ಸುರಪುರ: ಪ್ರತಿ ವರ್ಷದಂತೆ ಈ ವರ್ಷವು ರುಕ್ಮಾಪುರದ ಆರಾಧ್ಯ ದೈವವಾದ ಶ್ರೀ ಕೊಟ್ಟೂರು ಬಸವೇಶ್ವರರ ಐದು ದಿನಗಳ ಜಾತ್ರಾ ಮಹೋತ್ಸವವು ಇಂದಿನಿಂದ (೧೦-೦೯-೨೦೧೯) ಐದು ದಿನಗಳ ಕಾಲ ನಡೆಯಲಿದೆ ಎಂದು ಎಲ್ಲಾ ಕಾರ್ಯಕ್ರಮದ ಸಾನಿಧ್ಯವಹಿಸಲಿರುವ ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ದಿನಾಂಕ ೧೦ರ ಮಂಗಳವಾರ ಹುಚ್ಚಯೋತ್ಸವ ಹಾಗು ೧೧ರ ಬುಧವಾರ ರಾತ್ರಿ ಪುರವಂತರ ಹಾಗು ಪಲ್ಲಕ್ಕಿ ಸೇವೆ,೧೨ರ ಗುರುವಾರ ಬೆಳಿಗ್ಗೆ ಅಭಿಷೇಕ ಪೂಜೆ ಹಾಗು ಬಿಲ್ವಾರ್ಚನೆ,೧೪ ರಂದು ಸಾಯಂಕಾಲ ಉಚ್ಚಯೋತ್ಸವ ಮತ್ತು ೧೬ರಂದು ಸೋಮವಾರ ಸಾಯಂಕಾಲ ಕಳಾಸಾರೋಹಣ ಮಹಾಮಂಗಲ ಕಾರ್ಯಕ್ರಮ ಜರುಗುವವು.ಈ ಎಲ್ಲಾ ಕಾರ್ಯಕ್ರಮದ ನೇತೃತ್ವವನ್ನು ಗ್ರಾಮದ ಪ್ರಮುಖರಾದ ಹನುಮಗೌಡ ಪೊಲೀಸ್ ಪಾಟೀಲ್ ದಳಪತಿ,ಮುದಕಪ್ಪಗೌಡ,ಶಿವು ಸಾಹುಕಾರ,ಸಂಗಣ್ಣ ಮಿಣಜಗಿ,ಮಾನಯ್ಯಗೌಡ,ಸಂಗಣ್ಣ ಸಿರಗೊಳ ಹಾಗು ರುಕ್ಮಾಪುರ ಗ್ರಾಮಸ್ಥರು ಸೇರಿ ವೆಜೃಂಭಣೆಯಿಂದ ಆಚರಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…