ಕಲಬುರಗಿಯ ರಾಜಕೀಯ, ಸಮಾಜಿಕ ಧುರೀಣರಾದ ಅತ್ಯಂತ ಸಿದಾ-ಸಾದಾ, ಸರಳ, ಸಜ್ಜನ ವ್ಯಕ್ತಿ, ಏಳು ಅಡಿ ಎತ್ತರ, ಗೋಧಿ ಬಣ್ಣ, ಬಿಳಿ ಬಣ್ಣದ ಬಟ್ಟೆ , ಹೆಗಲು ಮೇಲೆ ಒಂದು ಟವೆಲ್ ಹಾಕಿಕೊಂಡು, ಹಣೆಯ ಮೇಲೆ ವಿಭೂತಿ, ಬಿಳಿಯ ಕಾರಿನ ನಂಬರ್ ಒಂದು,1,1,1,1 ನಲ್ಲಿ ಬರುವರು. ಎಲ್ಲಾ ಜನರು ನಮ್ಮ ಗೌಡರು ಬಂದರು ಎನ್ನುವ ಶಬ್ದಗಳು ಕೇಳುವ ಜನರ ಮಧ್ಯೆ 24×7 ಸಮಯ, 365 ದಿನಗಳು, ನಿತ್ಯ ನಿರಂತರ ಜನಸಾಮಾನ್ಯರ ಸೇವೆ ಮಾಡುವರು.
ನಮ್ಮ ಗೌಡರು, ಅಲ್ಲಮಪ್ರಭು ಪಾಟೀಲ ನೆಲೋಗಿ ಅವರು. ಇವರು ನಿತ್ಯ ನಿರಂತರ ಹೋರಾಟ, ಸಮಸ್ಯೆ, ಪರಿಹಾರ, ಜನರ ನಡುವೆ ಕೆಲಸ ಮಾಡುವ ಮೃದು ಮನಸ್ಸಿನ, ನೇರ, ದಿಟ್ಟ ಮಾತುಗಳ ಜೊತೆಗೆ, ಮಾತೃ ಹೃದಯದ ನಮ್ಮ ಗೌಡರು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ರೈತ ನಾಯಕರು ಮಾನ್ಯ ಅಲ್ಲಮಪ್ರಭು ಪಾಟೀಲ ಜೀ ಅವರು. ಅಂದಿನ ಕಾಲದಲ್ಲಿ ಅಜಾತಶತ್ರು ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರು ಇವರಿಗೆ ರಾಜಕೀಯ ಗುರುಗಳು ಮತ್ತು ಅವರ ಗರಡಿಯಲ್ಲಿ ಬೆಳೆದ ರಾಜಕೀಯ ವ್ಯಕ್ತಿ ಅಲ್ಲಮಪ್ರಭು ಪಾಟೀಲ ನೆಲೋಗಿ ಅವರು. ಕಾಂಗ್ರೆಸ್ ಪಕ್ಷದಲ್ಲಿ ಮಂಡಲ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಮತ್ತು ವಿಧಾನ ಪರಿಷತ್ ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕಾಂಗ್ರೆಸ್ ಪಕ್ಷದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು.
ನಮ್ಮ ಗೌಡರು. ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಕೇಂದ್ರ ಸಚಿವರು, ಹಿರಿಯರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ, ಕೆಪಿಸಿಸಿ, ಅಧ್ಯಕ್ಷರು ದಿನೇಶ ಗುಂಡುರಾವ, ಕೆಪಿಸಿಸಿ ಕಾಯ೯ಧ್ಯಕ್ಷರು, ಈಶ್ವರ ಖಂಡ್ರೆ, ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಚಿರಪರಿಚಿತರು. ಇಡೀ ಕಲಬುರಗಿ ಜಿಲ್ಲೆಯ ಜನರು ಶ್ರೀ ಅಲ್ಲಮಪ್ರಭು ಪಾಟೀಲ ನೆಲೋಗಿ ಅವರಿಗೆ ಜನಸಾಮಾನ್ಯರ ಗುರುತಿಸಿ ಮಾತನಾಡುತ್ತಾರೆ. ನಾಳೆ 5, ರಂದು ಅವರ 64 ನೇಯ ಹುಟ್ಟು ಹಬ್ಬದ ಶುಭಾಶಯಗಳು.
ಬಿ.ಎಂ.ಪಾಟೀಲ ಕಲ್ಲೂರ,
9845268676.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…