ, ಗುರುಗಳ ಮುಡಿಯಿಂದ ತನ್ನ ಉಡಿಗೆ ಬಿದ್ದ ಆ ಹೂ ಮಗುವಾಗಿ ಅಂಬೆಗಾಲಿಡುವುದು ಗೋಚರಿಸುತ್ತದೆ. ಮತ್ತೆ ಅದು ಅವರೆಡೆಗೆ ಹೋಗುವುದು ಕಂಡು ದುಃಖಿತಳಾಗುತ್ತಾಳೆ. ಇದನ್ನು ಕಂಡ ಗುರುಗಳು, ಮಗು ಹುಟ್ಟದೆ ಎನ್ನುವುದಕ್ಕೆ ಸಂತಸಪಡಬೇಕು ಹೊರತು ದುಃಖಪಡಬಾರದು.

ಕಾಮಿಸಿಲ್ಲದೆ ಕೊಡದು ಕಾಮಧೇನು
ಕಲ್ಪಿಸಿದಲ್ಲದೆ ಕೊಡದು ಕಲ್ಪವೃಕ್ಷ
ಚಿಂತಿಸಿದಲ್ಲದೆ ಕೊಡದು ಚಿಂತಾಮಣಿ
ಭಾವಿಸಿದಲ್ಲದೆ ಕೊಡನು ಶಿವನು
ಕಾಮಿಸದೆ ಕಲ್ಪಿಸದೆ, ಚಿಂತಿಸದೆ ಭಾವಿಸದೆ
ಕೊಡಬಲ್ಲರು ಕೂಡಲಚೆನ್ನಸಂಗ

ಎಂದು ಚೆನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳಿಲ್ಲವೇ? ಗುರುವಿಲ್ಲದವರಿಗೆ ಗುರಿ ಇರುವುದಿಲ್ಲ. ಬಸವಣ್ಣನಂಥ ಗುರುವನ್ನು ಪಡೆದವರು ಗುರಿ ಹೊಂದಿರುತ್ತಾರೆ. ಲಿಂಗ ಪೂಜಿಸಿ ಲಿಂಗವಾಗಬೇಕು. ಶಿವಪಥ ಅರಿಯಲು ಗುರುಪಥವೆ ಮೊದಲು. ಗುರು ತಾಯಿ ಇದ್ದಂತೆ; ದೇವರು ತಂದೆ ಇದ್ದಂತೆ! ಅಂತಹ ಗುರುವನ್ನು ಪಡೆಯದವರು ದಿಕ್ಕೆಟ್ಟು ಹೋಗುತ್ತಾರೆ. ನಾವೆಲ್ಲ ಒಂದು ರೀತಿಯಲ್ಲಿ ದಿಕ್ಕು ದೆಸೆಗೆಟ್ಟ ಮನುಜರು. ಜೀವಕೋಶದ ಶಕ್ತಿ ಇರುವವರೆಗೆ ತಿರುಗುವ ನಾವು ಒಂದೊಮ್ಮೆ ತಿರುಗುವುದನ್ನು ನಿಲ್ಲಿಸುತ್ತೇವೆ. ಈ ಹಿಂದೆ ನಾನು ಕಲ್ಯಾಣದಲ್ಲಿದ್ದಾಗ ಶರಣರು, “ನಿಮ್ಮೂರಲ್ಲಿ ಚಿತ್ಕಳೆ ಹುಟ್ಟುತ್ತದೆ ಎಂದು ಹೇಳಿದ್ದ ನೆನಪು. ಅದೀಗ ನನಸಾಗುತ್ತಿರಬಹುದು ಎಂಬುದನ್ನು ನೆನಪಿಸಿಕೊಂಡು ಲಿಂಗಮ್ಮನನ್ನು ಸಂತೈಸುತ್ತಾರೆ.

ಚರಜಂಗಮರಿಂದ, ಗುರುಲಿಂಗದೇವರಿಂದ ತನ್ನ ತನು,ಮನ,ಭಾವ ಶುದ್ಧಗೊಳಿಸಿಕೊಂಡ ಲಿಂಗಮ್ಮ, ಸದಾಕಾಲ ಇಷ್ಟಲಿಂಗ ಪೂಜೆಯಲ್ಲಿಯೇ ನಿರತಳಾಗುಳಾತ್ತಾಳೆ, ಬಸವಣ್ಣನನ್ನು ಕನವರಿಸುತ್ತಾಳೆ. ಕಲ್ಯಾಣದ ಶರಣರ ಕನಸು ಕಾಣುತ್ತಾಳೆ. ಇಷ್ಟಲಿಂಗ ಪೂಜೆಯೇ ಗರ್ಭಿಣಿಯ ಬಯಕೆ ಎನ್ನುವಂತೆ ಸದಾ ಪೂಜೆ, ಪ್ರಾರ್ಥನೆಯಲ್ಲಿ ತೊಡಗುತ್ತಾಳೆ. ಈ ಲಿಂಗಪೂಜೆಯ ಫಲದಿಂದಾಗಿ ಕೊನೆಗೊಮ್ಮೆ ಗರ್ಭ ಕಟ್ಟುತ್ತದೆ. ಆಗ ಲಿಂಗಮ್ಮ, ಬದುಕಿನಲ್ಲಿ ಸಂಕಟಗಳೇ ಇಲ್ಲ ಎನ್ನುವಂತೆ ಅತ್ಯಂತ ಗೆಲುವಾಗಿ ಕಂಡು ಬರುತ್ತಾಳೆ. ಗರ್ಭಸ್ಥ ಶಿಶುವಿರುವಾಗಲೇ ಶಿಕ್ಷಣ ಕೊಡಬೇಕು ಎನ್ನುವ ಲಿಂಗಾಯತ ಧರ್ಮದ ತತ್ವದಂತೆ ೮ನೇ ತಿಂಗಳಿಗೆ ಆಕೆಯ ಗರ್ಭಕ್ಕೆ ಲಿಂಗಧಾರಣೆ ಮಾಡಲಾಗುತ್ತದೆ.

ಅದು ಆ ವರ್ಷದ ದವನದ ಹುಣ್ಣಿಮೆಯ ದಿನ. ನಭದಲ್ಲಿ ಚಂದ್ರ ಹೊಳೆಯುತ್ತಿದ್ದ. ಇತ್ತ ಲಿಂಗಮ್ಮನ ಉದರದಲ್ಲಿ ಚಂದ್ರಮುಖಿ ಕೂಡ ಉದಯಿಸಿದಳು. ಬಟ್ಟಲು ಕಣ್ಣಿನ ಆ ಚಲುವೆ, ನಿಜಕ್ಕೂ ಕಾರಣಿಕ ಪುರುಷನಂತೆ ಕಂಡು ಬಂದಳು.

(ಸ್ಥಳ: ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆ ಎದುರಿಗೆ, ಖೂಬಾ ಪ್ಲಾಟ್, ಕಲಬುರಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

10 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

11 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago